Wednesday, September 18, 2013

|| ನಿನ್ನಂದದ ಹಚ್ಚೆ ||

ನಾನೆಲ್ಲಿ ತಲೆಯನಿಡಲಿ
ನಿನ್ನ ತೋಳಿನ ಹಾಸಿಗೆಯಿಲ್ಲದೆ
ದೇಹವೆಲ್ಲೆ ಒರಗಲಿ
ನಿನ್ನೆ ಬಯಸುವುದು ಮುಜುಗರವಿಲ್ಲದೆ ||

ಮಡಿಲಲ್ಲಿ ಮಲಗಲು
ನಾ ಮಾತನಾಡುವ ಮೂಕ
ದಿಟ್ಟಿಸಿ ನೋಡಲು
ನಾ ಕಣ್ಣಿದ್ದರು ಕುರುಡ ||

ನಿನ್ನ ದನಿಯನು ಕೇಳಲು
ನಾನು ಕಿವಿಯಿರುವ ಕಿವುಡ
ನಿನ್ನ ಮುಂಗುರುಳು ಸೋಕಲು
ನಾನು ಸ್ಪರ್ಷಜ್ಞಾನವಿಲ್ಲದ ಪೆದ್ದ ||

ಕಳೆದೋಗುವೆ ನಾ ನಿನ್ನೊಂದಿಗಿರಲು
ಕಳೆದುಕೊಂಡಂತಿರುವೆ ನನ್ನೆಲ್ಲ ಶಕ್ತಿಯನು
ಸೋತಿರುವೆ ನಿನ್ನೊಲವಿಗೆ ನಾನು
ಕಣ್ಗುಡ್ಡೆಯಲ್ಲಿ ನಿನ್ನಂದ ಹಚ್ಚೆಯಾಗಿರಲು ||

2 comments:

  1. ಒಲವಿನ ಪ್ರಿಯತಮನ ಈ ನುಡಿಗಳಲಿ ಸತ್ಯ ನಿವೇದನೆ ಇದೆ.
    ಹಲವು ಮದುವೆಯಾದ ಜೋಡಿಗಳೂ ಕ್ರಮೇಣ ಪರಸ್ಪರ ಹೀಗೇನೇ?

    ReplyDelete
    Replies
    1. ಮದುವೆಯಾದ ಜೋಡಿಗಳಲ್ಲೂ ಹೀಗಿರಉತ್ತದೆ ನನಗೆ ತಿಳಿದಂತೆ ಆದೆರೆ ಮದುವೆಯಾಗ ನೀವೆ ಹೇಳಬೇಕು ಹೇಗೆಂದು. ಅನುಭವಸ್ತರು ತಾವು. :) ಧನ್ಯವಾದಗಳು.

      Delete