Monday, June 13, 2011

|| ಸಂಬಂಧವೋ...ಅನುಬಂಧವೋ...?||


ಯಾವುದು ಸಂಬಂಧವು..?
ಯಾವುದೋ ಅನುಬಂಧವು..?
ಒಲವಿನ ತುಡಿತದ ಸಂಘಕೆ
ಮಿಡಿಯುವ ಬಾವನೆ ಬಂಧವೋ..?

ದೇಹದ ತುಂಬ ಬಹುಪಾಲು ನೀರು
ಹರಿವುದು ರಕ್ತವು ದೇಹದ ಗಾಯಕೆ
ಹೃದಯದ ತುಂಬ ತುಂಬಿದೆ ರಕ್ತವು
ಬರುವುದು ಕಣ್ಣೀರು ಹೃದಯದ ನೋವಿಗೆ
ಇದು ಯಾವ ರೀತಿಯ ಸಂಬಂಧ
ದೇಹ ಹೃದಯಗಳ ಅನುಬಂಧ...||

ವಸಂತ ಮಾಸದಿ ಮಾವು ಚಿಗುರಲು
ಕೋಗಿಲೆ ಗಾನವು ಬಲುಚೆಂದ
ನಿಸರ್ಗ ವಿಸ್ಮಯ ಕಂಡಿರಲು
ಅರಿವುದು ಬಾವನೆ ಬಂಧವು
ಇದು ಯಾವ ರೀತಿಯ ಸಂಬಂಧ
ಜೀವಿ ಪ್ರಕೃತಿಗಳ ಅನುಬಂಧ...||

ತಾವರೆ ಅರಳದು ಸೂರ್ಯನ ನೋಡದ ವಿನಃ
ನೈದಿಲೆ ನಲಿವುದು ಚಂದ್ರನು ಬಂದಾಗ ಪುನಃ
ಬೆಳಕು ಕತ್ತಲಲಿ ನಡೆವುದು ಹೂಗಳ ನರ್ತನ
ಪರಿಸರದ ತುಂಬೆಲ್ಲ ಪರಿಮಳ ಘಮ ಘಮ
ಇದು ಯಾವ ರೀತಿಯ ಸಂಬಂಧ
ಹೂವು ಹಗಲಿರುಳುಗಳ ಅನುಬಂಧ...||

Sunday, June 12, 2011

|| ಇದೇನಾ ಪ್ರೀತಿ....? ||

 
ನನ್ನ ಮನದಲಿ ಮೂಡಿದ ಗೊಂದಲಕೆ
ನೀ ಉತ್ತರಿಸುವೆಯೇನು..?
ಒಂದು ಮೊಗವನು ನೋಡಿದ ತಕ್ಷಣಕೆ
ಪ್ರೀತಿ ಹುಟ್ಟುವುದು ಹೇಗೆ ನೀ ಹೇಳು...?
ಗೊಂದಲಕೆ ಉತ್ತರವೇ ಪ್ರೀತಿಯೇನು...?

ಮುದ್ದು ಮನಸು ಬಯಸಿರುವ
ಹೃದಯ ನೆನೆದಿರುವ
ಕಲ್ಪನೆಯ ರೂಪವನು ಎದುರಲಿ ಕಂಡಾಗ
ಹುಟ್ಟುವ ಒಲವೇ ಪ್ರೀತಿಯೇನು...?

ಎರಡು ಹೃದಯದ ಕಾಮನೆಯು
ಒಂದೇ ದಾರಿಯ ಹೊಂದಿರಲು
ಜೀವನ ಮೌಲ್ಯವ ಅರ್ಥೈಸುತ
ಪರಸ್ಪರ ಬೆಸೆಯುವ ಬೆಸುಗೆಯೇ ಪ್ರೀತಿಯೇನು...?

ಸುಂದರ ರೂಪವ ಕಂಡಾಗ
ಕಣ್ಣೋಟಕೆ ಕಣ್ಣೋಟ ಬೆರೆತಾಗ
ಸೇರುವವು ದೇಹಗಳು ಆಕರ್ಷಣೆಯಲಿ
ಆಗ ಸ್ಪರ್ಷಿಸುವ ಕಾಮವೇ ಪ್ರೀತಿಯೇನು...?

ಅರಿಯದೆ ಬದುಕುತ
ಎದೆಯೊಳಗಿನ ಸ್ವಾರ್ಥವ
ಈಡೇರಿಸಿಕೊಳ್ಳಲು ಹೊಂದಿರುವ ಮಾರ್ಗದ
ಸಂಕ್ಷಿಪ್ತ ರೂಪದ ಶಬ್ಧವೇ ಪ್ರೀತಿಯೇನು...?

Thursday, May 5, 2011

|| ಸನಿಹಕೊಂದು ಗೆಳತಿ ಬೇಕು ||


ದಿನಕಳೆದ ಹಾಗೆಯೇ ವಯಸೀಗ ಜಾರಿದೆ
ಸನಿಹಕೊಂದು ಗೆಳತಿ ಬೇಕು
ಎಂದು ಮನವು ಹಾಡಿದೆ..
ಮನಬಿಚ್ಚಿ ಹೇಳುವ ದಿನದಿಛ್ಛೆಯಂತೆಯೆ
ಒಲವಿನಿಂದ ಇನಿಯ ಎಂದು
ಪ್ರೀತಿ ನೀಡಬೇಕಿದೆ...||

ಸೂರ್ಯಕಾಂತಿಯಂಥ ಮೊಗವ
ನೋಡುವಾಗ ಹೃದಯದಲಿ
ಗುಡುಗಿನಂತೆ ಮಿಡಿತಗಳಿಂದು
ಕೇಳಬೇಕು ನಿಂತಲೆ...||

ಸೂಜಿಮೊನೆಯ ಕಣ್ಣುಗಳಿಂದ
ನನ್ನ ನೀನು ಸೆಳೆಯುವಾಗ
ಖುದ್ದು ನಾನು ಹೇಳಬೇಕು
ನಿನ್ನೇ ಪ್ರೀತಿಸುವೆ ಎಂದು...||

ಹುಚ್ಚು ಬಗೆಯ ಮೆಚ್ಚೊ ಸಂದೇಶ
ಕದ್ದು ಕಳಿಸು ರಾತ್ರಿಲಿ
ನಿದ್ರೆಯಲ್ಲೂ ನೆನೆಯುವಂತೆ
ಮುದ್ದು ಮುದ್ದು ಕನಸಲಿ...||

Friday, April 29, 2011

|| ಸುಮ್ಮನೆ ಹೀಗೆ ಜೊತೆಯಲ್ಲಿ ||ಬಾ ಗೆಳತಿ ವಿಹರಿಸುವ ಕೈಯಲ್ಲಿ ಕೈ ಹಿಡಿದು
ಸುಮ್ಮನೆ ಹೀಗೆ ಜೊತೆಯಲ್ಲಿ
ಮುಂಜಾನೆ ಮುಸ್ಸಂಜೆ ಮಳೆಯಲ್ಲಿ ನೆನೆಯೋಣ
ಸುಮ್ಮನೆ ಹಾಗೆ ಜೊತೆಯಲ್ಲಿ....||

ಚಳಿಬಿಟ್ಟು ಕುಣಿಯೋಣ ಖುಷಿಯಲ್ಲಿ ತೇಲೋಣ
ಹೆಜ್ಜೆಯನು ಹಾಕುತ್ತ ಡೊಳ್ಳಿನ ಕುಣಿತಕೆ
ಕಿವಿತುಂಬ ಕೇಳೋಣ ಗೀಗೀಯ ಪದವನ್ನ
ಕಣ್ತುಂಬ ನೋಡೋಣ ಯಕ್ಷಗಾನವನ್ನ
ಸುಮ್ಮನೆ ಹೀಗೆ ಜೊತೆಯಲ್ಲಿ....||

ಸುಗ್ಗೀಯ ಸೊಗಸಲ್ಲಿ ಕಾಮನ ಸುಡುವಾಗ
ಬಣ್ಣವನು ಎರೆಚೋಣ ಕೋಲಾಟ ಆಡುತ್ತ
ನವಿಲಗರಿ ಹೆಕ್ಕೋಣ ನೆಲ್ಲಿ ನೇರಳೆ ಸವಿಯುತ್ತ
ಕಡಲತೀರದಿ ಕೂರೋಣ ಭಾಸ್ಕರನ ಬೀಳ್ಗೊಡುತ
ಸುಮ್ಮನೆ ಹಾಗೆ ಜೊತೆಯಲ್ಲಿ....||

Wednesday, April 27, 2011

|| ಸಿಹಿ ನಗು ||


ಬೇಕೇ ಬೇಕು ಒಂದು ನಗುವು ನಿನ್ನ ಮೊಗದಲಿ
ಸಾಕು ಸಾಕು ಒಂದು ನಗುವು ವಿಶ್ವ ಗೆಲುವಲಿ
ನೋವನೆಲ್ಲ ಮರೆಸುವ, ನಲಿವನೊಂದೆ ಉಳಿಸುವ
ಜೇನಿನಂಥ ಸಿಹಿಯು ಉಂಟು ಮನತುಂಬೊ ನಗುವಲಿ ||

ನಗುತಲಿರಲು ನಮ್ಮ ಮೊಗವು ಎಂಥ ಚಂದವೊ
ನಗುವಿನಿಂದ ಗಳಿಸಬಹುದು ಜಗದ ಪ್ರೀತಿಯ
ವೈರತ್ವವನ್ನ ಅಳಿಸಲು, ಮಿತ್ರತ್ವವನ್ನ ಬೆಳೆಸಲು
ಇರಲೆಬೇಕು ಮುಗುಳುನಗೆಯು ನಮ್ಮ ಮೊಗದಲಿ ||

ನಗುವು ತಾನೆ ಮನುಜಗೊಂದು ದೊರೆತ ವರವದು
ಬಲಸು ಅದನು ಅಸ್ತ್ರವಾಗಿ ವೈರಿಯನ್ನ ಮನಿಸಲು
ವಿಶ್ವಶಾಂತಿ ಪಸರಿಸಿ, ನೆಮ್ಮದಿಯಲಿ ಬದುಕಿಸಿ
ಸ್ವರ್ಗವನ್ನ ಭುವಿಗೆ ತರುವ ಶಕ್ತಿಯೊಂದೆ ನಗುವದು ||

Monday, April 25, 2011

|| ಮುಸ್ಸಂಜೆ ತಂಗಾಳಿಲಿ ||

ನೋಡುವಾಸೆ ಚಂದ್ರನನ್ನು ನಿನ್ನ ಕಣ್ಣಲಿ
ಒಲವ ಧಾರೆ ಸುರಿಸು ಬಾರೆ ನನ್ನ ಮನದಲಿ
ಕಾಣದಂತೆ ಎಲ್ಲಿ ಹೋದೆ ಮಾಯಗುಹೆಯಲಿ
ಬಳಿಗೆಬಂದು ನನ್ನ ಊಳಿಸು ನಿನ್ನ ಜೊತೆಯಲಿ

ನಿನ್ನ ಕುರುಹು ಸಿಗಬಹುದೇ ಮುಸ್ಸಂಜೆ ತಂಗಾಳಿಲಿ
ಕತ್ತಲೆಯ ಸೀಮೆಯಲಿ ಕೊಲ್ಮಿಂಚ ಬೆಳಕಿನಲಿ
ನಿನ್ನ ಮೊಗವ ನಾ ನೋಡಲು
ಶಿಲೆಯಲ್ಲಿ ಬರೆದಿರುವ ಓಲೆಯನು ಕಳಿಸುವೆನು
ನೀ ಹೀಗೆ ಬರಬಾರದೇ...?

ನಿನ್ನ ಕನಸಿನ ಕನಸಲ್ಲೂ ಕನಸಾಗಿ ನಾ ಬರುವೆ
ನನ್ನ ಮನಸಿನ ಮನಸಲ್ಲೂ ಮನಸಾಗಿ ನೀನಿರುವೆ
ನಿನ್ನ ಕಂಪಿನ ಪರಿಸರವು ನನ್ನ ಸುತ್ತ ಇರುವಾಗ
ಉಸಿರಾಡುವ ಜೀವಕೆ ಹೊಸ ಹುರುಪು ಬಂದಾಗ
ನೀ ಹಾಗೆ ಸಿಗಬಾರದೇ....?                       
ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ

Thursday, April 14, 2011

|| ಸ್ಪೂರ್ಥಿ ಗೀತೆ ||

ಕಾಣದ ಮನಸದು ಕೈಗಳ ಚಾಚಿ ಕರೆಯುತಿದೆ
ಆದರು ಎದೆಯಲಿ ಮರೆಯದ ನೋವೆ ಕೆದರುತಿದೆ ||

ಸುಪ್ತ ಮನಸಲಿ ಅರಿಯದ ಭಾವನೆ ಮೂಡುತಿದೆ
ಅದು ಗುಪ್ತಗಾಮಿನಿಯ ವೇಷದಲಿ ಮೆರೆಯುತಿದೆ ||

ಹಣೆಯ ಬರಹಗಳ ಓದಲು ಆಗದು ಎಂದೆಂದು
ಹಾಗೆ ಪ್ರೀತಿಯ ಬರಹವ ಅಳಿಸಲಾಗದು ಮುಂದೆಂದು ||

ಪಡುವಣ ಸೂರ್ಯನ ಕಿರಣಗಳಲ್ಲಿ ಹೊಸಬೆಳಕು
ಕಾಣುವ ಕನಸಿದು ಊರುಳುತಿದೆ ಪ್ರತಿ ಇರುಳು ||

ನೀನು ತಿಳಿಯಲೆ ಬೇಕು ಆಗುವುದೆಲ್ಲ ಒಳ್ಳೆಯದಕ್ಕೆ
ಮುಂದೆ ನಡೆಯುವುದೆಲ್ಲವು ಸೂತ್ರದಾರನ ಆಶಯದಂತೆ ||

Sunday, April 10, 2011

|| ಕಾಣದ ಮೊಗವನು ಬಯಸುತ ಹೊರಟಾಗ ||

ಮೊಗ್ಗೊಂದು ಹೂವಾಗಿ ಅರಳುವ ಹಾಗೆ
ನೀನೊಮ್ಮೆ ನಗಬಾರದೆ...?
ಚೈತ್ರದ ಕೋಗಿಲೆಯ ದನಿಯಂತೆ
ನನ್ನ ಹೆಸರನೊಮ್ಮೆ ನೀ ಕೂಗಬಾರದೆ...?
ಉಸಿರಲ್ಲಿ ಬೆರೆತಿರುವ ಒಲವೆಲ್ಲ ಸೇರಿ
ಕಾಣದ ಮೊಗವೊಂದು ನನ್ನ ಕಣ್ಣಲಿ ಸೆರೆಯಾಗಿದೆ....||

ಯಾಕೋ ಕನಸೊಂದು ಕಾಣುವ ವಯಸಿಂದು ಶುರುವಾಯ್ತು
ನಿನ್ನ ಕಂಡ ಕ್ಷಣದಿಂದಲೆ...
ಕಾಣುವ ಕನಸನ್ನು ಕಳೆಯುವ ವಯಸನ್ನು
ತಾಳೆನೋಡಿ ತಿಳಿಯುವೆ ನೀ ಬರುವ ದಿನಗಳನು
ಹೊತ್ತಲಿ ನಿನ್ನ ಮಡಿಲಲಿ
ಮಂಜಂತೆ ನಾ ಕರಗಿ ನೀರಾಗಲೆ...||

ಮುಂಗಾರು ಎದುರಾಗಬಹುದು
ನಮ್ಮ ಜೋಡಿ ಚಿಗುರೊಡೆಯಲೆಂದು
ನಾ ನೋಡ ಸಿಗಬಹುದೆ ನಿನ್ನ ಮೊಗವ
ಸಿಂಗಾರ ಫಲವಾದ ದಿನದಂದು
ನಿನ್ನ ಹೊತ್ತು ಮೆರೆಯಲೆ ಖುಷಿಯಲ್ಲಿ ನಾನು
ನಮ್ಮ ಹರಸುವ ಶಿವಗಂಗೆಯಂತೆ
ಇನ್ನೆಲ್ಲೂ ಸಿಗದಂತ,ಇನ್ಯಾರು ಕೊಡದಂತ ಒಲವನ್ನ ನೀಡಲೆಂದು
ಕಾಯುತ್ತ ಹೋರಟಿಹುದು ಜೀವ ನಿನ್ನ ಸೇರಲೆಂದು...||

ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ

Thursday, March 17, 2011

|| ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ ||

ಒಂಟಿಯಾದ ಬಾಳಲಿ ಒಬ್ಬಂಟಿಯಾದ ಸಮಯದಿ
ಮನಸಿನ ಮಿಡಿತಗಳು
ಕಲ್ಪನೆ ಕನಸಿನ ಕೂಸಾಯ್ತು
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ……..||

ಮೊಹಗಾರ ನಾನು ಅಲ್ಲ
ನಿನ್ನ ಅಂದ ಚೆಂದಕ್ಕೆಂದು
ಸಾಲಗಾರನಾದೆ ಇಂದು
ನಿನ್ನ ಒಲವ ಬಯಸಿ ಬಂದು
ಕಾಣದಾಗ ಕನ್ಮಣಿಯನು
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ…….||

ಅನಿಸುತಿಲ್ಲಾ ಚಂದ್ರನಿಂದು
ನಿನಗಿಂತಲು ಚೆಂದವೆಂದು
ಕುರುಡನಾಗಿ ಹೋಗಬೇಕು
ನಿನ್ನ ಕಂಡಮೇಲೆ ನಾನು
ನೋಡುವಾಸೆ ಮೀರಿದಾಗ
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ………||

ರವಿ ಕಾಣದೂರಿನಿಂದಾಚೆಗೆ ನಿನ್ನ ಹೋತ್ತೊಯ್ಯುವೆ
ಅಲ್ಲಿ ಪ್ರೇಮಗುಡಿಯೊಂದ ನಾನು ಕಟ್ಟಿಕೊಡುವೆ
ಪ್ರೇಮದೇವಿಯಾಗಿ ನಿನ್ನ ಪೂಜೆ ಮಾಡುವೆ
ಪ್ರೇಮ ನಿವೇದಿಸಲೆಂದು ಬಂದು ಪೂಜಾರಿಯಾಗುವೆ
ಮಂತ್ರವೆಂದು ಪ್ರೇಮಗೀತೆ ಹೇಳುವಾಗ
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ…….||

ಜಡೆಯ ಹಾಕಿ ಮುಡಿಗೆ ಮಲ್ಲಿಗೆ ಹೂವು ಮುಡಿಸಲೆ
ಹಣೆಗೆ ಬೊಟ್ಟು ಇಟ್ಟು ನಿನಗೆ ದೃಷ್ಟೀ ತೆಗೆಯುವೆ
ಪೂರ್ಣ ಶಶಿಯ ತೋರಿಸುತ್ತ ಹರಟೆ ಹೊಡೆಯಲೆ
ಪ್ರತಿ ಜನ್ಮದಲ್ಲೂ ನಿನ್ನ ಪ್ರೇಮದಾಸನಾಗಿ ಉಳಿಯುವೆ
ತುಡಿತದಿಂದ ಮನದ ಕಂಪನ ಜಾಸ್ತಿಯಾಯ್ತು
ಬೆಳದಿಂಗಳ ರಾತ್ರಿಯಲಿ ಅವಳನ್ನೇ ನೆನೆಯುತ್ತ……..||

                                                           
                                                            :-ಗುರಿ ಮುಟ್ಟುವ ತನಕ,
   ವಿನಾಯಕ ಭಾಗ್ವತ

Sunday, February 27, 2011

|| ಹೊಂಬೆಳಕು ||

ಮೂಡಿದೊಂದು  ಕಿರಣದಿಂದ
ಜ್ಯೋತಿಯೊಂದು  ಬಳಿಗೆಬಂದು
ಕತ್ತಲಲ್ಲಿ ಕಣ್ಣು ತೆರೆಸಿದೆ
ಮನಕೆ ಕವಿದ ಮೊಡ ಕರಗಿದೆ...||

ಹುಟ್ಟಿನಿಂದ ಬಂದರೇನು...?
ಸ್ನೆಹದಿಂದ ಆದರೇನು...?
ಮನದ ಮಿಲನವೊಂದೇ ತಾನೆ
ಬಾಳ ಬೆಳಗೊ ಸಂಬಂಧವು...||

ಸ್ವಂತಿಕೆಯನು ಮಾರಿಕೊಂಡು
ಪರರ ತಾಳಕೆ ಕುಣಿದುಕೊಂಡು
ಮುರ್ಖತನದಲಿ ಮುರಿಯಬಹುದೇ..?
ಮೌಲ್ಯಯುತವಾದ  ಸಂಬಂಧವ....||

ಬುದ್ಧಿವಾದವ ಹೇಳಬೇಡ
ತನ್ನತನವೇ ಇಲ್ಲದವಗೆ
ಹಿತನುಡಿಯ ತಪ್ಪಾಗಿ ತಿಳಿದರೆ
ಕಪ್ಪಾಗಿ  ಹೋಗುವುದು ಸಂಬಂಧವು...||

ಮೋಹದಿಂದ ಮರುಳನಾಗಿ
ನೋವನೆಂದು ಆಮಂತ್ರಿಸದಿರು
ಒಳ್ಳೆತನದಿ ಕಣ್ತೆರೆದು ನೋಡು
ಹೊಂಬೆಳಕಾಗಿ ಬರುವುದು ಸಂಬಂಧವು...||