Monday, July 30, 2012

|| ತೀರ್ಥರೂಪ ||

ಹೋದೆ ನೀನು ಹೇಳದೇನೆ
ಮರಳಿ ಬಾರದ ಊರಿಗೆ
ನಿನ್ನ ಸನಿಹ ಮರೆಯಲ್ಹೇಗೆ
ಎದೆಯ ತುಂಬಾ ನೆನೆಪಿದೆ
ಅಳಿಸಲಾಗದು ನಿನ್ನ ಗುರುತನು
ಹೆಜ್ಜೆಯೆಲ್ಲಾ ನಿನ್ನದೆ
ವರೆಸಲಾಗದ ಚಿತ್ರ ಬಿಡಿಸುತ
ಎತ್ತರದಲಿ ಬೆಳಗಲೆಂದು
ನೀನೆ ಏಣಿಯಾಗಿ ನಿಂತ ಜಾಗ
ನನ್ನ ಹೃದಯದಲ್ಲಿ ಖಾಲಿಯಾಗಿದೆ ||

ನನ್ನ ಕನಸನು ನನಸು ಮಾಡುತ
ನನ್ನ ಖುಷಿಯಲಿ ರಮಿಸಿದೆ
ಬವಣೆ ಬಂದರೆ ಎದೆಯನೊಡ್ಡಿ
ಕಷ್ಟ ನೋಡದಂತೆ ಬೆಳೆಸಿದೆ
ಬಯಸಿದೆಲ್ಲವನು ತಂದು ಕೊಡುತ
ನಿರಾವಲಂಬಿಯಾಗಿ ಮಾಡಿದೆ
ನೋವನೆಲ್ಲವ ಸಹಿಸಿ ಕೊಂಡು
ಜೀವನವನ್ನೆಲ್ಲಾ ಕಳೆದರೂ
ನಾನು ನಗುವಂತೆ ಮಾಡಿದೆ ||

ನಿನ್ನ ಜೀವಕೆ ನಾನೇ ಆಸರೆ
ಕೈ ಮುಗಿದು ಪೂಜಿಸುವೆ ನಿನ್ನನು
ಆರಾಧನೆಯ ಸಮಯಕೆ  ನಿನ್ನ ಪಾದವ
ತಲೆಯ ಮೇಲೆ ಇರಿಸದೆ
ಅಲ್ಲೂ ತೋರಿದೆ ನಿನ್ನ ಹಿರಿಮೆಯ
ನೋಡಬಾರದು ಕಷ್ಟವನೆಂದು ಪೇಳಿದೆ
ಜೀವದ ಗೆಳೆಯನಗೆ ಕೊಡುಗೆಯೆಂದು
ಪ್ರೇಮಪಕ್ಷಿಯನೊಂದ ತಂದೆನು
ರಾಜನಂತೆ ಮೆರೆಸುವ ಮುನ್ನವೆ
ಪ್ರಾಣಪಕ್ಷಿಯ ತೊರೆದೆ ನೀನು
ನನ್ನ ಒಂಟಿ ಮಾಡುತ ||

Sunday, July 29, 2012

|| ಕಾಲ ಚಕ್ರ ||

ತಿರುಗುತಲೆ ತಿರುಗುತಲೆ
ಮತ್ತೆ ಬರುವುದು ಅಲ್ಲಿಗೆ
ಆಳಾಗಿ ದುಡಿದು ಅರಸನಂತೆ ಉಣ್ಣುವರು
ಅರಸನಂತೆ ಮೆರೆದು ಆಳಾಗಿ ಗೇಯುವರು
ಆಳಾದರೇನು, ಅರಸನಾದರೇನು
ಮಾನವನಾಗಿ ಹುಟ್ಟಿದ್ದು ದೇವನ ವರವು ||
ಜನಿಸಿದ ಜೀವವು ಬದುಕುವ ಕಾಲದಲಿ
ಏರಿಳಿತ ಕಾಣುವುದು ನಡೆಸುವ ಸಂಸಾರದಲಿ
ಹುಟ್ಟುಸಾವು ಬದುಕಿನ ಆದಿ ಅಂತ್ಯವು
ಸತ್ತ ಮೇಲೆ ಬೆಳೆವರು ಬ್ರೂಣವಾಗಿಯೆ
ಪುನಃ ತಾಯಿಗರ್ಭದಲ್ಲಿ ಮಾಂಸ ಮುದ್ದೆಯಂತೆಯೆ
ತಿರುಗಿ ತಿರುಗಿ ಅಭಿನಯಿಸ ಬೇಕು ಜೀವನ ನಾಟಕದಲಿ ||

ಮಳೆಹನಿಗಳೆಲ್ಲ ಹರಿದು... ಹಳ್ಳವೊಂದರಲಿ ಬೆರೆತು
ಹೊಳೆಯ ಒಡಲನು ಸೇರುವ ಮಾತಿಲ್ಲಿ
ಹೊಳೆಗಳೆಲ್ಲವು ಓಡುತ... ತುಂಬಿದ ನದಿಯನು ಸೇರುತ
ಕಡಲ ಗರ್ಭದಲಿ ಮುಳುಗುವ ಹಾಡಿಲ್ಲಿ
ಕರಿಯ ಮುಗಿಲಾಗಿ ಹಾರುತ ತಿರುಗಿ ಭುವಿಯ ಬಾಯರಿಕೆ ನೀಗುತ
ಕಾಲದ ತಾಳಕೆ ತಿರುಗುವ ಚಕ್ರವು ಕುಣಿಸುವ ನಾಟ್ಯವು ಹೀಗಿಲ್ಲಿ ||

Monday, July 23, 2012

|| ಸೋನೆ ಸುರಿದಾಗ ||ರೈತರೆಲ್ಲರು ಮೇಲೆ ನೋಡಲು
ಜನರೆಲ್ಲರು ದಗೆಯಲಿ ಬೇಯಲು
ವಸಂತನ ನಂತರ ಗಾಳಿ ಬೀಸಲು
ಓಡಿ ಬಂದಿತು ಕಪ್ಪು ಮುಗಿಲು
ತಂಪು ಹನಿಯನು ಸುರಿಸಲು ||

ಬಾಯಾರಿದ ಇಳೆಯಯ ಮೇಲೆ
ಮುಂಗಾರಿನ ಅಭಿಷೇಕವಾಯಿತು
ಬೆವರಿನ ಮಳೆಸುರಿದು ಬಳಲಿದಂತ
ಜನರೆಲ್ಲರು ನಿಟ್ಟುಸಿರು ಬಿಡುವಾಗ
ರೈತರೆಲ್ಲರು ಕೃಷಿಯಲ್ಲಿ ನಿರತರಾದರು ||

ಜಗವೆಲ್ಲ ತಂಪಾಗಲು ಮುಂಗಾರು ಮಳೆಗೆ
ಕನ್ಮನ ಸೆಳೆಯುವ ಆಸೆಯು ಇಳೆಗೆ
ತಂಪಾದ ಮಳೆಹನಿಯು ಧರೆಯಲ್ಲಿ ಇಂಗಲು
ಅರಳಲು ಹಚ್ಚ ಹಸಿರು ಚಿಗುರೊಡೆಯಿತು
ದುಡಿವ ಜೀವಗಳಲಿ ಹೊಸ ಆಸೆ ಮೂಡಿತು ಸೋನೆ ಸುರಿದಾಗ ||

Sunday, July 22, 2012

|| ಕಿರಣ ಬಂದಾಗ ||


ರಶ್ಮಿ ಬರಲು ಜಗವು ಬೆಳಗಿತು
ಕವಿದ ಮಂಜು ಕರಗಿತು
ನಿಶೆಯು ದೂರ ಸರಿಯಲು
ನಿಶಾಚರಗಳು ಅಡಗಿ ಕೂತವು
ಜೀವಗಳಿಗೆ ಉತ್ಸಾಹ ಬಂದು
ಸ್ವಂಥ ಕೆಲಸಕೆ ಅಣಿಯಾಯಿತು ||

ಅರುಣೋದಯಕೆ ಬೆಳ್ಳು ಮೂಡಿಬಂತು
ಸೂರ್ಯೋದಯದಲಿ ಬೆಳಕು ಹರಿಯಿತು
ಮರದ ಮೇಲಿಂದ ಇಬ್ಬನಿಯು ಉದುರಲು
ಹೂ ಕಿತ್ತು ಪೂಜೆಯಲಿ ನಿರತರಾದರು ವಿಪ್ರರು
ಮನೆಯನು ಶುಚಿ ಮಾಡಲು ನಾರಿಯು ಮುಂದಾದಳು
ಬಾಗಿಲೆದುರಲಿ ಚಂದದ ರಂಗೋಲಿಯನು ಇಡುತಿಹಳು ||

ಕಿವಿಯನು ತಂಪಾಗಿಸಲು ಬಾನಾಡಿಗಳ ಸಂಗೀತವು
ಉಷೆಯನುಂಡು ಅರಳುತಿವೆ ತಾವರೆಗಳು
ಜಗದ ಸಂಗತಿಗಳನು ಓದಲು ನಿರತರಾದರು
ತಿಂಡಿಯನು ತಿನ್ನಲು ಕರೆಯುತಿಹಳು ಮನದರಸಿಯು
ಮಂದಹಾಸದಿ ಮೇಲೇರಿದನು ಬೆಳಕಿನ ತಾರೆಯು
ಶುಭದಿನವನು ಎದುರು ನೋಡುತಿದೆ ಸೌರಮಂಡಲವು ||

Saturday, July 21, 2012

|| ಕಡಲ ತೀರದಲಿ ||


ಕಡಲ ತೀರದಲಿ ಮುಸ್ಸಂಜೆ ಘಳಿಗೆಯಲಿ    
ಭೊರ್ಗರೆಯುತಿರುವ ಕಡಲಲೆಗಳಲ್ಲಿ
ಕಾಗದದ ದೋಣಿಯನು ಬಿಡುವ ಮೋಜು ನಿನ್ನಲಿ
ಕೈಯ ಹಿಡಿದು ಎಳೆಯುವ ಗೌಜು ಎದೆಯಲಿ
ಹಾಗೆಂದು ನಿನ್ನ ಕೈಯ ಹಿಡಿದಿರುವೆ ಕಾಳಜಿಯಲಿ ||

ಮುಸ್ಸಂಜೆ ಮಬ್ಬಲ್ಲಿ ಮರಳ ಮೆಲೆ ಕೂತಿರಲು
ನನ್ನ ಇನಿಯ ಮಡಿಲಲ್ಲಿ ಮಲಗಿರಲು
ರವಿಯು ನಾಚಿ ಮುಳುಗುತಿಹನು
ನಮ್ಮ ಎಕಾಂತ ಗುರುತಿಸಿ ಹೊರಟಿಹನು
ಹೇಳೋಣ ಅವನಿಗೆ ಶುಭವಿದಾಯ
ಮರಳಿ ಬಾ ನಾಳೆಗೆ ಎನ್ನುವುದು ನಮ್ಮ ಕಾಯ ||

ಹಿತವಾದ ತಂಗಾಳಿ ತಂಪನ್ನು ತಂದಿರಲು 
ಹಕ್ಕಿಗಳ ಇಂಚರವು ಕಿವಿಯನ್ನು ತುಂಬಿರಲು
ನೀರಿನಲಿ ಆಡಲು ಜೊತೆಯಲ್ಲಿ ತೆರೆಗಳು
ಕುಂತಾಗ ನೀನಾಡೊ ಪಿಸು ಮಾತುಗಳು
ಸ್ವರ್ಗಕೆ ಕಿಚ್ಚು ಹಚ್ಚಲು ಇನ್ನೇನು ಬೇಕು
ಸಂಗಾತಿ ನೀನಾಗಿರಲು ಬದುಕೊಂದೆ ಸಾಕು ||

ನಿಶೆಯು ಬರುತಿಹುದು ಜಗವ ನೋಡಲು 
ದಿಬ್ಬಣದ ಹಾಗೆ ಕೂಗಿಹವು ನಾದದಲಿ ನಿಶಾಚರಗಳು
ಕಡಲ ಭೋರ್ಗರೆತ ಜೊರಯ್ತು ಶಶಿಯು ಮೇಲೇರುತಿರಲು
ಬವಣೆಯನು ಮರೆತು ಬೃಂದಾವನದ ಕಡೆ ಹೋಗೋಣ  
ತಿಳಿಯಾದ ವಾತಾವರಣದಲಿ ಕೂರಲು ಬೇಕೇನು ಬಿಂಕ ಬಿನ್ನಾಣ
ಪ್ರೇಮಿಗಳೊಡೆಯ ಬಂದಿಹನು ಬೆಳದಿಂಗಳ ಚೆಲ್ಲುತ ನಮ್ಮನ್ನು ಕಾಯಲು ||

Thursday, July 19, 2012

|| ಭಾವ ಇಲ್ಲದಾಗ ||
ಭಾವ ಇಲ್ಲದ ಗೀತೆಯಲ್ಲಿ
ಭಾವ ಎಲ್ಲಿ ಹುಡುಕಲಿ
ಚಂದ್ರನಿಲ್ಲದ ಬಾನಿನಲ್ಲಿ
ಬೆಳದಿಂಗಳ ಹೇಗೆ ಕಾಣಲಿ
ಆಗದಂತಹ ಕೆಲಸ ಹೇಳಿ
ನನ್ನ ಅಳೆದು ತೂಗಿದೆ
ಹೃದಯದೂರಿನಲ್ಲಿ ನೆಲೆಸದೆ
ಹೋದೆ ನೀನು ಎಲ್ಲಿಗೆ ||

ನಿನ್ನ ಮೊಜಿನಾಟದಲ್ಲಿ
ಗೊಂಬೆಯಂತೆ ಕುಣಿದೆನು
ಸೂತ್ರ ಹರಿದ ಗೊಂಬೆಯಾಗಿ
ದಾರಿಪಾಲು ಆದೆನು
ಸೌದೆಯಂತೆ ಸುಟ್ಟುಹೊದೆ
ಸಕಲಕಾರ್ಯ ಸಿದ್ಧಿಗಾಗಿ
ಹೊಳೆಯಲ್ಲಿನ ಹೋಮವಾಯ್ತು
ನೆರವೇರಿದ ಕೆಲಸವು ||

ಸೂಜಿಮೊನೆಯ ಕೈಗಳಿಂದ
ನನ್ನ ದೇಹ ಸವರಿದೆ
ಹರಿವ ಎದೆಯ ರಕ್ತದಲ್ಲಿ
ನೀನು ಮಿಂದು ಮುಳುಗಿದೆ
ತೊಲಗಿಸಿದರೇನು ವರಿಸುವ ಮುನ್ನ
ಎಂದೆಂದು ನಗುತಿರು ನೋಡಲು ಚೆನ್ನ ||

Wednesday, July 18, 2012

|| ನಿನಗಾಗಿ ನಾನು ||

 
ಯಾಕೊ ಏನೊ ಕಣ್ಣಲ್ಲಿ ಇಂದು
ಕಂಬನಿಯೊಂದು ಹೊರಗೆಬಂದು
ಹೃದಯದ ನೋವನ್ನು ಬಳಿದು
ನಿನಗಾಗಿ ನಾನೆಂಬ
ಭಾವನೆಯಲಿ ಮನಮಿಂದು
ಮನದೊಡೆಯನ ಕಾಯುತಿದೆ ಸಿಗುವನೆಂದು ||    

ನಾ ತುಡಿವುದು ನಿನಗಾಗಿ
ನಾ ಮಿಡಿವುದು ನಿನಗಾಗಿ
ನೀ ನನ್ನ ವಶವಾಗಬೇಕೆಂಬ 
ಆಸೆಯು ಮಾತ್ರ ನನಗಾಗಿ
ಬೇರೆನು ನಾ ಬೇಡೆನು
ನಿನ್ನಂದ ದೂರಾಗಿ ನಾ ಬಾಳೆನು||

ಜಗದಲ್ಲಿ ಯಾರೆಲ್ಲ ಏನೆಂದರೇನು
ನೋವಾಗುವುದು ನೀ ದೂರದರೆ
ನನಗಿಂತಲೂ ಜಾಸ್ತಿ ಪ್ರೀತಿಸುವವರು
ಭೂಮಿಯಲಿ ಸಿಗುವರೆನು
ನಿನ ಖುಷಿಯನು ಬಯಸುತ
ಚಿಂತೆಯಲಿ ಬೆಸರಿಸುತಿಹೆನು ||

ನಿನಗಾಗಿ ನಾನು, ನನ ಉಸಿರು ನೀನು
ದೂರಾಗಿ ಹೊಗದಿರು ನನ್ನಗಲಿ ನೀನು
ನಿನ ಜೀವ ನಾನಾಗಬೇಕೆಂಬ ಆಸೆಯನು
ಹೊರಸೂಸುತ ಹರಿಸಲು ಎದೆಯ ಹೆಪ್ಪನ್ನು
ಧಾರೆಯಾಗಿ ಹನಿಗಳಾಯ್ತು ಕಣ್ಣಂಚಿನಲಿ ನೀರು ||

Saturday, July 14, 2012

|| ಅಭಿಮಾನ ||

ನನ್ನ ಗಾನ ಕೇಳಲೆಂದು
ದೂರದಿಂದ ಬಂದಿರಿ
ಹಾಡ ಕೇಳಿ ನಿಮ್ಮ ಮನವ
ತಂಪಿನಲಿ ತೇಲಿಸಿ
ಹಾಡೊ ಮನಕೆ ನೋವು ಇಲ್ಲ
ಎಂದು ನೀವು ನಲಿಯಿರಿ
ನೋವನುಂಗಿ ಹಾಡಿ ಇಂದು
ನಿಮ್ಮ ಖುಷಿಯಲಿ ಮರೆವೆನು ||

ನನ್ನ ಬಾಳು ಸೊಗಸು ಎಂದು
ಮೊಜಿನಿಂದ ಮಾತೊಂದನಾಡಿ
ಅಸೂಯೆನೆಕೆ ಪದುವಿರಿ
ಜನಿಸಿದಾತ ನೋವು ಇರದೆ
ಬದುಕನೆಂದು ಜಗದಲಿ
ಧನವ ಕೇಳಲು ಅಂಜಿಕೆ
ಇರದೆ ಬದುಕಲು ಆಗದೆ
ಸೋತು ಸೋತು ಸುಣ್ಣವಾಗಿ
ಕವಳ ಬಯಸಿ ಬಂದೆ ನಾ ||

ಕಳೆದ ದಿನಗಳಿಂದ ನಾನು
ಆನಂದವೆಂಬ ಪದದಲಿ
ಕಾಣದ ಸಂತೋಷ ಕಾಣುತಿಹೆನು
ಬಾಳಿನಲೆಂದು ಅನುಭವಿಸಲಾಗದೆ
ನಿಮ್ಮ ಅಭಿಮಾನ ನನ್ನ ಜೇಬ ತುಂಬದೆ
ಅಭಿಮಾನಿಗಳೆಂಬ ಹೆಮ್ಮೆ ನನ್ನ ಮನವ ತುಂಬಿದೆ
ಬಾಳದೀಪವಾಗಲೆಂದು ನಿಮ್ಮ ಹರಕೆಯು
ಹಾಡುವೆನಿಂದು ಖುಷಿಯಲಿ ಬಹುಮಾನ ಬಯಸದೆ ||

Thursday, July 12, 2012

|| ಆಭಾರಿ ||

ಅವಳೆ ನನ್ನ ಹುಡುಗಿ
ಕನಸಲಿ ಕಾಡೊ ಬೆಡಗಿ
ಮನಸನು ಸೇರುವ ಘಳಿಗೆ
ಅವಳೆನೆ ಬಂದಳು ಬಳಿಗೆ
ನಿನ್ನನು ಸೇರುವ ತವಕದಲಿ
ಉಳಿದ ಕೆಲೆಸವ ಮರೆತೆನು ಮನಸಿನಲಿ ||

ಜೀವನಧಾರೆ ನೀ ನಾಗಿ ಬಾರೆ
ಹರಿಸುವೆನು ಭಾಷ್ಪವನು
ನಿನ ಪಾದ ತೊಳೆಯಲು
ನನ ಅರಿತು ಬಾಳುವ ನೀನು
ಕೊನೆವರೆಗು ಜೊತೆಯಾಗು
ಜೀವನ ಜ್ಯೋತಿ ನಂದುವ ವರೆಗೂ ||

ಜಗದಲಿ ನೋವನು ಕಾಣದ ಜೀವವಿಲ್ಲ
ನಲಿವಿನಲಿ ನಲಿಯದೆ ಸಾಯುವುದಿಲ್ಲ
ಉರಿಯಲ್ಲಾ ಅಳಿವುದು ನಿನ್ನಿಂದ
ಖುಷಿಯಲಿ ಮರಣವು ಜಗದಿಂದ
ನಿನ ಹಿಂಬಾಲಿಸುವ ಕ್ಷಣದಲಿ
ಆಭಾರಿಯಾಗಿ ನೆನೆಯುವೆ ಕೆಲಸದ ನೆರಳಲಿ ||