Monday, September 23, 2013

...ಈ ಪಾಪಿ ಜನ್ಮ...

ಮಾನವನಾಗಿ ಹುಟ್ಟುವುದೇ ಒಂದು ಭಾಗ್ಯ ಎಂದು ನಂಬಿರುವ ಜನರು ಬದುಕಿನಲ್ಲಿ ಅಂಥಹ ಶ್ರೇಷ್ಥತೆಯನ್ನೇನು ಪಡೆದಿದ್ದಾರೆ ಎಂಬ ವಿಚಾರ ಕಾಡಲು ಹಲವಾರು ಸಂಗತಿಗಳು ಕಣ್ಣೆದುರಿಗೆ ಬಂದಾಗ ಇದು ಒಂದು ಜನ್ಮವೇ? ಎಂದು ಬೇಸರಿಸ ಬೇಕು. ಇಂದಿನ ದೇಹ ನಾಳೆ ಅಳಿವಾಗ ಅಳಲು ಉಳಿಸಲು ಸಾಧ್ಯವೇ ಎನ್ನುವುದನ್ನು ಯೋಚಿಸಿದಾಗ ಬಾಳೊಂದು ಬಾಳೆ ಎಂದು ಉದ್ಗರಿಸಲಿಕ್ಕಷ್ಟೆ ಸಾಧ್ಯ.

ಹುಟ್ಟಿದ ಜೀವ ಸಾಯಲೇ ಬೇಕು ಎಂದಾಗ ನಮ್ಮ ವಿಜ್ಞಾನ ಎಷ್ಟೇ ಮುಂದುವರೆದರು ಸಾವನ್ನು ಗೆಲ್ಲಲು ಆಗಲಿಲ್ಲವೆಂಬುದು ಸತ್ಯ. ಸಾಯಲೇ ಬೇಕು ಎಂದಾಗ ಹುಟ್ಟಿದ್ದು ಸಾಯಲೆನ್ನುವುದು ಸಾಬೀತಾಗುತ್ತದೆ. ವಿಜ್ಞಾನದಿಂದ ಸಾವಿನ ಹಿಂದಿನ ರಹಸ್ಯ ಬೇಧಿಸಿದಾಗ ಮಾನವ ಜನ್ಮ ಉಳಿದೆಲ್ಲ ಜೀವರಾಶಿಗಳಿಗಿಂತ ಶ್ರೇಷ್ಠವೆನ್ನುವುದನ್ನು ಒಪ್ಪಿಕೊಳ್ಳಬಹುದು ಆದರೆ ಅಲ್ಲಿತನಕ ನಮ್ಮನ್ನ ನಾವು ಹೊಗಳಿಕೊಳ್ಳುವುದನ್ನು ಕಡಿಮೆ ಮಾಡಿದರೆ ಚೆನ್ನ.

ಜೀವರಾಶಿಗಳ ಹಿಂದೆ ಒಂದು ಶಕ್ತಿ ಇದೆ ಎನ್ನುವುದಂತು ಸತ್ಯ. ಇಲ್ಲವಾದರೆ ಸಾವು ಎನ್ನುವುದಕ್ಕೆ ಹೆದರುವ ಅವಶ್ಯಕೆಯೇ ಇರುತ್ತಿರಲಿಲ್ಲ. ಜೀವಗಳ ಹಿಂದಿರುವುದು ದೇವನೋ?, ಶಕ್ತಿಯೋ? ಅಥವಾ ಒಂದು ಮೂಲಧಾತುವೋ? ಎನ್ನುವುದು ತಿಳಿಯದಿರುಂಥಹ ಸತ್ಯ. ನಮ್ಮ ಹಿಂದಿನ ಶಕ್ತಿಯನ್ನ ಬೇರೆ ಬೇರೆ ಧರ್ಮದಲ್ಲಿ, ಬೇರೆ ಬೇರೆ ಜಾತಿಯಲ್ಲಿ, ಬೇರೆ ಬೇರೆ ಪ್ರಭೇದದಲ್ಲಿ ಜೀವಿಗಳು ಅದನ್ನು ಗುರುತಿಸಿಕೊಂಡರೂ ಅದು ಎಲ್ಲ ಜೀವರಾಶಿಗಳಿಗು ಸರ್ವೆ ಸಾಮಾನ್ಯವಾದದ್ದು. ಶಕ್ತಿಗೆ ಯಾವುದೇ ಧರ್ಮವಿಲ್ಲ, ಜಾತಿಯಿಲ್ಲ, ಪ್ರಭೇದವಿಲ್ಲ. ಹೀಗಿರುವಾಗ ಶಕ್ತಿಗೋಂದು ರೂಪಕೊಟ್ಟು ಅದರ ಹೆಸರಿನಲ್ಲಿ ಹೋರಾಟ, ಹೊಡೆದಾಟ ಮಾಡುವುದೆಷ್ಟು ಸರಿ? ಎಂದು ಯೋಚಿಸಲು ಜನ್ಮ ಶ್ರೇಷ್ಠವೇ ಎನ್ನುವುದಕ್ಕೊಂದು ಉತ್ತರ ಸಿಗಬಹುದು.

ಅದೆ ಶಕ್ತಿಯನ್ನು ದೇವರೆಂದು ಬಿಂಬಿಸಿ ಆಸ್ತಿಕ ಮತ್ತು ನಾಸ್ತಿಕ ಎಂದು ಎರಡು ಗುಂಪುಗಳನ್ನ ಮಾಡಿ ಕಿತ್ತಾಡುತ್ತ ವಾದ ಮಂಡಿಸಿದರು ಕೊನೆಯಲ್ಲಿ ಉತ್ತರ ಸಿಗದೆ ಮೊಂಡುವಾದವಾಗುವುದಂತು ನಿಜ. ಅರ್ಥವಿಲ್ಲದ ವಾದಗಳಿಗೆ ವೇದಿಕೆ ಮಾಡಿಕೊಂಡು ದರ್ಪವನ್ನು ತೋರಿಸುವಲ್ಲಿ ಸಮಯ ವ್ಯಯಿಸುವುದೊಂದು ಶೇಷ್ಠಜನ್ಮವೆ?

ಕಾಣಿಸದ ಕೈ ಅದು ತಾಳವ ಹಾಕುತ ಕುಣಿಸುವುದು
ಕಾಣುವ ಕಾಲಿದು ಹೆಜ್ಜೆಯ ಹಾಕುತ ಕುಣಿಯುವುದು

ಸಾಲುಗಳೊಂದೇ ಸಾಲದೇ ಜೀವರಾಶಿಗಳ ಹಿಂದೊಂದು ಶಕ್ತಿಯಿದೆ ಎನ್ನುವುದಕ್ಕೆ ಪುಷ್ಟಿ ನೀಡಲು? ಶ್ರೇಷ್ಠಜನ್ಮದ ಜೀವಿಗಳು ಅಂದುಕೊಳ್ಳುವುದೊಂದಾದರೆ ಆಗುವುದು ಇನ್ನೊಂದು. ಇಂದಿನ ಧನಿಕ ನಾಳೆ ಬಿಕ್ಷುಕ, ಇಂದಿನ ಬಿಕ್ಷುಕ ನಾಳೆ ಧನಿಕ, ಇಂದಿನ ಪಾಪಿ ನಾಳಿನ ಪುಡಾರಿ, ಇಂದಿನ ಪುಡಾರಿ ನಾಳೆ ಪಾದಾಚಾರಿ ಹೀಗೆ ರಿಳಿತಗಳಿಂದ ಕೂಡಿದ ಮಾನವ ಜನ್ಮ ಕಡೆಗೆ ಕೈಮುಗಿದು ನುಡಿವುದು ಕಾಲಾಯ ತಸ್ಮೈ ನಮಃ ಎಂದು. ಮಾತನಾಡುವ, ನಗೆಯಾಡುವ, ಭಾವನೆಗೆ ಸ್ಪಂದಿಸುವ, ನೋವುಗಳ ಹಂಚಿಕೊಳ್ಳುವ ಮಾನವ ಜನ್ಮ ಪವಿತ್ರವಾದ ಶ್ರೇಷ್ಠಜನ್ಮ ಎಂದು ನಾವಂದುಕೊಂಡರೆ ಬೇರೆ ಜೀವಿಗಳಿಗೆ ಬೇರಾವುದೇ ಮಾಧ್ಯವವಿಲ್ಲವೆ ಎಂದು ಯೋಚಿಸದೆ ನಾವೇ ಶ್ರೇಷ್ಠರು ಅಂತಂದುಕೊಂಡರೆ ಅದರಷ್ಟು ದೊಡ್ಡ ಮೂರ್ಖತನ ಬೇರೊಂದಿಲ್ಲ ಏಕೆಂದರೆ ಬೇರೆ ಜೀವಿಗಳು ಅವರವರದೇ ಆದ ಭಾವ ಅಭಿವ್ಯಕ್ತ ಮಾದ್ಯಮವನ್ನು ಹೊಂದಿದೆ. ಅವುಗಳು ತನ್ನ ಒಡನಾಡಿಗೆ ನೋವಾದಗ, ತೊಂದರೆಯಾದಾಗ ಸ್ಪಂಧಿಸುವ ರೀತಿಯನು ನೋಡಿದರೆ ಶ್ರೇಷ್ಠ ಜೀವಿಗಳೆಂದು ಬಡಾಯಿ ಕೊಚ್ಚಿಕೊಳ್ಳುವ ಮಾನವರು ನಾಚುವಂಥಿರುತ್ತದೆ. ಅವರಿಗೆ ಅವರದೆ ಆದ ಬೇರೆ ಮಾಧ್ಯಮವಿದ್ದು ಅದರಿಂದ ಮಾಹಿತಿಯನ್ನು ಹಂಚಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸುವುದನ್ನು ನೋಡಿದಾಗ ನಮ್ಮದು ನಿಜವಾಗಿಯು ಶ್ರೇಷ್ಠಜನ್ಮವೇ ಎಂದು ಪ್ರಶ್ನೆ ಮಾಡಿಕೊಳ್ಳುವಂಥಿರುತ್ತದೆ. ಅವರು ಉಪಯೊಗಿಸಿವ ಮಾಹಿತಿ ವಿನಿಮಯ ಮಾಧ್ಯಮದ ಅರಿವು ಮಾನವನಿಗಿಲ್ಲ ಹೀಗಾಗಿ ಮಾತನಾಡುವ ನಾವೆ ಶ್ರೇಷ್ಠ ಎನ್ನುವ ಅಹಂಕಾರದಿಂದ ತಿಳಿದು ಬರುತ್ತದೆ ಮಾನವ ಜನ್ಮವೆಷ್ಟು ಉತ್ತಮವೆನ್ನುವುದು.

ಇದೊಂದು ಸ್ಪಷ್ಟಚಿತ್ರಣ ನೋಡಿದಾಗ ಜನ್ಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಬಲ್ಲದು. ಮಾನವನು ಡೆಯುವ ಹಾದಿಯಲ್ಲಿ ಹಸಿರಿನ ಹುಲ್ಲು ಸಹ ಬೆಳೆಯದು. ಅದೇ ಇತರ ಪ್ರಾಣಿಗಳು ಅಡ್ಡಾಡುವ ಜಾಗದಲ್ಲಿ ಬರಡಾದ ನೆಲ ಕಾಣದು. ಅದು ಮಾಂಸಹಾರಿಯಾಗಲಿ, ಶಾಖಹಾರಿಯಾಗಲಿ ನೆಲ ಬರಡಾಗದು ಆದರೆ ಅದೆ ಜಾಗದಲ್ಲಿ ಶ್ರೇಷ್ಠ ಜೀವಿಯೆಂದು ಬಣ್ಣಿಸಿಕೊಂಡ ಮಾನವ ಕಾಲಿಟ್ಟರೆ ಬೆಳೆದಿದ್ದ ಹಸಿರು ಹುಲ್ಲು ಸಹ ನಶಿಸುವುದು. ಮಾನವ ಗಗನಕ್ಕೆ ಹಾರಬಹುದು, ಭೂಮಿಯನ್ನು ಹೊಸದಾಗಿ ಸೃಷ್ಟಿಸುವತ್ತ ದಾಪುಗಾಲಿಡಬಹುದು, ಬೇರೆ ಗ್ರಹಗಳಲ್ಲಿ ಸಂಶೋಧನೆ ನೆಡೆಸಿ ನಾನೆ ಬುದ್ದಿವಂಥ ಅಂತ ಹೇಳಿಕೊಂಡರು ಇವ ನಡೆಯುವ ದಾರಿಯಲ್ಲಿ ಹಸಿರನ್ನು ಬೆಳೆಸಲಾಗಲಿಲ್ಲ. ಬರಡು ಭೂಮಿಯಲಿ ಹಸಿರನ್ನು ಬೆಳೆಸಿದರೂ ಇವ ಕಾಲಿಟ್ಟರೆ ಬೆಳೆದ ಹಸಿರು ಸಹ ನಶಿಸುವುದು. ಶ್ರೇಷ್ಠ ಜೀವಿ ಎಂದಾಗಿದ್ದರೆ ಇವ ಕಾಲಿಟ್ಟಲ್ಲಿ ಮೊಳಕೆಯೊಡೆದು ಫಲ ಬರಬೇಕಿತ್ತು ಆದರೆ ಅದರ ಬದಲಾಗಿ ಇರುವ ಹಸಿರು ಹಾಸಿಗೆಯು ಹಾಳಾಗುವುದು.

ಪ್ರಾಣಿಗಳು ನಡೆದಾಗ ಬೆಳೆದಿರುವ ಹಸಿರು ಮಾನವ ನದೆದಾಗ ಮಾಯವಾಗುವುದು. ಶ್ರೇಷ್ಠತೆಯ ಹಿಂದೆ ಬದುಕುವ ಮಾನವ ಈ ನಿಸರ್ಗದ ದೃಷ್ಠಿಯಲಿ ಎಷ್ಟು ಕೀಳೆನ್ನುವುದಕ್ಕೆ ಈ ನಿದರ್ಶನವೊಂದು ಸಾಕಲ್ಲವೆ?

ಚಟಕ್ಕೆ ಮಕ್ಕಳನ್ನ ಹುಟ್ಟಿಸಿ ಹಠಕ್ಕೆ ಮದುವೆಯನ್ನು ಮಾಡಿಸಿ ಗಳಿಸಿದ್ದನ್ನೆಲವ ಬಿಟ್ಟು ಬೂದಿಯಾಗುತ್ತಾನೆ ಆದರು ತಾನೆ ಶ್ರೇಷ್ಠ ಎಂದು ಕೊಚ್ಚಿಕೊಳ್ಳುತ್ತ ಅಹಂಕಾರದಿ ಮೆರೆಯುವ ಸ್ವಾರ್ಥ ಜೀವ ನಿಜವಾಗಿಯು ಪವಿತ್ರವಾದುದೆ? ಹುಟ್ಟಿರುವುದೇಕೆ ಎನ್ನುವುದು ತಿಳಿಯದಿದ್ದರು ಹಠದಲ್ಲಿ ಪ್ರತಿಷ್ಠೆಯನ್ನು ತೋರುವುದು ನಂತರ ಸಾಯುವುದು ಖಚಿತವೆಂಬುದು ಗೊತ್ತಿದ್ದರು ಅಟ್ಟಹಾಸದಿ ಮೆರೆವುದು ಉಚಿತವಾಗದು. ನೆನೆದದ್ದು ನೆರವೇರದು, ಇಷ್ಟಟ್ಟಿರುವುದು ದೊರಕದು, ಬಯಸಿದ್ದು ಬಾರದು, ಅಂದುಕೊಂಡಂತೆ ಬದುಕಲಾಗದಾಗದು. ಶ್ರೇಷ್ಠ ಜನ್ಮವಾಗಲಿ, ಪಾಪಿ ಜನ್ಮವಾಗಲಿ ಕಾಲದ ಕೈಗೊಂಬೆಯಾಗಿದ್ದು ಕಾಲಾಯ ತಸ್ಮೈ ನಮಃ ಎನ್ನುತ್ತ ಕಾಣದ ಶಕ್ತಿಗೆ ಕೈ ಮುಗಿದು ಬದುಕುವುದಂತು ಖಚಿತ.


ಅಳಿವು ಉಳಿವಿನ ಬೀಗವನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ನಿಸರ್ಗದ ಮುಂದೆ ಯಾರೆ ಆದರು ತಲೆ ಬಾಗಲೆ ಬೇಕು. ರಹಸ್ಯವನ್ನು ಬೇಧಿಸಲು ಎಷ್ಟೆ ಹೆಣಗಾಡಿದರೂ ತಿಳಿಯಲಾಗಲಿಲ್ಲವೆಂದಾಗ ನಮ್ಮ ನಿಸರ್ಗಕ್ಕೆ ಪಾಪಿಜನ್ಮವಾಗಲಿ, ಶ್ರೇಷ್ಠಜನ್ಮವಾಗಲಿ ಎಲ್ಲವು ಒಂದೆ ಎನ್ನುವುದು ತಿಳಿದುಬರುತ್ತದೆ. ಹೀಗಿರುವಾಗ ಶ್ರೇಷ್ಠಜನ್ಮವೊಂದು ಬಡಾಯಿ ಕೊಚ್ಚಿಕೊಳ್ಳುವ ಮಾನವರಿದು ಸಹ  ಪಾಪಿಜನ್ಮವೆ ತಾನೆ.

19 comments:

 1. Replies
  1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

   Delete
 2. ವೈಚಾರಿಕತೆಯುಳ್ಳ ಅರ್ಥಪೂರ್ಣ ಬರಹ. ಎಲ್ಲಾ ಜೀವರಾಶಿಗಳಲ್ಲಿ ಮನುಷ್ಯ ಅಧಮನೋ ಶ್ರೇಷ್ಟತಮನೋ ಎನ್ನುವುದು ಅವರವರ ಭಾವಕ್ಕೆ, ಅವರವರ ತರ್ಕಗಳಿಗೆ ಬಿಟ್ಟ ವಿಚಾರ. ಇಂದಿನ ಯಾಂತ್ರಿಕ ತಾಂತ್ರಿಕ ಯುಗದಲ್ಲಿ ಮನುಷ್ಯ ಎಲ್ಲಾ ರಂಗಗಳಲ್ಲೂ ತನ್ನ ಕೈಬೆರಳ ತುದಿಯಲ್ಲಿಯೇ ಎಲ್ಲವ ಕೂಡಿ ಕಳೆದು, ಗುಣಿಸಿ ಭಾಗಿಸಿ ಕರಗತ ಮಾಡಿಕೊಂಡವನು ( ಸಾವಿನ ರಹಸ್ಯವ ಭೇದಿಸಲಾಗದನ್ನು ಹೊರತು ಪಡಿಸಿ ).
  ನಾನು ನನ್ನದು ಎಂಬ ಅಹಂವಿಕೆಯನ್ನು ಬಿಟ್ಟು, " ಸರ್ವೇ ಜನ ಸುಖಿನೋ ಭವಂತು " ಎಂದು ಬಾಳಿದಾಗಲೇ ಮನುಷ್ಯ ಉತ್ತಮನು ಅತ್ಯುತ್ತಮನು ಪರಮೋತ್ತಮನಾಗುವುದು.

  ReplyDelete
  Replies
  1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

   Delete
 3. ವೈಚಾರಿಕತೆಯುಳ್ಳ ಅರ್ಥಪೂರ್ಣ ಬರಹ. ಎಲ್ಲಾ ಜೀವರಾಶಿಗಳಲ್ಲಿ ಮನುಷ್ಯ ಅಧಮನೋ ಶ್ರೇಷ್ಟತಮನೋ ಎನ್ನುವುದು ಅವರವರ ಭಾವಕ್ಕೆ, ಅವರವರ ತರ್ಕಗಳಿಗೆ ಬಿಟ್ಟ ವಿಚಾರ. ಇಂದಿನ ಯಾಂತ್ರಿಕ ತಾಂತ್ರಿಕ ಯುಗದಲ್ಲಿ ಮನುಷ್ಯ ಎಲ್ಲಾ ರಂಗಗಳಲ್ಲೂ ತನ್ನ ಕೈಬೆರಳ ತುದಿಯಲ್ಲಿಯೇ ಎಲ್ಲವ ಕೂಡಿ ಕಳೆದು, ಗುಣಿಸಿ ಭಾಗಿಸಿ ಕರಗತ ಮಾಡಿಕೊಂಡವನು ( ಸಾವಿನ ರಹಸ್ಯವ ಭೇದಿಸಲಾಗದನ್ನು ಹೊರತು ಪಡಿಸಿ ).
  ನಾನು ನನ್ನದು ಎಂಬ ಅಹಂವಿಕೆಯನ್ನು ಬಿಟ್ಟು, " ಸರ್ವೇ ಜನ ಸುಖಿನೋ ಭವಂತು " ಎಂದು ಬಾಳಿದಾಗಲೇ ಮನುಷ್ಯ ಉತ್ತಮನು ಅತ್ಯುತ್ತಮನು ಪರಮೋತ್ತಮನಾಗುವುದು.

  ReplyDelete
 4. ವಿನಾಯಕ ಸರ್, ನಿಮ್ಮ ಈ ಲೇಖನ ಮನಸ್ಸಿನಲ್ಲಿ ಬಡಿದಾಡುವ, ನಿಜ ಜೀವನದಲ್ಲಿ ಹಾದು ಹೋಗುವ ನಿತ್ಯ ಜೀವನದ ನಿಜ ಚಿತ್ರಣವಾಗಿದೆ...... ಸಮಚಿತ್ತವಾಗಿ ಯೋಚಿಸಬೇಕಾದ ಪ್ರೆಶ್ನೆಗಳಿವೆ ........ ಉತ್ತರಗಳು ನಮ್ಮ ಮನಸ್ಸಿನ ತುಮುಲಗಳಲ್ಲಿವೆ

  ReplyDelete
  Replies
  1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

   Delete
 5. ಮಾನವ ತನಗೆ ತಾನೇ ಸ್ವಯಂ ಘೋಷಿತ ಶ್ರೇಷ್ಟತಮ! ಆದರೆ ಅವನು ಎಂತಹ ಅಧಮ ಎನ್ನುವುದು ಧರಿತ್ರಿಗೆ ಮಾತ್ರ ಗೊತ್ತು. ಕೆಳಗೆ ಕೆರೆ ಒತ್ತುವರಿ - ಮೇಲೆ ಓಜೋನ್ ವಲಯಕೆ ತೂತು. ಬಾಹ್ಯಾಕಾಶ ಪೂರಾ ಸತ್ತ ಕೃತಕ ಉಪಗ್ರಹಗಳು! ಸಕಲ ಚರಾಚರಗಳನ್ನು ಹುರಿದು ಮುಕ್ಕುವ ತವಕ.

  ಅರ್ಥ ಮಾಡಿಕೊಳ್ಳಲೇ ಬೇಕಾದ ಬರಹ.

  ReplyDelete
 6. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

  ReplyDelete
 7. ತುಂಬಾ ಒಪ್ಪಿಕೊಳ್ಳೋವಂತಹ ಬರಹ ...
  ವಾಸ್ತವದ ಅನಾವರಣ ...ಸಧ್ಯದ ಪರಿಸ್ತಿತಿಗಳ ವಿಮರ್ಶೆ ಇಷ್ಟ ಆಯ್ತು

  ReplyDelete
  Replies
  1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

   Delete
 8. ಅರ್ಥಪೂರ್ಣ ಲೇಖನ. ಮಾನವ ತಾನು ಶ್ರೇಷ್ಟ ಜೀವಿ ಎಂದುಕೊಂಡೇ ಇಂದು ಪ್ರಕೃತಿಯ ನಾಶಕ್ಕೆ ಅವನೇ ಕಾರಣನಾಗಿದ್ದಾನೆ.

  ReplyDelete
  Replies
  1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ...

   Delete
 9. ವಿಚಾರ ಅಥ೵ಪೂಣ೵ವಾಗಿದೆ. ಆದರೆ ಬರವಣಿಗೆಗೆ ಮತ್ತಷ್ಟು ಸಾಣಿ ಹಿಡಿಯಬೇಕಿದೆ. ಇಂತಹ ವೈಚಾರಿಕ ಮತ್ತು ತಾಕಿ೵ಕ ಬರಹಗಳು ಮತ್ತಷ್ಟು ಭಾಷಾ ಪ್ರೌಢಿಮೆಯನ್ನು ಬಯಸುತ್ತದೆ. ಅಲ್ಲದೇ ಪ್ರತಿ ವಾಕ್ಯದಲ್ಲೂ ಕೇವಲ 5-6 ಪದಗಳು ಇರಬೇಕು. ಒಂದು ಪ್ಯಾರಾದಲ್ಲಿ 4-5 ವಾಕ್ಯಗಳಿರಬೇಕು. ಕಾಫೀಯನ್ನು ಪ್ರತಿ ಗುಟುಕು ಹೀರಿದಂತೆ. ಬದಲಾಗಿ ನಿರಂತರತೆ ಓದಿಗೆ ಅಡ್ಡಿ ಪಡಿಸುತ್ತದೆ. ಅಥೈ೵ಸಿಕೊಳ್ಳಲು ಕಷ್ಟವಾಗಬಹುದು.
  ಒಟ್ಟಾರೆ ಬರಹ ಉತ್ತಮವಾಗಿದೆ.

  ReplyDelete
  Replies
  1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ..

   Delete
 10. ಬರಹಗಳು ಉತ್ತಮವಾಗಿವೆ.. ಆದರೆ ಈ ಕಾವ್ಯ, ಸಾಹಿತ್ಯ, ಇವುಗಳ ಹುಟ್ಟಿಗೆ ಸಾಹಿತ್ಯದ ಮೇರುವಾದ ಮಮ್ಮಟ " ಕಾವ್ಯಂ ಯಶಸೇ ಅರ್ಥ ಕೃತೇ ವ್ಯವಹಾರವಿದೇ, ಶಿವೇತರಕ್ಷತಯೇ...." ಮುಂತಾದ ಉದ್ದೇಶಗಳನ್ನು ವಿವರಿಸಿದ್ದಾನೆ...ಅದಲ್ಲದೇ ಕಾಂತಾ ಸಂಹಿತಾ ಎಂದೂ ಸಾಹಿತ್ಯವನ್ನು ಕರೆಯಲಾಗಿದೆ... ಕಾಂತಾ ಸಂಹಿತಾ ಎಂದರೆ.. ಹೆಂಡತಿ ಹೇಗೆ ತನ್ನ ಗಂಡನಿಂದ ತನಗನುಕೂಲವಾದುದನ್ನು ತೊಡಗಿಸಿಕೊಳ್ಳುತ್ತಾಳೋ ಹಾಗೇ ಈ ಕಾವ್ಯಾದಿಗಳೂ ನಮ್ಮ ಅರಿವಿಗೆ ಬರದಂತೇ ನಮ್ಮಲ್ಲಿ ಒಂದು ಸಂಚಲನವನ್ನು ಮೂಡಿಸಿಬಿಡುತ್ತವೆ.. ಇದೆಲ್ಲಕ್ಕೂ ನಿಮ್ಮ ಬರಹಗಳು ಹೊದಾಣಿಕೆಯಾಗಿವೆ... ಆದರೆ ಎಲ್ಲ ಬರಹಗಳ ಆತ್ಯಂತಿಕವಾದ ರಸ ಶಾಂತರಸವಾಗಬೇಕೇ ಹೊರತೂ ವಿಶಾದವಾಗಬಾರದು ಎಂಬುದು ನನ್ನಂತೆ ಹಲವರ ಅಭಿಮತ. ನಿಮ್ಮ ಹಲವು ಬರಗಳನ್ನವಲೋಕಿಸಿದ ನನಗೆ ಅನ್ನಿಸಿದ್ದು.. ನಿಮ್ಮಲ್ಲಿನ ಸಾಹಿತ್ಯ ಪ್ರೌಢತೆಯನ್ನು ಜೀವನಗಾಮಿಯಾಗಿಸಬೇಕಿದೆ.. ಖಿನ್ನತೆಯ ಸಂಕೋಲೆಯೊಳಗಿನ ನಿಮ್ಮ ಕೂಗಿಗೆ ಆಶಾವಾದದ ಅರ್ಥ ಹಚ್ಚಬೇಕಿದೆ ಎನ್ನಿಸುತ್ತಿದೆ...

  ReplyDelete
 11. ನಿಮ್ಮ ಸಲಹೆ ಮತ್ತು ನನ್ನ ಬರಕ್ಕೆ ಸೂಚಿಸಿದ ತಿದ್ದುಪಡಿಗೆ ನನ್ನ ಧನ್ಯವಾದಗಳು. ಹೀಗೆ ಓದುತ್ತ ನಮ್ಮನ್ನು ತಿದ್ದುತ್ತ ಪ್ರೋತ್ಸಾಹಿಸಿರಿ

  ReplyDelete
 12. ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು..

  ReplyDelete
  Replies
  1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

   Delete