Friday, March 29, 2013

ಅರ್ಥವಾದರೆ ತಿಳಿದುಕೊಳ್ಳಿ


ಒಬ್ಬರ ಮನಸಿನ ಭಾವನೆಗಳು ಅವರ ಮಾತಿನಲಿ, ಅವರ ಮುಖಲಕ್ಷಣಗಳ ಪ್ರತಿಕ್ರಿಯೆಯಲಿ ಗೋಚರಿಸುತ್ತದೆ. ನಮ್ಮ ಕ್ರಿಯೆಗಳಿಗೆ, ಮಾತುಗಳಿಗೆ ಅವರ ಮಾತುಗಳು ನೀರಸವಾಗಿದ್ದಲ್ಲಿ ಅಂಥವರುಗಳಿಗೆ ನಿಮ್ಮ ಮಾತುಗಳಿಗಾಗಲಿ, ಕ್ರಿಯೆಗಳಿಗಾಗಲಿ ಪ್ರತಿಕ್ರಿಯಿಸುವಲ್ಲಿ ನಿರಾಸಕ್ತಿ ಇರುತ್ತದೆ. ಅಥವಾ ಅವರುಗಳು ಬೇರಾವೊದೋ ಗಡಿಬಿಡಿಗಲ್ಲಿ, ಚಿಂತೆಗಳಲ್ಲಿ, ಕೆಲಸದಲ್ಲಿ ಮಗ್ನರಾಗಿರುವುದು ಖಚಿತವಾಗುತ್ತದೆ.

ಅರ್ಥವಾದರೆ ತಿಳಿದುಕೊಳ್ಳಿ ಇಲ್ಲವೆಂದಲ್ಲಿ ತಲೆ ಕೆರೆದುಕೊಳ್ಳಿ.

Monday, March 25, 2013

|| ನೆನಪಿನಂಗಳ ||


ಕಳೆದ ದಿನಗಳು ಬೇಕು
ಯಾಂತ್ರಿಕತೆಯ ಬದುಕಲಿ
ಎಲ್ಲರ ಮುದ್ಧಿನ ಮಗುವು
ಹಠವನು ಮಾಡಿದರು ಹರುಷವು
ಮರಳದು ಬೇಡಿ ತಪವನುಗೈದರು
ಹಿಂತಿರುಗೆವು ಹಿಂದಿನ ಬಾಲ್ಯಕೆ ||

ಅತ್ತರು ನಕ್ಕರು ತಿನಿಸುವರು
ಚಪ್ಪರಿಸುವ ಬಾಯಿಗೆ ಸಿಹಿಯನು
ಸರ್ವರು ತೋರುವರು ಕಾಳಜಿಯನು
ಬೀಳದಂತೆ ನೋಡುತ ಎಡವಿದರು
ಕಚಗುಳಿಯಿಡುತಲಿ ತುಂಟಾಟ ಮಾಡುತಲಿ
ಹುಚ್ಚುತನದಿ ಕಾಡಿದರು ಸಹಿಸುವರು ||

ಆನೆಯ ಮೇಲೆ ಅಂಬಾರಿ ಮಾಡುತ
ಉಪ್ಪಿನ ಮೂಟೆ ಬೇಕೆಂದು ಕೇಳುತ
ಕಂಬದಾಟದ ಜೊತೆ ಕಣ್ಣಮುಚ್ಚಾಲೆಯು
ಕವಡೆಯಾಟದಲಿ ಕಬಡ್ಡಿ ಜಗಳವು
ಸಾದುಗೋದುವಿನಾಟದ ಹರುಷವು
ಹಾಣೆಯಾಟದಲಿ ಹಂಡಿಯ ಸಹಿಸದ
ಮರಳದು ಜೋಕಾಲಿಯಾಡುವ ಸುಂದರ ದಿನಗಳು ||

ಗುಡ್ಡಗಾಡಿನಲಿ ಗರಗರ ತಿರುಗುತ
ನವಿಲುಗರಿಗಳ ಸಂಗ್ರಹ ಮಾಡುತ
ಜಂಬೆ ಮುಳ್ಳೆ ಹಣ್ಣಿಗೆ ಕಣ್ಣನು ಹಾಕುತ
ಬಿಂಬಲಕಾಯಿ ನೆಲ್ಲಿಕಾಯಿಯ ಕೀಳುತ
ಮಾವು ಹುಣಸೆಗೆ ಕಲ್ಲನು ಹೋಡೆಯುತ
ತೊದಲು ಮಾತಿನಲಿ ಬೈಗುಳ ಬಲುಚಂದ ||

ಚೆನ್ನೆಮನೆ ಆಡುತ ಚದುರಂಗ ಕಲಿಯಲು
ಪಗಡೆಯಾಟದಲಿ ಛಲಗಾರರಾಗಲು
ಮುಟ್ಟು ಆಟದಲಿ ಮುನ್ನುಗ್ಗುವ ವೀರರಾಗಲು
ಸಾಮಾಜಿಕ ಅರಿವಾಗುವುದು ಜನರಲಿ ಬೆರೆಯಲು
ಖುಷಿಯಲಿ ತೇಲುವ ತಲೆಬಿಸಿಯಿಲ್ಲದ ಸಮಯವು
ಬಯಸಿದರು ಬಾರದ ಬಾಲ್ಯದ ನೆನಪಿನಂಗಳ ||

Friday, March 22, 2013

|| ಪತಿಯಂತೆ ವರ್ತಿಸೆನು ||


ಬಾಗಿಲನು ತೆರೆದಿರುವೆ
ಪ್ರೀತಿಗಾಗಿ ಕಾಯುತಲಿರುವೆ
ನನ್ನ ಹೃದಯದರಮನೆಯಲಿ
ರಾಣಿಯಾಗಿ ಮೆರೆಯುತಿರುವೆ
ಕೂಗಿ ಹೇಳುವೆ ಒಲವ ಗೆಳತಿಯೆ
ಯಾರ ಎದುರಲಿ ನಿಂತರು ||

ಬಂಧನದಲಿ ಬಾಗಿಯಾಗುವ
ಮನೆಯ ನಂದಾದೀಪ ನೀನು
ನಿನ್ನ ಮನಸು ಹೂವಿನಂತೆ
ಕಾಯುವೆ ಕಾವಲುಗಾರನಂತೆ
ಮೊಣಚಾದ ಮುಳ್ಳು ಸೋಕದಂತೆ
ಅಂಟಿಕೊಂಡೆ ಇರುವೆನು ಕವಚದಂತೆ ||

ನನ್ನ ಮನಸಿನ ಭಾವನೆ ತಿಳಿಯದೆ
ನಿರಾಕರಸದಿರು ಸ್ವಾರ್ಥಿಯೆಂದು
ಜೋಪಾನ ಮಾಡುವೆನು ಮಗುವಿನಂತೆ
ಬೇರಾರು ನೀಡರು ಮಾನ್ಯತೆಯನು ನನ್ನಂತೆ
ನಿನ್ನೆಲ್ಲ ಕೆಲಸಗಳು ನನದೆಂದು ತಿಳಿಯುವೆನು
ಬಾಳ ಗಳೆಯನಾಗಿರಲು ಪತಿಯಂತೆ ವರ್ತಿಸೆನು ||

|| ಕಾಣುವ ದೇವರುಗಳು ||

ಕಣ್ಣಿಗೆ ಕಾಣದ ದೇವರ ಪ್ರಾರ್ಥಿಸಿ
ಕೈಗಳ ಮುಗಿಯುವ ಭಕ್ತಿಯು ನಮ್ಮದು
ಹೊತ್ತುವ ಹೆತ್ತುವ ಸಲಹುವ ತಾಯಿಯು
ಪೊಷಿಸಿ ಸಲಹುವ ತಂದೆಯ ಮಮತೆಯ
ಮರೆಯಲು ಸಾಧ್ಯವೆ ಸತ್ತರೂ ಬಾಳಲಿ
ನೆನೆಯುವ ಸಂಸ್ಕೃತಿ ನಮ್ಮಲೆ ಉಳಿಯಲಿ ||

ಕರಗಳ ಜೋಡಿಸಿ ತೋರುವ ಪ್ರೀತಿಗಿಂತ
ಮನಸಿಂದ ಗೌರವಿಸಿ ಖುಷಿಯನು ಪಡಿಸುವ
ಹರಸಲು ಮನತುಂಬಿ ನಮ್ಮಯ ಬಾಳಿಗೆ
ಏಳಿಗೆ ಇರುವುದು ರೋಧಿಸೋ ಜೀವಕೆ
ಹೆತ್ತವರ ಮನಸಿಗೆ ನೋವನು ಮಾಡದೆ
ಕಣ್ಣಿಗೆ ಕಾಣುವ ದೇವರುಗಳ ಪೂಜಿಸುವ ||

Friday, March 15, 2013

|| ಭಾವವಿರದ ಬರಹ ||


ಭಾವವಿಲ್ಲದ ಬರಹ
ದನಿಯೇ ಇಲ್ಲದ ಸಂದೇಶ
ನುಡಿಯದೆ ತಿಳಿಸುವ
ಅನೌಪಚಾರಿಕ ವ್ಯವಹಾರ ||

ಯಾವುದೋ ಅರ್ಥದಲಿ
ಹೇಳುವ ಪದಗಳನು
ಬೇರೆ ರೀತಿಯಲಿ ತಿಳಿಯಲು ಸಾಧ್ಯ
ಒದುಗನು ಅವನದೇ ಭಾವದಲಿ ||

ಲೇಖನವ ಒದಿ ಅರಿಯಲು ಸಾಧ್ಯ
ಭಾವನೆಯಿಲ್ಲದ ಬರಹವು ಸತ್ಯ
ಓದಿ ತಿಳಿದು ಜ್ನಾನವ ಗಳಿಸುವ ಭಾಗ್ಯ
ಭಾವನೆಯಲಿ ಪುಸ್ತಕದ ಬದನೆಕಾಯಿ ಮಿತ್ಯ ||

ವ್ಯವಹಾರ ಮಾಹಿತಿ ವಿನಿಮಯ ಪತ್ರಗಳಿಂದ
ಕೊಡುವುದು ಕೊಂಬುದು ಬರೆವ ಸೂತ್ರಗಳಿಂದ
ಅಗತ್ಯವಾದ ಸಾರ್ವಕಾಲಿಕ ಲಿಖಿತದ ಸಾಕ್ಷಿಯು
ಸಂತೈಸದಾರನು ನೋವಿನಲಿ ಬೆಂದಿಹನೆಂದು ||

|| ಭಾವದಲಿ ನೀ ಸ್ವಂತ ||


ಗೆಳತಿ ನಿನ್ನ ಬಯಸಿರುವೆ
ಪ್ರೀತಿಗಾಗಿ ಕಾದಿರುವೆ
ನಿನ್ನ ಮುದ್ದು ಮಾತುಗಳು
ನನ್ನ ಮನವ ದೋಚಿಹುದು
ನಿನ್ನ ಮುಖದ ಮುಗ್ಧತೆಯು
ಎದೆಗೆ ಕನ್ನ ಹಾಕಿಹುವುದು ||

ನಿನ್ನ ಚಿತ್ರ ಕಣ್ಣಿನಲಿ
ಕಾಣದೇನೆ ಮೂಡುವುದು
ನಿನ್ನ ಹೆಸರು ಎದೆಯಲ್ಲಿ
ಹಚ್ಚೆಯನು ಹಾಕಿಹುದು
ನಾನು ಹೇಗೆ ದೂರದಲಿ
ನಿನಗಾಗಿ ಕಾಯುವುದು ||

ನಿನ್ನ ಮುಖವ ನೋಡದೇನೆ
ನಿನಗಾಗಿ ಹಂಬಲಿಸಿಹೆನು
ಪಿಸು ದನಿಯನು ಕೇಳುತಲಿ
ಲೇಖಿಸುವ ಕವಿಯಾಗಿಹೆನು
ಬರೆಯುವೆ ಮನಸಿನ ಪದಗಳನು
ನನ ಭಾವದಲಿ ನೀ ಸ್ವಂತವೆಂದು ||

ಮಾತಿನಲಿ ಮಾಧುರ್ಯ
ದೇಹದಲಿ ಸೌಂದರ್ಯ
ನಿನ ಅಂತರಂಗವನು
ಕೆಡಿಸದೆ ಕಂಗೊಳಿಸುತಿಹುದು
ಅದಕೆ ಸೋತು ಮಾಡುವೆ ಅರಿಕೆ
ನಿನ್ನಯ ಗುಣಕೆ ಮಣಿದೆನು ಕ್ಷಣಕೆ ||

Tuesday, March 12, 2013

|| ಪರಾಂಬರಿಸಿ ನೋಡು ||


ತಪ್ಪನ್ನು ಮಾಡದ ಜೀವವು ಒಂದು
ಅಪವಾದ ಹೊತ್ತು ನೊಂದಿದೆ ಎಂದು
ಬಿದ್ದಾಗ ಮೊಳಕೊಂದು ಕಲ್ಲೆಸೆಯದೆ
ದೋಷ ಹೊರಿಸಿದವರ ಮೂಲ ತಿಳಿದಾಗ
ಸತ್ಯಾಸತ್ಯತೆ ಅರಿವಿನಲಿ ಬೇಸರಿಸಿದರೆ
ಬಿರುಕು ಮೂಡದ ಗಾಜೆಂದು ಕೂಡದು ||

ನೀರ ಅಲೆಯಲ್ಲಿ ಬೆಳದಿಂಗಳ ಚಂದ್ರನು
ಕಡಿದಂತೆ ಚೂರು ಚೂರಾಗಿ ಕಂಡರೂ
ಸಂಯಮದಲಿ ತಲೆಎತ್ತಿ ನೋಡಿದರೆ
ನಗುತಿರುವನು ಬಾನಿನಲಿ ಶಶಿ ಎಂದಿವಂತೆ
ಮುಂಗೂಪದಲಿ ಮೂಗನ್ನು ಕೊಯ್ದಿಹೆಯೆಂದು
ಮರಳದು ನೋವಿನಲಿ ನೊಂದಿಹೆಯೆಂದು ||

ಕೈಯಲಿ ಹಿಡಿದಿರುವೆ ಮೆಲ್ಲಿಗೆ ಹೂವು
ನಾಸಿಕದಲಿ ತುಂಬಿರುವುದು ದುರ್ಗಂಧವು
ವಾಸನೆಯ ಸ್ವಾದ ಕೆಟ್ಟದಾಗಿದೆಯೆಂದು
ಮಲ್ಲಿಗೆಯನು ಬೈದರೆ ಗಂಧ ಸರಿಯಾಗದು
ಪರಾಂಬರಿಸಿ ನೋಡು ಹೂವಿಗೆ ತಾಕಿರುವುದು ಕಲ್ಮಷವು ||

ಆಕಳು ಕಪ್ಪೆಂದು  ಹಾಲು ಕಪ್ಪಾಗದು
ಗಿಡದಲಿ ಅರಳಿದ ಹೂವು
ದೇವನ ತಲೆಯಲಿ ನಗುವುದು
ಮಣ್ನಿನೊಂದಿಗೆ ಬೆರಿತಿದೆಯೆಂದರೇನಂತೆ
ತೊಳೆದಾಗ ತಿಳಿವುದು ಹೊಳೆವ ಚಿನ್ನವೆಂದು
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ||

ಗುರಿ

|| ರವಿತೇಜ ||


ಗಮನ ಸೆಳೆಯುವ ಜೀವವು ಒಂದು
ಧರೆಯನು ಬೆಳಗುವ ದೀಪವ ತಂದು
ಸರ್ವರ ಆಸೆಯನು ಸಾಕರಗೊಳಿಸಲು
ಕಷ್ಠವ ನೀಗುವ ಗಂಡುಗಲಿಯಾಗಿಹನು ||

ನೋಡಲು ಗಡಸು ಇವನು
ಹೂವಿನಂಥ ಮನಸು ಇವನದು
ಆಡುವ ಮಾತೇ ಸಾಂತ್ವನ
ಕಳೆವುದು ನೋವ ಚಿಂತನ ||

ಆಡುವ ನುಡಿಯು ಎಂದೂ
ಮಾಡುವ ಪ್ರತಿಜ್ನೆ ಯೆಂದು
ಗೌರವಿಸುವ ಹಿಂಬಾಲಕರ ಹುಟ್ಟಿಸಿ
ರವಿತೇಜ ಬೆಳಗುವ ದೇವರ ಜಪಿಸಿ ||