Thursday, April 12, 2012

|| ಬಯಸಿದೆ ನಿನ್ನನ್ನು ||

ಅನಿಸಿದೆ ಮನದಲ್ಲಿ ಅವನನ್ನು ನೋಡಿದ ಕ್ಷಣಕೆ
ಸಪ್ತಪದಿ ತುಳಿವ ಸುಕುಮಾರನು ನನ್ನಯ ಜೊತೆಗೆ
ಅವನ ಮೇಲಾಗಿದೆ ಏನೋ ಮೊಹ
ಪ್ರಿಯತಮನ ಸೇರುವ ತನಕವೂ ತೀರದ ದಾಹ ||

ಸೋತಿಹೆ ನಾನು ನಿನ್ನಯ ಗುಣಕೆ
"ವಸುದೈವ ಕುಟುಂಬಕಂ" ಎನ್ನುವ ಘಳಿಗೆ
ಎಲ್ಲರ ನುಡಿಯಲ್ಲೂ ನಿನ್ನದೆ ಹೊಗಳಿಕೆ
ಬರಗಾಲದಂದ ತತ್ತರಿಸಿತು ದೂಷಿಸುವ ತೆಗಳಿಕೆ  ||

ಅಂಜದೆ ಸ್ವೀಕರಿಸುವೆ ಜವರಾಯನ ಆಹ್ವಾನವನ್ನ
ನಿನ್ನ ಬಾಹು ಬಂಧನದಲ್ಲಿ ನಾ ಖೈದಿಯಗಿರುವಾಗ
ಕಣ್ಮುಚ್ಚಿ ಕುಳಿತರೂನು ಕಾಣುವೆನು ನಿನ್ನನ್ನೆ
ನಿನ್ನನ್ನು ಸೇರುವ ತವಕದಲಿ ಮರೆವೆನು ನಾನನ್ನೆ  ||

ನಯನಗಳು ನುಡಿಯಲು ಅಣಿಯಾಯ್ತು ನಿನ್ನನ್ನು ನೋಡಿದ ಕ್ಷಣದಿಂದ
ನೀನೇಕೆ ಅರಿಯದೆ ದೂರನಿಂತೆ ನಿನ್ನಜೊತೆ ಜೀವನ ಕಳೆಯುವ ನನ್ನಿಂದ
ಇರುವೆನು ನಿನ್ನ ಎಲ್ಲ ಕೆಲಸಗಳಿಗೂ ಸ್ಪೂರ್ತಿಯಾಗಿ
ಸವೆಯುವೆ ನನ್ನೆಲ್ಲ ಜೀವನವನ್ನು ನಿನ್ನ ದಾಸಿಯಾಗಿ  ||

ಎಲ್ಲರು ಮೆಚ್ಚುಂತಹ ನಿನ್ನಯ ವರ್ತನೆ
ಮನಸಲಿ ನಿಂತು ಕನಸಲಿ ಕಾಡುವ ಹುಡುಗನೆ
ದುಷ್ಠ, ಚಟಗಳಿಂದ ದೂರನಿಂತ ನಿನ್ನ
ಸ್ಪಂದಿಸುವೆ ನನ್ನೆಲ್ಲ ನೋವಿಗು ಎಂದು ಬಯಸಿದೆ ನಿನ್ನನ್ನು  ||

No comments:

Post a Comment