Saturday, April 28, 2012

|| ಮುಂಜಾವು ||

ಕಿರಣನು ಜಗದ ಅಧಿಕಾರಿಯಾಗಲು
ಬಿಳಿಮುಗಿಲ ಹಿಂದೆ ಅಂಬೆಗಾಲಿಡುತಿಹನು
ನೇಸರನ ನೋಡುತ್ತ ತಾವರೆಯು ಆರಳುತ್ತ
ಬಾನಾಡಿಗಳ ಹಿಮ್ಮೇಳಕೆ ನರ್ತಿಸುತಿಹುದು ||

ನೈದಿಲೆಯು ಬಿಕ್ಕಳಿಸುತ ಬೆಳಕಿನಲಿ
ಬಾಷ್ಪವನು ಸುರಿಸುತಿಹುದು
ಆ ಕಂಬನಿಯೇ ಇಬ್ಬನಿಯಾಗಿ
ಮರಗಳ ಮೇಲಿಂದ ಬೀಳುತಿಹುದು ||

ಅರಿಶಿನ,ಕುಂಕುಮವ ತನ್ನ ಮೊಗದ ಸಿರಿಯಾಗಿ
ಹಚ್ಚಿಕೊಂಡು ಬಾನಿಗೆ ಬಂದನು ಭಾಸ್ಕರನು
ತಿನಿಸನ್ನು ತಿನ್ನುತ್ತ ಹಸಿವನ್ನು ನೀಗಿಸುತ
ಹೂವಿನ ಮಕರಂದ ಹೀರುತಲಿ ದುಂಬಿಗಳು ಹಾರುತಿವೆ ||

ಬೆಳ್ಳು ಮೂಡಿರುವುದನ್ನು ನೋಡಿ ಕೋಳಿ ಕೂಗಿರುವುದನ್ನು ಕೇಳಿ
ಸುಪ್ರಭಾತದಂತೆ ತನ್ನೊಡೆಯನನ್ನು ಹಸುವು ಕರೆಯುತಿದೆ
ರಿಂಗಣದ ಸದ್ದನು ಕೇಳಿ ಜಗವೆಲ್ಲ ಎಳುತ್ತ
ದಿನದ ಕಾರ್ಯವ ಮಾಡಲು ಅಣಿಯಾಗುತಿದೆ ||

ಖುಷಿನೀಡುವ ಮುಂಜಾವಿನ ತಂಪಿನಲಿ
ಪ್ರಕೃತಿಯು ವಿಸ್ಮಯವ ತೋರುತ್ತ
ಉಷೆಯ ಉದಯದ ಗುಟ್ಟನ್ನು ಹೇಳುತ್ತ
ನಿಸರ್ಗದ ಲೀಲೆಗಳು ಸೃಷ್ಠಿಯಲಿ ಐಕ್ಯವಾದವು ||

No comments:

Post a Comment