Tuesday, February 25, 2014

ಆಗದು

ಬಲು ಸುಂದರ
ಮನಸನರಿತ ಸಂಗಾತಿ
ಜೊತೆಯಿರಲು

ಭಾವನೆಯರಿತ
ಮನಸನು ಮುರಿದು
ಹೊರಟಿರಲು

ವಸಂತನಾಗಮನಕೆ
ಚೈತ್ರದ ಕೋಗಿಲೆಯು
ಕುಹು ಕುಹು ಕಂಪನ

ಇಂಪಾದ ರಾಗ
ಆಲಿಸಲಾಗದು
ಭಾರವಾಗಿಹ ಎದೆಯಲಿ

Saturday, February 22, 2014

ಮರಳಿ ಉದಯಿಸು

ಸಂಜೆಯಾಗುತಿರಲು
ನಡೆಯುತ ತೀರದಿ
ಮುಳುಗುವ ರವಿಯನು
ನೋಡಿ ರಮಿಸುತಿರಲು
ವಿರಹವೆ ಕಾಡುವ
ವಿಹಾರವೆ ವಿಸ್ಮಯ

ಸಾಗರದ ತುದಿಯಲಿ
ಬಾನು ಕೂಡಿದೆ
ಬೆಳಗುವ ಭಾನು
ಕಂತಲು ಕಡಲಲಿ
ಕೆಂಪಾದ ಉಂಡೆ
ಕಾಣದು ಇರುಳಲಿ

ತೇಜನಂತೆ ಪ್ರಜ್ವಲಿಸಿದ
ಜೀವವು ಮರೆಯಾಗುವುದು
ಮರುದಿನ ಉದಯಿಸಿ
ಮರುಜನ್ಮವ ದೃಢೀಕರಿಸುವುದು
ಮರಳಿ ಜನಿಸಲೆ ಬೇಕು
ಜೀವನದ ಸಂಕೋಲೆಯಲಿ

Friday, February 21, 2014

ಬಾಯಲ್ಲಿ ಬಡಾಯಿ ಕೊಚ್ಚಿಕೊಂಡವರು ನಾಯಕರಲ್ಲ, "ನಮೋ"ಗು ಉಂಟು "ರಾಹು"ಲ್ ಕಾಟ...

ಬಾಯಲ್ಲಿ ಬಡಾಯಿ ಕೊಚ್ಚಿಕೊಂಡರೆ ನಾಯಕನಾಗಲು ಸಾಧ್ಯವಿಲ್ಲ. ಮಾತಿಗೆ ನಾನು ಅರ್ಜುನ ನಮ್ಮಮ್ಮ ಕೃಷ್ಣ ಇದ್ದಂತೆ ಎಂದು ಹೇಳಿಕೊಂದರೆ ಕೇಳುವ ಜನರೆಲ್ಲ ಮೂರ್ಖರೆ..? ಹೀಗೊಂದು ಚಿಂತನೆ ಮಾಡಿ ಮಾತನಾಡುವಷ್ಟು ವಿವೇಚನೆ ಇವರಿಗಿಲ್ಲವೆ ಎನ್ನುವುದು ತಿಳಿದುಬರುತ್ತದೆ. ಮಾಧ್ಯಮದ ಮುಂದೆ ಮಾತನಾಡುವಾಗ ಹೀಗೆ ಮಾತನಾಡಬೇಕೆನ್ನುವಷ್ಟು ಪ್ರಜ್ನೆ ಇಲ್ಲದವರೆಲ್ಲ ನಮ್ಮನು ಆಳುವ ನಾಯಕರುಗಳು.

ನಾನೊಬ್ಬ ಅರ್ಜುನ ಎಂದು ಬಡಾಯಿ ಕೊಚ್ಚಿಕೊಳ್ಳುವ ಸ್ವಯಂಘೋಷಿತನ ಮಾತಿನ ಹಿಂದಿನ ಮರ್ಮವನ್ನು ತಿಳಿಯದಷ್ಟು ದಡ್ಡರೇ ನಮ್ಮ  ಭಾರತೀಯರು..? ದಶಕದ ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಯುವರಾಜನಾಡಿದ ಮಾತುಗಳ ಹಿಂದೆ ಒಂದು ಸುತ್ತು ಹಾಕೋಣ.

ನೇರವಾಗಿ ಬಿಜೆಪಿಯನ್ನೆ ಗುರಿಯಾಗಿಸಿಕೊಂಡು ಮಾತನಾಡುತ್ತ ನಮೋ ಬಗ್ಗೆ ಭಯವಿರುವುದನ್ನು ಸಾಬೀತು ಪಡಿಸುತ್ತಿದ್ದಾರೆ. ನನ್ನ ಬಗ್ಗೆ ತಿಳಿದುಕೊಂಡರೆ, ನನ್ನ ಹಿನ್ನಲೆಯನ್ನು ಅರಿತುಕೊಂಡರೆ ನನಗೇಕೆ ಭಯವಿಲ್ಲವೆನ್ನುವುದು ತಿಳಿಯುತ್ತದೆ ಎಂದು ಹೇಳುವ ರಾಹುಲ್ ಏಕೇ ನಮೋಗೆ ಅಂಜಿ ಬಿಜೆಪಿಯನ್ನ ಹೀಯಾಳಿಸುವುದು..? ಭಯವಿಲ್ಲದವರು ಆನೆ ನಡೆದದ್ದೆ ದಾರಿ ಎಂಬಂತೆ ಪಜಾಹಿತಾಸಕ್ತಿಯನ್ನು ರಕ್ಷಿಸುವತ್ತ ಕಾರ್ಯಪ್ರವರ್ತರಾಗಬೇಕೇ ವಿನಃ ಹೆದರಿ ಬಡಾಯಿ ಕೊಚ್ಚಿಕೊಳ್ಳುವುದು ಏಕೇ?

ಅಧಿಕಾರ ಒಬ್ಬ ವ್ಯಕ್ತಿಯ ಸುತ್ತ ಗಿರಕಿ ಹೊಡೆಯ ಬೇಕೆಂದು ಬಿಜೆಪಿ ನಂಬಿ ಪ್ರಧಾನಿ ಅಭ್ಯರ್ಥಿಯನ್ನು ಮೊದಲೆ ಘೋಷಿಸಿದೆ. ಆದರೆ ಕಾಂಗ್ರೆಸ್  ಘೊಷಿಸುವ ಕೆಲಸಕ್ಕೆ ಕೈಹಾಕಲೆ ಇಲ್ಲೆ ಯಾಕೆ ಅಂದರೆ ಎಲ್ಲರಿಗೂ ತೆರೆದು ಕೊಂಡ ಪ್ರಜಾಸತ್ತೆಯನ್ನು ನಂಬಿಕೊಂಡಿದೆ ಎನ್ನುವುದು ಇವರ ಮಾತು. ಇದರ ಹಿಂದಿನ ಮರ್ಮವೆಂದರೆ, ಪ್ರತಿನಿಧಿಗಳು ಆರಿಸಿದ ವ್ಯಕ್ತಿ ಇಲ್ಲಿ ಪ್ರಧಾನಿಯಗುವುದಿಲ್ಲ ಬದಲಾಗಿ ಕೃಷ್ಣ ಹೇಳಿದವರು ಮಾತ್ರ ಪ್ರಧಾನಿಯೆಂದ ಮೇಲೆ ಅದು ಅರ್ಜುನ ಮಾತ್ರ ಎನ್ನುವುದನ್ನು ಸ್ಪಷ್ಟಿಕರಿಸುತ್ತದೆ. ಹೀಗಾಗಿಯೆ ಎಲ್ಲ ಕಾಂಗ್ರೆಸ್ ಮುಖಂಡರುಗಳು ಪ್ರಧಾನಿ ಯಾರೆಂಬುವುದರಲ್ಲಿ ನಮ್ಮಮ್ಮ ತೀರ್ಮಾನವೆ ಅಂತಿಮ ಎಂದು ಹೇಳುತ್ತಿರುವುದು ಯುವರಾಜನೆ ಎನ್ನುವುದಕ್ಕೆ ಪುಷ್ಟೀ ನೀಡುತ್ತದೆ.

ಪ್ರಧಾನಿ ಅಭ್ಯರ್ಥಿಯನ್ನು ಮೊದಲೆ ಘೋಷಿಸಿದರೆ ಅವರು ಪ್ರಜೆಗಳಿಗೆ ಇಷ್ಟವಾಗದಿದ್ದರೆ ಕಾಂಗ್ರೆಸ್ ಸೋಲುವುದು ಖಚಿತ. ಅದು ಅಲ್ಲದೆ ಮೊದಲೆ ಬಿಂಬಿಸುವಂತಹ ಜನ ಮೆಚ್ಚಿದ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸನಲ್ಲಿ ಇಲ್ಲದೆ ಇರುವುದರಿಂದ ನಾವು ಮೊದಲೆ ಪ್ರಧಾನಿಯ ಹೆಸರು ಗೊಷಿಸುವುದಿಲ್ಲ ಎನ್ನುವುದಕ್ಕೆ ಮುಖ್ಯ ಕಾರಣ.  ಚುಣಾವಣೆಯಲ್ಲಿ ಗೆದ್ದಮೇಲಾದರೆ ಕೃಷ್ಣನ ಮಾತು ಅಂತಿಮ ಮತ್ತು ನಾನೆ ಪ್ರಧಾನಿಯಾಗಬಹುದು ಅಥವಾ ನಾಮಕಾವಸ್ತೆಯ ಪ್ರಧಾನಿಯನ್ನು ನಮ್ಮ ತಾಳಕ್ಕೆ ಕುಣಿಸಬಹುದೆನ್ನುವುದು ದೇಶಕ್ಕೆ ಏನು ಬೇಕೆನ್ನುವುದನ್ನು ಮಾತ್ರ ಕಾಣುವವರ ಮಾತು. ದೇಶದ ಅಗತ್ಯತೆಯನ್ನು ಅರಿತವರು, ತಾವೇ ದೇಶವನ್ನಾಳುತಿದ್ದರೂ ಶ್ರೀಸಾಮಾನ್ಯರು ಬದುಕಲು ಬೇಕಾದ ಮೂಲವಸ್ತುಗಳ ಬೆಲೆ ಗಗನಕ್ಕೆ ಏರಿಸುತ್ತಿದ್ದಾರೆ. ಇವರ ಹಣೆಬರಹಗಳನ್ನು ಮೊದಲು ನೋಡಿದ್ದರು ಕಳೆದ ೧೦ ವರ್ಷಗಳಿಂದ ನೋಡಿ ನೋಡಿ ದೇಶದ ಜನತೆ ರೋಸಿಹೋಗಿದೆ.

ಹೊಡೆದರು ಬಡಿದರು ಅಗತ್ಯವೆನಿಸಿದ ಪ್ರಶ್ನೆಯನ್ನು ಜನರ ಮುಂದೆ ಎತ್ತದೆ ಬಿಡುವುದಿಲ್ಲ ಎನ್ನುವ ರಾಹುಲ್, ತಮ್ಮ ಪಕ್ಷವೆ ಅಧಿಕಾರದಲ್ಲಿದ್ದರು ಪ್ರಶ್ನೆಗೆ ಉತ್ತರ ಹುಡುಕಿ ಜನರನ್ನು ರಕ್ಷಿಸಬೇಕೆಂದು ಏಕೆ ನೋಡುತ್ತಿಲ್ಲ..? ಯಾಕೆಂದರೆ ಇವರಿಗೆ ಪ್ರಶ್ನೆಯಾಗಿ ಕಾಣುವುದು ನಮೋ ಮಾತ್ರವೆ ಹೊರತು ದೇಶದ ಸಮಸ್ಯೆಗಳಲ್ಲ. ಭರವಸೆಯ ಭಂಟ ಪರಿವರ್ತನೆಯ ಗುರಿಕಾರನಾಗಿ ಜನರಮನಸ್ಸಿನಲ್ಲಿ ಬೇರುರಿರುವ ನಮೋ ಮೆಲೆ ಇಲ್ಲಸಲ್ಲದ  ಆರೋಪ ಮಾಡಿ ಪ್ರಜೆಗಳ ಮನಸ್ಸನ್ನು ತಮ್ಮತ್ತ ತಿರುಗಿಸುವುದೇ ಇವರ ಗುರಿ.

ಗುಜರಾತ್ ಹಿಂಸೆ ಕೋಮುವಾದವೆನಿಸಿದರೆ ಪಂಜಾಬ್ ಸಿಖ್ ವಿರೋಧಿ ದೊಂಬಿ ಕೊಮುವಾದವೆನಿಸುವುದಿಲ್ಲವೇ..? ಭಾರತೀಯ ಬಹುಸಂಖ್ಯಾತರ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಬಿಜೆಪಿ ಕೋಮುವಾದಿ ಪಕ್ಷವೆಂದಾದ ಮೇಲೆ ವೋಟ್ ಬ್ಯಾಂಕ್ ರಾಜಕಾರಣ & ಸಿಖ್ ವಿರೋಧಿ ದೊಂಬಿ ಮಾಡುವ ಕಾಂಗ್ರೆಸ್  ಕೋಮುವಾದಿ ಪಕ್ಷಕ್ಕಿಂತಲೂ ಕಡೆಯಲ್ಲವೇ..?

ರಾಹುಲ ಗಾಂಧಿಯವರು ಪರದೆಯೊಳಗಿನ ಪ್ರಧಾನಿ ಅಭ್ಯರ್ಥಿ, ಇಲ್ಲದಿದ್ದರೆ ಕಾಂಗ್ರೆಸನ ಇಡಿ ಚುಣಾವಣ ಪ್ರಚಾರ ಅವರ ಸುತ್ತಲೆ ಯಾಕೆ ಸುತ್ತದೆ ಎನ್ನುವ ಅರುಣ್ ಜೇಟ್ಲಿಯವರ ಮಾತು ರಾಹುಲ್ ಒಳ ಮರ್ಮದ ಮಾತಿಗೆ ಪುಷ್ಟಿ ನೀಡುತ್ತದೆ.

ಎಪಿಪಿಗೆ ಹೆದರದೆ ಡೆಲ್ಲಿಯಲ್ಲಿ ನೆಲಕಚ್ಚಿದ ಮೇಲೆ ನಮೋಗೆ ಹೆದರಿದರು ಹೆದರದಂತೆ ನಟಿಸುತ್ತಿರುವ ಕಾಂಗ್ರೆಸ್ ಚುಣಾವಣ ರಣತಂತ್ರ ರೂಪಿಸುತ್ತ ಬಿಜೆಪಿ ಮತ್ತು ನಮೋ ಮೇಲೆ ಪ್ರಜೆಗಳು ನಂಬಲಸಾಧ್ಯವಾದ, ಸಲ್ಲದ ವಾಗ್ಧಾಳಿ ಮಾಡುತ್ತಿದೆ. ವ್ಯವಸ್ತೆಯನ್ನು ಬದಲಿಸುವುದೆ ನನ್ನ ಗುರಿ ಎನ್ನುವ ರಾಹುಲ್ ೧೦ ವರ್ಷದ ಅಧಿಕಾರ ಸಾಲಲಿಲ್ಲವೆ ವ್ಯವಸ್ಥೆಬದಲಿಸಲಿಕ್ಕೆ..? ಕಾಂಗ್ರೆಸ್ ಪಕ್ಷವು ಬ್ರಷ್ಠಾಚಾರವನ್ನು ಗಂಭಿರವಾಗಿ ಪರಿಗಣಿಸಿದೆ ಎನ್ನುವವರು ಮತ್ಯಾಕೆ ಬ್ರಷ್ಠರಿಗೆ ಟಿಕೆಟ್ ನೀಡುವುದು..? ವ್ಯವಸ್ಥೆ ಬದಲಿಸುವುದು ನನ್ನ ಗುರಿ ಎನ್ನುವ ರಾಹುಲ್ ನೋಡಿದರೆ ದೇಶಕಾಗಿ ಏನು ಮಾಡುತ್ತಿಲ್ಲ ಬದಲಾಗಿ ಜನರ ಮನಸ್ಸಿನಲ್ಲಿ ನೆಲೆಸಿರುವ ಧೀಮಂತ ನಾಯಕ ನ್ಮೋರನ್ನು ಬದಲಿಸುವೆದೆ ಇವರ ಮಾತಿನ ಉದ್ದೇಶ ಮತ್ತು ಮುಂದಿನ ಗುರಿ ಎನ್ನುವುದು ಸ್ಪಷ್ಟವಾಗಿ ಭಾಸವಾಗುತ್ತದೆ.

ಹೀಗೆ ಕೆದಕುತ್ತ ಹೋದರೆ ಹಲವು ವಿಷಯಗಳ ಬಗ್ಗೆ ಮಾತನಾಡಿರುವುದರ ಒಳ ಮರ್ಮ ಬೆಳಕಿಗೆ ಬರುತ್ತದೆ. ಮೂಗಿಗೆ ತುಪ್ಪ ಒರೆಸುವ ಇಂತಹ ಬೆಣ್ಣೆಯ ಮಾತಿಗೆ ಬಲಿಯಾಗದೆ ದೇಶದ ಒಳಿತಿಗೆ ಶ್ರಮಿಸುವ ನಮೋಗೆ ಜೈ ಹೋ ಎಂದು ಕಾದು ನೋಡೋಣ. ಪೊಳ್ಳು ಭರವಸೆ ನೀಡಿದವರ ಕೈಯಲ್ಲಿ ೧೦ ವರ್ಷಗಳ ಕಾಲ ಅಧಿಕಾರವನ್ನಿತ್ತು ಕೈಸುಟ್ಟುಕೊಂಡಾಗಿದೆ.ಈಗ ಬದಲಾವಣೆಯ ಕಾಲ ಬಂದಿದೆ ಹೀಗಾಗಿ ಬದಲಾವಣೆಯ ಹರಿಕಾರನಿಗೆ ಅಧಿಕಾರವನ್ನಿತ್ತು ನಮೋ ಎಂಬ  ಪುಗ್ಗಿ ಹಾರಾಡುತ್ತದೋ ಟುಸ್ ಎನ್ನುತ್ತದೋ ಎಂದು ಕಾದು ನೋಡೋಣ.

Wednesday, February 19, 2014

...ಬಜೆಟ್ ಎಂಬ ಬಲೆಯಿಂದ ಹೊರಬಂದ ಚುಣಾವಣಾ ಪ್ರನಾಳಿಕೆ...

ಮಧ್ಯಂತರ ಬಜೆಟ್ ಎಂಬ ಹೆಸರಿನಲ್ಲಿ ಚುಣಾವಣಾ ಘೋಷಣೆಗೂ ಮುನ್ನವೆ ಹೊರಬಂದ ಕಾಂಗ್ರೇಸಿನ ಚುಣಾವಣಾ ಪ್ರನಾಳಿಕೆಯು ಅಮವಾಸ್ಯೆಯ ಚಂದ್ರನಂತೆ ಕಂಗೊಳಿಸುತ್ತಿದೆ. ಯಾವುದಾದರೊಂದು ವರ್ಗದ ಜನರ ಮೇಲಾದರೂ ಪರಿಣಾಮ ಬೀಳುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಚಿದಂಬರ ರಹಸ್ಯ ಮಾತ್ರ ರಾಹುಲ್ ಗಾಂಧಿಯ ಭರವಸೆಯ ಮಾತುಗಳಿಗೆ ಪ್ರೇರಣೆ ನೀಡಿದಂತಿದೆ ಮತ್ತು ಅವರೆ ಕಾಂಗ್ರೇಸಿನ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಗುಟ್ಟನ್ನು ರಟ್ಟು ಮಾಡಿದಂತೆ ಮಧ್ಯಂತರ ಬಜೆಟ್ ಮಂಡನೆಯಾಗಿದೆ.

ಹೌದಪ್ಪ, ಕೇಳಲು ಹಿತವೆನಿಸುವ ಬಜೆಟ್ ಆದರೆ ಇದು ಮೂಗಿಗೆ ತುಪ್ಪ ಒರೆಸುವ ಪ್ರಕ್ರಿಯೆ ಕಾಂಗ್ರೇಸಿನಿಂದ ನೆಡೆಯುತ್ತಿದೆ ಎನ್ನುವುದು ಅಂಗನವಾಡಿ ಮಕ್ಕಳಿಗು ತಿಳಿದುಬರುವಂತ ಚಿತ್ರಣವಾಗಿದೆ. ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ವಿರೋಧ ಪಕ್ಷಗಳ ಮತಬ್ಯಾಂಕುಗಳಾದ ಮಧ್ಯಮ ವರ್ಗದ ಜನರನ್ನೆ ಗುರಿಯನ್ನಾಗಿಸಿಕೊಂಡು ಮತಗಳನ್ನು ಕಿತ್ತುಕೊಳ್ಳುವ ಹುನ್ನಾರವೆನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಬರಿ ಚುಣಾವಣೆಯೊಂದನ್ನೆ ಗುರಿಯನ್ನಾಗಿಸಿಕೊಂಡಂತಹ ಮಧ್ಯಂತರ ಬಜೆಟ್ ಚುಣಾವಣಾ ಪ್ರನಾಳಿಕೆಯಂತೆ ಘೋಷಿತವಾಗಿದೆ. ಎಕೆಂದರೆ ೧೦ ವರ್ಷ ಆಡಳಿತ ನೆಡೆಸಿದರೂ ಎಂದಿಗು ಮಂಡನೆಯಾಗದ ಅಂಶಗಳು ಚುಣಾವಣೆಗು ಮುನ್ನ ಮಂಡನೆಯಾದ ಬಜೆಟಿನಲ್ಲಿ ಮಂಡನೆಯಾಗಿದೆ ಎಂದರೆ ಇದು ಚುಣಾವಣೆಗೆಲ್ಲಲು ಮಾಡಿದ ಸರಳ ಉಪಾಯವೆನ್ನುವುದು ನಿಖರವಾಗುತ್ತದೆ. ಇದರಿಂದಾಗಿ ಯುವ ಜನಾಂಗದ ಮತಕ್ಕೆ ಕೈ ಹಾಕಿರುವುದು ಗೋಚರವಾಗುತ್ತಿದೆ.

ರಾಹುಲ್ ಗಾಂಧಿಯು ನಡೆಸಿದ ಸಂವಾದಗಳೆಲ್ಲವು ಹೆಚ್ಚಿನದಾಗಿ ವಿದ್ಯಾರ್ಥಿಗಳೊಂದಿಗೆ ಆಗಿರುವುದರಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಪಡೆದಿರ್ತಕ್ಕಂತಹ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಅಂಶ ಘೋಷಣೆಯಾಗಿರುವುದು. ಅದಲ್ಲದೆ ಮಹಿಳೆಯರ ಸಬಲೀಕರಣಕ್ಕೆ ಮತ್ತು ಸುರಕ್ಶತೆಗೆ ಕಾದಿರಿಸಿದ ನಿರ್ಭಯಾ ನಿಧಿಗೆ ಅನುದಾನ ನೀಡಿ ಸ್ತ್ರೀಯರ ಗಮನ ಸೆಳೆಯುವ ಅಂಶವು ಸಹ ಮಂಡಣೆಯಾಗಿದೆ ಬಜೆಟಿನಲ್ಲಿ. ಎಲೆಕ್ಟ್ರೋನಿಕ್ಸ್ ವಸ್ತುಗಳ ದರವನ್ನು ಇಳಿಸಿ ಮಧ್ಯವ ವರ್ಗದ ಜನರ ಕೈಗೆಟಕುವಂತೆ ಮಾಡಿ ಅವರ ಗಮನ ಸೆಳೆಯುವ ಪ್ರಯತ್ನವಾಗಿದೆ. ದೇಸಿಯ ಮೊಬೈಲ್ ಗಳ ಮೇಲಿನ ಸುಂಕವನ್ನು ಕದಿತಗೊಳಿಸಿ ದೇಶಿವಸ್ತುಗಳ ಬಗ್ಗೆ ಧ್ವನಿ ಎತ್ತುವವರ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹಾಗೆ ಕಾರು ಮತ್ತು ವಾಣಿಜ್ಯ ವಾಹನಗಲ ಮೇಲಿನ ಸುಂಕವನ್ನು ಕಡಿತಗೊಳಿಸಿ ಮಧ್ಯವ ವರ್ಗದವರನ್ನು ಬಾಯಿ ಕೆಳೆಯುವಂತೆ ಚಿದಂಬರ ರಹಸ್ಯವಿದೆ.

ಯುವರಾಜನೋದಿಗೆ ಯುವ ಪಡೆ ಬರಬೇಕು ಎಂದು ಅವರನ್ನು ಆಕರ್ಷಿಸುವ ಕೆಲಸಕ್ಕಾಗಿ ಶೈಕ್ಷಣಿಕ ಸಾಲದ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆಯನ್ನು ಜನರ ಮುಂದಿಟ್ಟಿದೆ. ಇದು ಪೂರ್ತಿಯಾಗಿ ರಾಹುಲ್ ಗಾಂಧಿಯವರ ಮಾತು ಸಾಕಾರಗೊಂಡಂತೆ ಜನತೆ ನಂಬಬೇಕು ಎನ್ನುವ ಮತ್ತು ಅವರನ್ನೆ ಜನರು ನಂಬಿ ಗೆಲ್ಲಿಸಲಿ ಎಂಬ ಯೋಚನೆ ಮಧ್ಯಂತರ ಬಜೆಟಿನಲ್ಲಿ ಮಂಡನೆಯಾಗಿದೆ.

ಇಷ್ಟೆಲ್ಲ ಹೇಳುವ ಬಜೆಟ್ ಜನರನ್ನು ಸೆಳೆಯುತ್ತದೆ ಎನ್ನುವ ಭ್ರಮೆಯಲ್ಲಿ ಚಿದುವಿದ್ದಿರಬಹುದು ಯಾಕೆಂದರೆ ಜನಸಾಮಾನ್ಯರ ಬದುಕಿಗೆ ಬೇಕಾಗುವ ತರಕಾರಿ ಮತ್ತು ಆಹಾರ ವಸ್ತುಗಳ ಬೆಲೆಯತ್ತ ಗಮನ ಹರಿಸದೆ ಇದ್ದಿರುವುದು ಹಾಸ್ಯಾಸ್ಪದವೆನಿಸುತ್ತದೆ. ಗ್ಯಾಸ್ ಬೆಲೆಯನ್ನು ತಗ್ಗಿಸಿದರೆ ತಿನ್ನಲು ಬೇಕಾಗುವ ಆಹಾರವಿದ್ದರೆ ಮಾತ್ರ ಗ್ಯಾಸ್ ಪ್ರಯೋಜನ ಎಂಬ ಅರಿಲ್ಲದ ಸಚಿವರುಗಳು ನಮ್ಮಾಳುತ್ತಿರುವವರು. ಆಹಾರ ವಸ್ತುಗಳ ಬೆಲೆ ಗಗನವೇರಿರುವಾಗ ಗ್ಯಾಸ್ ಕೊಂಡೇನು ಮಾಡಬೇಕು ಎಂಬ ಪರಿವೆ ಇಲ್ಲದ ಮುಖಂಡರುವಗಳು ನಮ್ಮ ನಾಯಕರುಗಳು. ಏನೆ ಆಗಲಿ ಚುಣಾವಣೆ ಘೋಷಣೆಗು ಮನ್ನವೆ ಚುಣಾವಣಾ ಪ್ರನಾಳಿಕೆ ಬಿಡುಗಡೆ ಮಾಡುವ ಹೊಸದೊಂದು ಜಯಮಾನಕ್ಕೆ ಕಾಂಗ್ರೇಸ್ ಮುಂದಾಗಿರುವುದು ಮನರಂಜಿಸುವ ಹಾಸ್ಯ ಚಿತ್ರ ನೋಡಿದಂತಾಗಿರುವುದು ಮಾತ್ರ ಸತ್ಯ.