Thursday, November 29, 2012

|| ಬದುಕು ಮೂರೆ ದಿನ ||

ಅನಿಸಿದ ಪದಗಳನು
ಬರೆಯುತ ಕಳೆಯುವೆನು
ಸಾಗುತ ದೂರ
ಬಯಸುತ ತೀರ
ಪಯಣವು ಕಾಣದ ದಾರಿಯಲಿ ||

ಜೀವನ ಇಷ್ಟೇನೆ
ನಮ್ಮ ಬದುಕು ಕಷ್ಟಾನೆ
ಬಯಸಿದ ಬದುಕನು
ಸಾಕಾರ ಗೊಳಿಸಲು
ನಿಲ್ಲದು ನಿರಂತರ ಹೋರಾಟ ||

ಆದಿಯಲಿ ಆಸೆಯು
ಅಂತ್ಯವನು ತಲುಪಲು
ಬವಣೆಯು ನಡುವಿನಲಿ
ಜನಿಸಲೊಂದು ದಿನ ಸಾವಿಗೊಂದು ದಿನ
ಬಾಳಲೊಂದು ದಿನ ಬದುಕು ಮೂರೆ ದಿನ ||

|| ಸೊಗಸು ||

ಹಾಡುತ ಹೃದಯದ ಗೀತೆ
ಬರೆಯುತ ಒಲವಿನ ಕವಿತೆ
ನೋಡಿದ ಕ್ಷಣದಲಿ ಮನವು
ರಮಿಸುತ ಬಯಸಿದೆ ಮಡಿಲನು
ಸಾಹಿತಿ ಮಾಡಿತು ನನ್ನನು ||

ನಿನ್ನ ರೂಪ ಬಣ್ಣಿಸಲು
ಬರೆವೆನೆಂದು ಕವನವ
ಪಲ್ಲವಿಯೆ ಇಲ್ಲದ ಚರಣವ
ಗಾನಸುಧೆಯ ಹರಿಸಲೆಂದು
ಕಲಿವೆ ಶಾಸ್ತ್ರೀಯ ಸಂಗೀತವ ||

ಛಾಯಾಚಿತ್ರ ಬಿಡಿಸುತ
ಶಿಲ್ಪಿಯಾಗ ಬಯಸುತ
ಹರಿದೆ ನೂರು ಹಾಳೆಯ
ವರ್ಣಿಸಲಾಗದ ನಿನ್ನಯ ಸೊಬಗನು
ಕಣ್ತುಂಬ ನೋಡಲು ಬಲು ಸೊಗಸು ||

|| ಶುಭಾಶಯ ||

ಚಂದಿರ ನಗುತ ಬಂದಿರಲು
ತಂಪು ಬೆಳದಿಂಗಳನು ತಂದಿರಲು
ನುಡಿವ ಮಾತುಗಳೆಲ್ಲ
ಮಣಿ ಮುತ್ತುಗಳು ಉದುರುವ ಹಾಗೆ
ನೀ ಬೆಳೆದು ನಿಂತಿಹೆ
ದಿನವು ಬಂದಿದೆ
ಎದೆ ತುಂಬಿ ಮಾಡುವೆನು
ಜನುಮ ದಿನದ ಶುಭಹಾರೈಕೆಯನು ||

ನೀ ನಡೆವ ದಾರಿಯಲಿ
ಮೆತ್ತನೆಯ ಹೂ ತುಂಬಿರಲಿ
ಮೊಣಚಾದ ಮುಳ್ಳುಗಳು
ಚುಚ್ಚುವುದ ಬಿಟ್ಟರಲಿ
ಅಣಿಯಾಗುವ ಕೆಲಸದಲಿ
ಶುಭ ಘಳಿಗೆ ನಿನದಾಗಲಿ
ಸಿಹಿ ಕಹಿ ಕ್ಷಣದಲಿ
ಅಪಜಯವು ಅಳಿದಿರಲಿ ||

ಹಾಲ್ನಗೆಯ ಮೊಗದಲಿ
ಕೋಗಿಲೆಯ ಗಾನದಲಿ
ಜಗದಲ್ಲಿ ನಿನ್ನ ಕುರುಹು
ತುಂಬುತ ಚಿಮ್ಮಿರಲು
ಪ್ರೀತಿವಿಶ್ವಾಸದಿಂದ ಸೆಳೆಯುತ
ಎಲ್ಲರ ಚಿತ್ತವನು ಕದ್ದಿರುವೆ
ಸರ್ವರು ಸಮಯೋಚಿತವಾಗಿ ಹರಸುವರು
ಹುಟ್ಟುಹಬ್ಬದ ಶುಭಾಶಯ ಮಾಡುವರು ||