Saturday, April 28, 2012

|| ನವಜೀವನ ||

ಭಾಗ್ಯದ ಜ್ಯೋತಿಯನು
ಹಚ್ಚಿ ಬೆಳಗುವಳು ಮನೆಯ
ವಿವಾಹ ಬಂಧನದಿಂದ
ನವಜೋಡಿಗಳ ಉದಯ
ಅರಿಯದ ಜೀವಗಳು
ಜೊತೆಯಲಿ ಬಾಳುವ ಸಂಕಲ್ಪ
ಎಳೇಳು ಜನ್ಮದ ಸಂಬಂಧ
ಅನುಬಂಧವಾಗಿಸುವ ಈ ಬಂಧ ||

ಹರಿಯುವ ನದಿಯು ಭೋರ್ಗರೆಯುವ
ಕಡಲಲಿ ಅಂತ್ಯಕಂಡಂತೆ
ಪ್ರೀತಿಸುವ ಹೃದಯಗಳು
ಜೀವನವೆಲ್ಲ ಜೋತೆಯಿರಲು ಮದುವೆಯಾದಂತೆ
ಅನುರಾಗದ ಅನುಬಂಧವು ಜೀವನದ
ದೋಣಿಯೊಂದರಲ್ಲಿಯೇ ಇಬ್ಬರನ್ನು ತೇಲಿಸಲಿ ||

ಮಾಗಿಯ ಕಾಲದಲ್ಲಿ
ಸಿಹಿ ಮಾವಿನ ಹಣ್ಣೆ ರುಚಿಯು
ಎರಡು ಜೀವಗಳು ಎಲ್ಲರೆದುರಲಿ ಜೊತೆಯಾಗಲು
ಮದುವೆಯ ಸಮಾರಂಭವೆ ಶುಚಿಯು
ಎಲ್ಲರೆದುರಲಿ ಜೀವಗಳೊಂದಾಗಲು
ನೋಡಲು ಚೆನ್ನ ಆಶೀರ್ವದಿಸುತ ||

ಏಳು ಹೆಜ್ಜೆಯನು ನಡೆವರು
ಜೀವನವೆಲ್ಲ ಜೊತೆಯಾಗಿರಲು
ಹಿರಿಯರು ಹಾಕುವರು ಬಂಧಿಗಳಾಗಲು ಬ್ರಹ್ಮಗಂಟು
ಸಂಗಾತಿಗಳಾದ ಮೇಲೆ ಮುರಿಯದಿರಲಿ ಬಾಳನಂಟು
ಅರಿತು ಬದುಕಲಿ ಬಾಳಸುಳಿಯಲಿ
ಮುಳುಗದಿರಲಿ ಬಾಳನೌಕೆಯು ನೀರಲಿ ||

No comments:

Post a Comment