Friday, July 4, 2014

|| ಖಾಲಿ ಒಲವು ||

ಒಲೈಸುವ ಪರಿ ಬದಲಾಗಿರಲು
ಒಲವಿನ ಮೂಟೆ ಖಾಲಿಯಾಗಲು   
ಸರಿ ಸಮಯ ಬಿಡುವಿಲ್ಲದಂತೆ
ಮರಿ ಮನಸು ಮುದುಡಿರುವಾಗ ||

ನಕ್ಷೆಯಲು ಉಳಿಸಿಲ್ಲ ನಿನ ಗುರುತು
ಮನಸಲ್ಲು ಉಳಿದಿಲ್ಲ ನನ ಮರೆತು
ಕೊನೆಯಿರದ ಕೋಶದಲು ಸಿಗದಂತೆ
ಆಡುಭಾಷೆಯ ಪದವಾಗಿ ಹೋದೆ ||

ನಿಘಂಟಿನಲಿ ನೀನಿರದಿರೆ ಇನ್ನೇನಿದೆ
ಖಾಲಿ ಕಾಗದದ ಪುಸ್ತಕ
ನನ್ನೆದೆಯ ಅರಮನೆಯು ಸೋರುತಿಹುದು
ನಿನ ಪ್ರೀತಿಯ ಹೊದಿಕೆಯಿಲ್ಲದೆ ||

ನಾ ಬಡವನಾದೆ ನಿನ ಒಲವಿಲ್ಲದೆ
ಬಲ್ಲಿದನಾಗುತಿರುವೆ ವಿಷಮದೆಡೆಗೆ
ನೀ ಒಲಿದು ಅಲೆದು ಹೋದೆ
ನನ ಅಲೆಮಾರಿ ಮಾಡಿ ಅಳೆದೆ ||

ಕುಳಿತಿರುವೆ ಚಹ ಕುಡಿಯಲು
ಗೂಡಂಗಡಿಯ ಎದುರಲಿ ತೋಚದೆ
ನೀ ಸ್ಥಳಾಂತರ ಮಾಡಿರಲು
ತಬ್ಬಿಬ್ಬಾಗಿಹೆನು ಕಲ್ಪಿಸಲು ಆಗದೆ ||

4 comments:

  1. ಅಮಿತ ವ್ಯಥೆ ಮತ್ತು ನೊಂದ ಹೃದಯದ ವಿರಹ ಅಕ್ಷರಗಳಾಗಿ ಮೂಡಿಬಂದಿದೆ.

    ReplyDelete
  2. ವಿರಹ ಗೀತೆಗಳಲ್ಲಿ ಅದೇನೋ ಒಂದು ಅವ್ಯಕ್ತ ಸೆಳೆಯ ನನಗೆ...
    ಚೆನಾಗಿದೆ...ಆಕೃತಿಯೂ ಇಷ್ಟವಾಯಿತು..ಹಾಡುವ ಸಾಲುಗಳು..
    ಕುಳಿತಿರುವೆ ಚಹ ಕುಡಿಯಲು
    ಗೂಡಂಗಡಿಯ ಎದುರಲಿ ತೋಚದೆ

    ಬಹಳ ಹತ್ತಿರ ಎನಿಸಿತು..
    ಬರೆಯುತ್ತಿರಿ..
    ನಮಸ್ತೆ :)..

    ReplyDelete
  3. gud1 Vinayak........
    nOvide saalugaLalli, yaaraddo hrudayada maatugaLante bhaasavaayitu....

    ReplyDelete