Monday, September 30, 2013

|| ಸಾಗದಿರಲಿ ನಿತ್ಯ ||

ನಿನಗೊಂದು ಉಡುಗೊರೆ
ನನ್ನ ಹೃದಯದ ಕೋಣೆ
ಈ ಜೀವವ ಮರೆತರೆ
ಇರುವುದು ನಿನ್ನ ಆಣೆ ||

ನೀ ಎದ್ದು ಹೋಗದಿರು
ನನ್ನೊಳಗಿನ ಭಾವ ದೋಚಿ
ನೀ ಕದ್ದು ಅಡಗದಿರು
ಅರಸಲು ನಾನಲ್ಲ ಸವ್ಯಸಾಚಿ ||

ನಂಬಿಕೆಯು ಮಾಡಿಹುದು
ಮಾತಾಡದಂತೆ ಸ್ತಬ್ಧ
ಮೌನದಲಿ ಒಪ್ಪಿಹುದು
ತತ್ವಗಳಿಗೆಲ್ಲ ಬದ್ಧ ||

ಹೊಂದಾಣಿಕೆಯಲಿ ಹುದುಗಿಹುದು
ಬದುಕಿನ ಪಯಣವೆಂಬ ಸತ್ಯ
ಹುಡುಕಾಟದಲಿ ಸಾಮರಸ್ಯವು
ಬಾಳಿನಲೆಂದು ಸಾಗದಿರಲಿ ನಿತ್ಯ ||

3 comments:

  1. ಜೋಡಿ ಗಾಲಿಗಳೇ ಸೂಕ್ತ ಸಲೀಸು ಬಂಡಿ ಯಾನಕ್ಕೆ :)

    ReplyDelete
  2. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

    ReplyDelete
  3. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

    ReplyDelete