Wednesday, April 8, 2015

ಪ್ರೀತಿಯ ಅಹಂ

ಹೋಳಿಯ ಹಬ್ಬದಿ
ಓಕಳಿಯಾಡಲು
ಬಣ್ಣಕೆ ರಂಗಿಲ್ಲ
ಪ್ರೀತಿಯ ಹೆಸರಲಿ
ಜೀವವು ಬೆರೆಯಲು
ಸಮಯವು ಒದಗಿಲ್ಲ
ಚಂದ್ರನು ಬಂದನು
ಸುಡು ಬೆಳದಿಂಗಳ ತಂದನು
ಉರಿಯಲು ಮೈ ಮನವೆಲ್ಲ

ತನ್ನ ಅಹಂಮ್ಮಿನ ಕೋಟೆಯಲಿ
ತಾ ಮಾಡುವುದೇ ಸರಿಯೆಂದು
ತಮಗ್ಯಾಕೆ ಪರಸ್ಪರರ ಹಂಗೆಂದು
ದರ್ಪವು ತುಂಬಿದ ಮನದಲ್ಲಿ
ಜಿದ್ದಾಜಿದ್ದಿನ ಹುಸಿಮುನಿಸು

ನನಗಾಗೇ ಬೇಕು ನನ್ನವಳು
ಮುಡಿಪಾಗಿಡಬೇಕು ಪ್ರತಿಕ್ಷಣಗಳನು
ನನ್ನವಳ ಪ್ರತಿ ಅವಶ್ಯಕತೆಯಲಿ
ನಾನೇ ಮೊದಲಿಗನಾಗುವ ಹಂಬಲಕೆ
ವಿರಹದ ಆಕ್ರೋಶವು ದನಿಯಾಗುತಿದೆ

ಹಕ್ಕಿಯಂತೆ ಹಾರಾಡುವ ಬಯಕೆಯು
ಸ್ವಾವಲಂಬಿಯ ದುಡಿಮೆಯ ದರ್ಪಕೆ
ಪ್ರಭಾವದಿ ಹೊಂದಲು ಬದುಕಿನ ಇಂಗಿತ
ಅಹಂಕಾರದಿ ತೊರೆಯಲು ಅನುಬಂಧವನು
ಮದುವೆಯ ನಂತರ ಮುಂದಿನ ಮಾತುಗಳು

ಒಪ್ಪದ ಮನಸಲಿ ತೊರೆಯಲು ಇಬ್ಬರು
ಸೊಕ್ಕಿನ ಮಾತಲಿ ದೂರುವರು
ಸರಿಯಾಗದೆ ಒಲವಿದೆ ಮೆಚ್ಚಿದ ಮನಸಲಿ
ಎದೆಯಾಳವ ಅರಿಯುವ ಕೊರತೆಯಲಿ
ಸಾಗುತ ದೂರ ಸಾಗರ ತೀರದಲಿ

1 comment:

  1. ತೊರೆಯದಿರಲಿ ಸಂಗ. ಬೆರೆಯಲಿ ವಿಭಿನ್ನತೆಯೊಳು ಸಮಾನ ಮನಸುಗಳು. ಸಾಕ್ಷಾತ್ಕರಿಸಲಿ ಒಲವು. ಎಳವೆಯ ಬಿರುಸು ಪಕ್ವವಾದಂತೆಲ್ಲ ಸುಮಧುರ ಜೀವನಗಾನವಾಗುವುದು.
    ಒಳಿತೆ ನೆನೆಯೋಣ... ಒಲವನು ಉಳಿಸೋಣ...

    ReplyDelete