Friday, September 20, 2013

|| ಫಸಲು ಬಿಡಲು ||

ಮುಂಗಾರು ಹನಿಯಂತೆ
ಧುಮುಕಿದೆ ನನ ಹೃದಯಕೆ
ಚಿಗುರಿದ ಬೀಜದಂತೆ
ಎದೆಯಲಿ ನೀ ಬೆಳೆದೆ ||

ನಿನ ಮೇಲಿನ ಮೋಹ
ಹಿಡಿದ ಬೇರಿನ ದಾಹ
ನೀ ಬಂದು ಇಂಗಿಸುತ
ಅಳಿಸು ಏಕಾಂಗಿ ಸಲ್ಲಾಪವ ||

ಮಣ್ಣಿನಲಿ ಬೆಳೆದಂತೆ
ಹುಸಿಮುನಿಸಿನ ವಿರಸ
ಗೊಬ್ಬರವ ಹಾಕಿದಂತೆ
ನಿನ್ನೊಂದಿಗಿನ ಸರಸ ||

ಸೊಂಪಾದ ಮಾತುಗಳು
ಸಂಗ್ದಿದ್ಧ ಪರಿಸ್ಥಿತಿಯಲು
ಚಪ್ಪರದಂತೆ ಆಸರೆಯು
ಖಿನ್ನತೆಯಲಿ ಕುಗ್ಗಿರಲು ||

ನೀರು ಗೊಬ್ಬರ ಬಿದ್ದಿರಲು
ಪುಟಿದೆದ್ದು ಬೆಳೆದಿರುವ ಸಸಿಯು
ಫಸಲು ಬಿಡುವ ಸಮಯವೆ
ಜೀವಗಳು ವರಿಸುವ ಕ್ಷಣವು ||

2 comments:

  1. ಒಂದಷ್ಟು ಗೊಂದಲ, ಗೋಜಲುಗಳಿವೆ. ಬರವಣಿಗೆ ಚೆನ್ನಾಗಿದೆ ಆದರೆ, ಕವನ ಅಧ೵ಕ್ಕೆ ನಿಂತಂತೆ ಭಾಸವಾಗುತ್ತದೆ. ಅಧ೵ಂಬಂಧ೵ ಸಾಲುಗಳು ಓದುಗರನ್ನು ತಬ್ಬಿಬ್ಬುಗೊಳಿಸುತ್ತದೆ. ಪ್ರಶ್ನೆಗೆ ಉತ್ತರ ನೀಡಲೇಬೇಕೆಂದೆನೂ ಇಲ್ಲ ಬದಲಾಗಿ ಓದುಗರಿಗೆ ಗೊಂದಲವನ್ನುಂಟು ಮಾಡುವಂತಿರಬಾರದು ಅಷ್ಟೇ. ಇಲ್ಲಿಯೂ ಹಾಗೇ ಆಗಿದೆ ಕೊನೆಯಲ್ಲಿ ಏನೋ ಕಳೆದುಹೋದಂತೆ ಭಾಸವಾಗುತ್ತಿದೆ. ಸಾಧ್ಯವಾದಲ್ಲಿ ತುಂಬಿಸುವ ಪ್ರಯತ್ನ ಮಾಡಬಹುದೇನೋ...

    ReplyDelete
  2. ಖಂಡಿತವಾಗಿಯು ನಿಮ್ಮ ಅನಿಸಿಕೆಯನ್ನು ಧನಾತ್ಮಕವಾಗಿ ತೆಗೆದುಕೊಂಡು ಮುಂದಿನ ನನ್ನ ಬರವಣಿಗೆಯ ಪಯಣದಲ್ಲಿ ಅಳವಡಿಸಿಕೊಳ್ಳುತ್ತೇನೆ.

    ನಿಮ್ಮ ಪ್ರತ್ಯಾದಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು.

    ReplyDelete