Sunday, March 10, 2013

|| ಓಂ ನಮಃ ಶಿವಾಯ ||


ಶಿವ ಶಂಭೋ ಶಂಕರ ಮಹದೇವ
ಹರ ನಂಬೋ ಕಾರುಣ್ಯ ವಾಮದೇವ
ಕೆಟ್ಟವರಿಲ್ಲವೋ ನಂಬಿ ಕೆಟ್ಟವರಿಲ್ಲವೊ
ನಂಬಿದರಂತು ಇವ ಕೆಟ್ಟವನಲ್ಲವೊ
ಭವ ಬಂಧವ ಬಿಡಿಸುವನು ಮುಕ್ತಿದಾಯಕನು ||

ರುಧ್ರಭೂಮಿಯಲಿ ಇರುವನು ಮಹಾರುಧ್ರನು
ಸುಟ್ಟಿದ ದೇಹದ ಬೂದಿಯೇ ವಿಭೂತಿಯು
ವಿಷಭರಿತ ನಾಗರಹಾವೆ ಇವನಿಗೆ ಭೂಷಣವು
ಶಶಿಯನು ಧರಿಸಿಯಾದನು ಚಂದ್ರಶೇಖರನು
ವಿಷವನು ಕುಡಿದವನೆ ನೀಲಕಂಠ ನಟರಾಜನು ||

ಜಡೆಯನು ಕಟ್ಟಿ ಧರೆಯನು ಉಳಿಸಿದ ಗಂಗಾಧರ
ದೇಹದಲಿ ಅರ್ಧಭಾಗವ ನೀಡಿದ ಅರ್ಧನಾರೀಶ್ವರ
ಉರಿಕಿಡಿಯನು ಮರೆಮಾಚಿಕೊಂಡವನೇ ತ್ರಿನೇತ್ರನು
ಅನಾಥರಕ್ಷಕ ಅನ್ನದಾತನೇ ಅಮರನಾಥನು
ಧ್ಯಾನದಿ ಹೇಳುವೆ ತಂದೆ ಓಂ ನಮಃ ಶಿವಾಯ ||

2 comments:

  1. ಶಿವಪುರಾಣ ಎನ್ನುವುದು ಈ ಲೋಕಕ್ಕೆ ಶಿವನ ಮಹಿಮೆಗಳನ್ನು ಕಥೆಯ ರೂಪದಲ್ಲಿ ಕಟ್ಟಿ ಕೊಟ್ಟ ಸಾಹಿತ್ಯ. ಆದರೆ ಶಿವ ಎನ್ನುವುದು ಈ ಲೋಕದ ವಸ್ತು ಅಲ್ಲ. ಏಕೆಂದರೆ ಲೋಕ ಶಾಶ್ವತವಲ್ಲ. ಶಿವ ಎಂದರೆ ಶಾಶ್ವತ ಎಂದೂ ಶಂಕರ ಎಂದರೆ ಶುಭಕರ ಎಂದೂ ಅರ್ಥವಿದೆ. ನಿರ್ಗುಣ ನಿರಾಕಾರ ಇವೆಲ್ಲಾ ಶಿವನ ರೂಪವನ್ನು ಕುರಿತೇ ಹೇಳಿದ್ದು!!. ಅದನ್ನೇ ನೀವೂ ಹೇಳಿದ್ದೀರಿ ತುಂಬಾ ಸರಳವಾಗಿ..ಒಳ್ಳೆಯದು..
    ಅದಿರಲಿ.. ನಿಮ್ಮ ಅನೇಕ ಬರಹಗಳನ್ನು ಓದಿದಾಗ ನನಗನಿಸಿದ್ದು ಏನೆಂದರೆ ಜನಸಾಮಾನ್ಯರಿಗೆ ಅಂದರೆ ಮಿತ ಮತಿಗಳಿಗೆ ಮನಮುಟ್ಟುವ ಭಾಷೆಯಲ್ಲಿ ಬರೆಯುತ್ತೀರಲ್ಲಾಅದು ತುಂಬಾ ಹಿಡಿಸಿದೆ.. ನಿಮ್ಮ ಕೃಷಿಗೆ ನನ್ನ ತುಂಬು ಹೃದಯದ ಪ್ರೋತ್ಸಾಹವಿದೆ ಗೆಳೆಯರೇ...ಮುಂದುವರೆಸಿ ನಮ್ಮ ಸಂತಸಕ್ಕೆ ಕಾರಣೀಭುತರಾಗಿದ್ದಕ್ಕೆ ಧನ್ನ್ಯವಾದಗಳು

    ReplyDelete