Thursday, January 31, 2013

|| ಸಾರ್ವಕಾಲಿಕ ಸತ್ಯ ||

ಕೈಯಲಿ ಗಡಿಯಾರ
ಕಳೆದರೂ ಶನಿವಾರ
ಹಿಡಿಯೋಕೆ ಸಮಯಾನ
ಆಗದು ಯಾಕಯ್ಯ ||

ದಿನಕೊಂದು ವಾರವು
೩೦ ದಿನಕೊಂದು ತಿಂಗಳು
೩೬೫ ದಿನಕೊಂದು ವರ್ಷವು
ತಿಳಿಯಯದ ಹಾಗೇನೆ ಓಡೋದು ಕಾಲವು ||

ಇಂದೇನೊ ಸೋತೇವು
ನಾಳೆ ನಾವು ಗೆದ್ದೇವು
ಏಳು ಬೀಳೀನ ಆಟದಲಿ
ನಿಲ್ಲದು ತಿರುಗುವ ಚಕ್ರವು

ಯಾವತ್ತು ಸೂರ್ಯಾನು
ಪೂರ್ವದಿ ಮೂಡೋನು
ದಿನ ನಡೆಯೊ ಸತ್ಯಾನ
ಮಾಡಲಾಗದು ಮಿಥ್ಯಾನ ||

ಚಂದ್ರ ಕರಗುವನು
ಪೌರ್ಣಿಮೆಯಲಿ ಅರಳುವನು
ಕುಗ್ಗುತಲಿ ಹಿಗ್ಗುತಲಿ
ಪ್ರತಿ ತಿಂಗಳು ಬೆಳಗುವನು ||

ಅಡಗಿರೊ ಜಗದ ಸತ್ಯಾನ
ಬೇಧಿಸ ಹೊರಟರೂನು
ಅವನು ಹಾಕೋ ತಾಳಕ್ಕೆ
ನಾವು ಕುಣಿಯೋದು ಪಕ್ಕಾನೆ ||

Wednesday, January 30, 2013

|| ಕಮರಿದ ಪ್ರೀತಿ ||


ನಿನ್ನ ಪ್ರೀತಿ ಮಾಡುತ
ನಾನು ಹೇಗೆ ಬಾಳಲಿ...?
ನಿನ್ನ ಸನಿಹವಿಲ್ಲದೆ
ನಾನು ಹೇಗೆ ಸಾಯಲಿ...?
ರಾತ್ರಿ ಕನಸಿನಲ್ಲು ನಿನ್ನ
ಒಲವನು ಕಾಣದೇ
ಹಗಲು ನನಸಿನಲ್ಲಿ
ಪ್ರೀತಿಯ ಅರಮನೆ ಕಾದಿಹೆ ||

ಕಣ್ಣ ಹನಿಯು ಉದುರಿದ ಹಾಗೆ
ಜೀವನ ಮುಗಿಯದು
ಒಂಟಿತನವು ಕಾಡಿದ ಮೇಲೆ
ಕಳೆದ ಪ್ರೀತಿಯು ಮರಳದು
ದೇವತೆಯಾಗಿ ಬಳಿಗೆ ಬಂದರೂ
ಪೂಜೆ ಮಾಡಲಾಗದೆ ಸೂತಿಹೆ
ಕೋಳೆ ಇರದ ಗುಡಿಯಲಿ
ನನ್ನ ಪ್ರೀತಿಯು ಬಾಡಿದೆ ||

ಮನೆಯೇ ಇರದ ಮಂಟಪದಲಿ
ನಿನ್ನ ಕೂರಿಸಿ ನೋಯಿಸಿದೆ
ಹೇಳದ ಹಲವು ರೀತಿಯಿಲಿ                                                                      
ನಿನ್ನ ಮಾನವ ಕಳೆದಿಹೆ
ನನ್ನ ಒಳಿತನು ಬಯಸುತ
ಮೇರು ಒಲವನು ತೋರಿದೆ
ಪ್ರೇಮದ ಗುರಿಯ ತಿಳಿಯದೆ
ನಿರ್ಲಕ್ಷದಲಿ ಪ್ರೀತಿಯು ಕಮರಿದೆ ||

|| ಸೂತ್ರದಾರ ||


ಭಾವ ನಿನದು ದೇಹ ನನದು
ಬಳಸಿದಂತೆ ಬಾಗುವೆ
ಹಾಡು ನನದು ರಾಗ ನಿನದು
ಬರೆವ ಆಶಯ ಅರಿಯದು
ಕಣ್ಣ ಹನಿಯು ಉದುರಿತಲ್ಲ
ಬರೆದ ಪದಗಳ ಅಳಿಸಲು
ಕರ್ಮ ನನದು ಕಾರಣ ನಿನದು
ಕಾಣನು ಕುಣಿಸುವ ಸೂತ್ರದಾರನು ||

Friday, January 11, 2013

|| ಬಾಳ ಸಾರಥಿ ||

ಗಗನದಲಿ ಉರಿಯುವ ರವಿಯು
ಜಗವ ಬೆಳಗಲು
ಬಾನಿನಲಿ ಮಿನುಗುವ ಶಶಿಯು
ತಂಪ ನೀಡಲು
ಜೊತೆಯಲಿ ಸಾಗುವ ಪತಿಯು
ದೋಣಿ ದಾಟಲು ||

ಪತಿಯೇ ನಿನ್ನ ಸತಿಯು ನಾನು
ಎಂದೋ ಮಾಡಿದ ಪುಣ್ಯವು
ಹೇಗೆ ನಾನು ಜಯಿಸಲಿ
ಸೋಲುವೆನು ನಿನ್ನ ಸೆಳೆತಕೆ
ಹಗಲ ಕಂಪು ಇರುಳ ತಂಪು
ಮಾಡಿತು ನನ್ನನು ದಾಸಿಯ ||

ನೋವು ಎಂದು ಸುಳಿಯದಂತೆ
ಕಣ್ಣೆದುರು ಕಷ್ಟ ಕಾಣದಂತೆ
ಮನದ ಇಚ್ಛೆ ಮಾಸದಂತೆ
ಯಾರ ಎದುರು ಬಾಗದಂತೆ
ಮಾಡಿದೆ ನನ್ನ ಸುಖಿಯನು
ಬಿಟ್ಟು ಬದುಕೆನು ಬಾಳ ಸಾರಥಿ ||

|| ತತ್ಕಾಲಿಕ ||


ಮಂಜು ಕರಗಿ ಹನಿಯಾದರೆನಂತೆ
ಮುಂಜಾವಿನ ನೀರು ಮಳೆಯಾಗದು
ಉರಿಯಲಿ ಬೆವೆತು ಒದ್ದೆ ಯಾದರು
ಮಿಂದಂತೆ ಮೈ ಮನ ಶುಚಿಯಾಗದು ||

ಬರುವ ನೀರನು ಹೊರ ಹಾಕಿ ಹರಿಸಿದರೂ
ತಿರುಗಿ ತುಂಬಿವ ಭರವಸೆಯುಂಟು ಕಣ್ಣಿಗೆ
ಹರಿವ ನೀರದು ನಿಲ್ಲದು ಹೊಸ ನೀರು ಬಂದಾಗ
ಹಳೆ ನೀರು ಹೊರಡುವುದು ಕೊನೆಕಾಣುತ ||

ಅಡೆಕೆ ಕದ್ದಾಗ ಹೋದ ಮಾನವು
ಆನೆ ಕೊಟ್ಟರೂ ಮರಳದು
ಸಣ್ಣ ಕೆಲಸದಲಿ ಹೋದ ನಂಬಿಕೆ
ಜೀವ ಕೊಟ್ಟರೂ ಮರಳದು ||

ನೀರ ಅಲೆಯಲಿ ಚೂರಾದ ಚಂದ್ರನು
ಸ್ವಛ್ಚಂದದ ಬಾನಿನಲಿ ಚಂದವು
ಹಲವರು ಸೇರಿ ಮರ್ಯಾದಿ ತೆಗೆದರೂ
ಒಳ್ಳೆತನವ ಕೊಲ್ಲಲಾಗದು ಮಾತಿನಲಿ ||

Monday, January 7, 2013

|| ಹೊಸ ವರುಷ ||

ಹೊಸ ವರುಷ ಬಂದಿದೆ
ಹೊಸ ಹರುಷ ತಂದಿದೆ
ನವ ಕನಸಿನ ಉಯ್ಯಾಲೆ
ಭರವಸೆಯ ಕರೆಯೋಲೆ
ನಿರೀಕ್ಷೆಗಳೆಲ್ಲವು ಕಣ್ಣ ಮುಂದಿದೆ ||

ಮಳೆ ಬೆಳೆ ಚೆನ್ನಾಗಿ ಆಗುವುದೆಂದು
ಭರವಸೆಯಲಿ ರೈತಾಬಿ ಬಂಧುಗಳೆಲ್ಲರು
ಹಣದುಬ್ಬರ ಏರಿಳಿತ ಸಮವಾಗಿರಲೆಂದು
ಆಶಿಸಿಹರು ತಂತ್ರಜ್ನಾನದ ಉದ್ಯೋಗಿಗಳು
ಮಾರುಕಟ್ಟೆ ವಹಿವಾಟು ಸರಿಯಾಗಿ ಸಾಗಲೆಂದು
ವರ್ತಕರೆಲ್ಲರು ಆಶಾಭಾವದಲಿ ಬಯಸಿಹರು ||

ಓದಿನಲಿ ಯಶಸ್ಸು, ವಿದ್ಯೆಯಲಿ ಪಾಂಡಿತ್ಯ,
ಗಳಿಕೆಯಲಿ ಉನ್ನತಿ, ಬದುಕಿನಲಿ ಸಾಧನೆ,
ಮನದಾಸೆಯು ಇಡೇರುವುದೆಂದು
ಎದುರುನೋಡುತಿಹರು ಸಾರ್ವಜನಿಕರು
ಸರ್ವರಿಗು ಸಿದ್ಧಿಯಾಗಲಿ ನವ ಜೀವನವು
ಹೊಸತನವ ಹೊತ್ತು ಹುಟ್ಟಿದೆ ಹೊಸ ವರುಷವು ||