Monday, June 25, 2012

|| ಹೊಸ ಬಾಳು ||

ಹೊಸ ಬಾಳಿಗೆ ನೀ ಜೊತೆ ಯಾದೆ
ನವ ಜೀವನಕೆ ಉಲ್ಲಾಸ ತಂದೆ
ತಾಳಿಕಟ್ಟಲು ಬಂಧ
ಗಟ್ಟಿಯಾಯ್ತು ಜೋಡಿಗಳ ಅನುಬಂಧ
ನಲಿಯುತ ಎರಡು ಜೀವಗಳಿಲ್ಲಿ
ಬಂಧಿಯಾಯಿತು ಬಾಳನೌಕೆಯಲಿ  ||

ಅರಿಯದ ಜೀವಗಳಾದರೆನು
ಜೊತೆನಡೆಯಲು ಮಾಡುವ ನಾಂದಿಯನು
ಹಿರಿಯರು ಸೇರಿ ಹಾಕಲು ಬೆಸುಗೆಯನು
ಕೂಡಿ ಬಾಳುವರು ಇಡಿ ಜನ್ಮದಲಿ
ಅಕ್ಷತ ಹಾಕುತ ಹಾರೈಸುವರು
ಜೊತೆಸೇರುವ ಜೀವಗಳು ಚಿರವಾಗಲಿ ||

ಮದುವೆಯೆಂಬ ಸಮಾರಂಭದ ಮೂಲಕ
ನಂಟಾಗುವುದು ಎರಡು ಸಂಸಾರದ ನಡುವಲಿ
ಮೂರುಗಂಟಿನಲಿ ನೆಂಟರಾಗುವರು ಅರಿಯದ ಜೀವಗಳು
ಸಾಗಲಿ ಸಪ್ತಪದಿ ತುಳಿದ ಜೀವಿಗಳ ಪಯಣ ನಿರಂತರ
ಶುಭಸಮಯಕೆ ಬರುವರು ಖುಷಿಯಲಿ ಆಮಂತ್ರಿತರು
ಮನತುಂಬಿ ಹರಸುವರು ನಲಿಯಲೆಂದು ಹೊಸಬಾಳು ||

|| ನಾಗಜಡೆಯ ನೈದಿಲೆ ||

ಹೇ ಮುದ್ದು ಮುಖದ
ನಾಗಜಡೆಯ ನೈದಿಲೆ
ಎಳೆದು ಸವರಿದಾಗ ಸಿಗುವ ಹರುಷವು
ನಿನ್ನ ಉಡುಗರೆಯೇ ಕೋಮಲೆ ||

ತಾರೆಗಳೆಲ್ಲ ಉದುರಿ ನಿನ್ನ
ಮೂಗಿಗೆ ಮೂಗುತಿಯಾಗಿವೆ
ಸಹ್ಯಾದ್ರಿ ಸೌಂದರ್ಯವು
ಕಣ್ಮನ ಸೆಳೆಯುವ ಹಸಿರು ಸೀರೆಯಾಯಿತು ||

ಶಶಿಯನು ನಾಚಿಸುವ ನೀನು
ಮಂಜನು ಮೀರಿದಂತ ತಂಪನು
ನಿನ ಸುತ್ತ ತುಂಬಿರಲು
ಛಳಿಗಾಲವು ಬೇಸರಿಸಿ ಹೇಳಿತು ಶುಭವಿದಾಯ ||

Thursday, June 7, 2012

|| ಕತ್ತೆಗಂತ ಕೀಳು ||

ಮರುಭೂಮಿಲಿಂದು
ಹನಿಯೊಂದು ಮೂಡಿ
ಮೂರ್ಖಶಿಖಾಮಣಿಯು
ತಾನು ಸುರಿದು
ಕೆಂಪಾದ ಮರಳ ನೋಡಿ
ಒಣಗಿದ ಹಸಿರೆಂದು ತಿಳಿದು
ಬದುಕಿಸಲು ಮೇಲಿಂದ ಬಂತು ||

ಬಾದಾಮಿಹಲ್ವ ಹಿಡಿದು
ಚಂದ್ರನ ಚೂರೆಂದು ತಿಳಿದು
ಮರುಳನಾಗಿ ಮೋಹಗೊಂಡೆ
ಹಗ್ಗವನು ಹಿಡಿದು
ಹೂವೆಂದು ತಿಳಿದು
ಕುರುಡನಂತೆ ನಡೆದೆ ||

ಪರಿಮಳದಿಂದ ಕಸ್ತೂರಿಯೆಂದುಕೊಂಡೆ
ಕೈಸುಡುವಾಗ ಅರಿತೆ
ಕರಿದಾದ ಇಂಗಾಳವೆಂದು
ಕತ್ತೆಗಿಂತ ಕೀಳಾದೆ ಅರಿಯದೆ
ಕಸ್ತೂರಿ ಪರಿಮಳ ||

|| ಪ್ರೇಮಾಲಯ ||

ಉದಯಿಸು ಉದಯಿಸು
ಮನೆ ಮನ ಬೆಳಗಿಸು
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ನೀನಿರಲು ಪ್ರೇಮಾಲಯ
ತುಂಬುವುದು ಕಾರ್ಯಾಲಯ ||

ಹೃದಯದಿ ತುಂಬಿದ ರಕ್ತವು
ಹರಿವುದು ಎಂದು ನಿನ್ನಾಜ್ನೆಯಂತೆ
ಬಿಗಿದಿಹಿಡಿದಿದೆ ಉಸಿರನು
ನಿನ್ನಯ ಹೆಸರು
ಪೂಜಿಸಲೆಂದು ಪ್ರೇಮದೇವತೆಯನ್ನ ||

ಮನಸೆಂಬ ದೇವಾಲಯದಿ
ನಿಂತಿಹ ದೇವತೆ ನೀನು
ದೇವಿಯನು ಆರಾಧಿಸುತಿರು
ಪೂಜಾರಿಯು ನಾನು
ನಿನ್ನಯ ಆಲಯ ನನ್ನಯ ಮನಸಲಿ
ನಿನಗೆಂದೇ ಕಾದಿರಿಸಿದ ಪ್ರೇಮಾಲಯ ||