Wednesday, August 22, 2012

|| ಗುರಿ ಮುಟ್ಟುವ ತನಕ ||

ಇಳೆಯನು ಮುಟ್ಟಲು ಹಗಲಲ್ಲಿ ಬರುತಿಹನು ರವಿಯು
ಕತ್ತಲನು ತೊರೆದು ಬೆಳಕಿನಲಿ ಪ್ರಜ್ವಲಿಸುತಿದೆ ಭುವಿಯು
ತನ್ನ ಹಠವ ಬಿದದೆ ಕಿರಣವ ತಲುಪಿಸಿಹನು ಧರೆಗೆ
ದಿನ ಕಳೆದರು ಮುತ್ತಿಕ್ಕಲಾಗದೆ ಕೋಪಗೊಂಡ ಜೀವಕೆ
ದುಗುಡವು ಜಾಸ್ತಿಯಾಗಿ ತಲೆ ಬಾಗಿ ನೋಡುತಿಹನು ||

ಪ್ರತಿದಿನವು ಮೇಲೇರಿ ಬರುತಿಹನು ಮುನ್ನುಗ್ಗಲು
ರವಿ ಬರಲು ಜಗ ಬೆಳಗಲು ಸುಪ್ರಭಾತ ಹೊರಹೊಮ್ಮಲು
ಇಂಪಾದ ರಾಗದಲಿ ಇಬ್ಬನಿಯ ತಂಪಿನಲಿ ಜೀವಗಳು
ಹೊಸದಿನದ ಎಣಿಕೆಯಲಿ, ನವಉಪಾಯದಲಿ ವರ್ತಕರು
ಛಲಬಿಡದೆ ತಿರುಗಿಯತ್ನವ ಮಾಡುತಿಹನು ಗುರಿ ಮುಟ್ಟುವ ತನಕ ||

ಭಾಸ್ಕರನ ಭರವಸೆಯಲಿ ಭುವಿಗೆಲ್ಲಾ ಬೆಳಕು ಸಿಗುತಿದೆ
ಆ ಶಶಿಯ ಬಯಕೆಯಲಿ ಬೆಲದಿಂಗಳೂಟವಾಗುತಿದೆ
ಜಗದಲಿ ಜರುಗುವ ವೈಪರಿತ್ಯದಲಿ ಹಾಜರಿ ಹಾಕಲು
ಕಳಗಿಳಿಯಲಾಗದೆ ಕೈ ಮುಗಿದುಶರಣಾಗುತ ಉಪಗ್ರಹವಾಗಿಹೆ
ತಂಪನ್ನು ನೀಡುತ ಮುನ್ನುಗ್ಗಿ ಬಾ ನೀನು ಗುರಿ ಮುಟ್ಟುವ ತನಕ ||

ಏಕಾಂಗಿ ಒಲವಾಗಿ ಸಂಗಾತಿ ಪ್ರೀತಿ ಸಿಗದೆ ಒದ್ದಾಡುವ
ಬಯಸುತ ಬಳಲುವ ಪ್ರೇಮಿಯಾಸೆ ಗುರಿ ಮುಟ್ಟುವ ತನಕ
ಕಪ್ಪಾಗಿ ಗುಂಪಾಗಿ ಹಾರಿ ಬರುವ ಕರಿಮೋಡದಂತೆ
ಹನಿ ಹನಿ ಧಾರೆಯಾಗಿ ಧರಿತ್ರಿಯನು ಚುಂಬಿಸುತ
ಭುವಿ ಸೇರುವಾಸೆಯು ಮಳೆಗೆ ಗುರಿ ಮುಟ್ಟುವ ತನಕ ||

ರವಿ ಕಾಣದಂತ ಊರಿನಾಚೆಗೆ ಹಾರಿ ಬರುವೆ
ಕವಿ ಕಲ್ಪನೆಗೂ ಸಿಗದಂತೆ ಬದುಕ ನಡೆಸುವೆ
ಒಳಿತನ್ನು ಬಯಸುವ ಪ್ರೀತಿ ಒಲವ ಪಡೆಯುವೆ
ಏನೇನೊ ಇಚ್ಛೆಯಿಟ್ಟು ಮನದಲ್ಲಿ ಬಾಳ ತೇಯುವೆ
ಮನದಾಸೆಯಂತೆ ಬಾಳಲಿಚ್ಛಿಸುವೆನು ಗುರಿ ಮುಟ್ಟುವ ತನಕ ||

No comments:

Post a Comment