Wednesday, July 16, 2014

|| ಮಳೆ ಮುತ್ತು ||

ಗಗನವು ಕಾಣದೀಗ ಮೇಲೆ ನೋಡಲು
ಕಪ್ಪನೆಯ ಮೋಡಗಳು ಸುತ್ತುಗಟ್ಟಲು
ರವಿಚಂದ್ರರು ಮರೆಯಲ್ಲಿ ಅಡಗಿ ಕೂರಲು
ಬಹುದಿನದ ಕೆಲಸದಲ್ಲಿ ದಿನವು ಅರಳಲು ||

ತಂಪು ಮಳೆಯು ಬಂತೆಂದು ಹರ್ಷವಾಯಿತು
ಮಳೆ ನೀರಲ್ಲಿ ನೆನೆಯುವ ಆಸೆಯಾಯಿತು
ಅಂಗಳದ ಆಟದಲ್ಲಿ ಒದ್ದೆಯಾಗಲು
ಕಾಲ್ಗಾಡಿ ಹೊರಟಿತು ಉರ್ತುಂಬ ಸುತ್ತಲು ||

ದಾರಿಯಲ್ಲಿ ಸಿಗುವ ಮಳೆ ಹನಿಗಳೆ
ನಿಮಗೆಲ್ಲ ನೆಚ್ಛಿನ ಹೆಸರ ನಾನಿಡಲೆ
ಯಾವ ಹನಿಯು ಚಿಪ್ಪಲಿ ಮುತ್ತಾಗಿ ಮರೆಯಾಗಿರುವುದೊ
ವರ್ಷಧಾರೆ ಹರಿದು ಭೂಮಿ ತಂಪಗಾಗುವುದೊ ||

ಕರಿದಾದ ಮೊಡದಲಿ ಬಣ್ಣವಿಲ್ಲದ ನೀರು ಅಡಗಿಹುದು
ಹೆಸರಿಲ್ಲ ಹನಿಗಳಿಂದ ಬೆಳೆಯು ಬೆಳೆವುದು
ಸುಸ್ತಾಗಿ ಬೀಳುವ ಹನಿಗಳೆಲ್ಲ ಕಡಲ ಸೇರುವುದು
ಮುಂದಿನ ತಯಾರಿಯಲ್ಲಿ ಮೊಡವಾಗುವ ಕಾತುರದಲಿ ||

1 comment:

  1. ಅಪ್ಪಟ ಸಾದೃಶ ಕವನ.
    ಮಳೆಗಾಲದ ಆಹ್ಲಾದಮಯ ವಾತಾವರಣ ರಮ್ಯವಾಗಿ ಚಿತ್ರಿತವಾಗಿದೆ.

    ReplyDelete