Sunday, April 14, 2013

|| ಕನ್ನಡಾಂಬೆ ||

ಇದು ನನ್ನ ನೂರನೆ ಕವನ. ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ.

ಸರಳತೆಗೆ ಹೆಸರು
ನಮ್ಮ ಕನ್ನಡ ನುಡಿಯು
ಅದಬಿಟ್ಟು ಆಗುವಿರಿ ನೀವೇಕೆ
ಕಂಗ್ಲೀಷೀನ ಗುಲಾಮರು ||

ರನ್ನ ಪಂಪರು
ಕದಡಿದ ಕವನದ
ಪದಗಳ ಪೋಣಿಸುವ
ಜನ್ಮವೆ ಸಾರ್ಥಕ ||

ಪದಗಳ ಗಣಿಯು ಕನ್ನಡಾಂಬೆಯು
ಮಾತೊಂದಕೆ ಹನ್ನೆರಡು ಅರ್ಥಗಳ ನೀಡುವಷ್ಟು
ಅದಕಾಗೆ ಬಣ್ಣಿಸುವರು ಕನ್ನಡ ಕಾಮಧೇನು
ಇಡೀ ಕರ್ನಾಟಕವೆ ಕಲ್ಪವೃಕ್ಷವೆಂದು ||

ಊಟವನು ತಿನಿಸುವಳು
ನಮ್ಮ ತಾಯಾದರೆ
ಅದ ಮಾಡಲು ಧಾನ್ಯ ನೀಡುವಳು
ಹಸಿರಿಗೆ ಉಸಿರಾದ ಕಾವೇರಿ ತಾಯಿ ||

ಹಲವು ಜಾನಪದ ಸಂಸ್ಕೃತಿಯು
ನಮ್ಮ ಕನ್ನಡ ನಾಡಲಿ
ವೀರ ತನಕೆ ಹೆಸರು ತಂದವರು
ಮಡಿದಿಹರು ಈ ಮಣ್ಣ ಬೀಡಲಿ ||

ಪ್ರತಿಜನ್ಮ ಜನಿಸಬೇಕು
ಕರುನಾಡ ಭೂಮಿಯಲಿ
ಪುಣ್ಯಕ್ಷೇತ್ರಗಳ ಹೊತ್ತಿರುವುದು
ಆ ನಿದರ್ಶನಗಳು ಗುಡಿಯಲಿ ||

2 comments: