Sunday, December 6, 2015

ನಿಶೆಯ ಸೆರಗು

ಮುಬ್ಬು ಮುಗಿಲ ಮಾಲೆಯಲಿ
ಅಡಗಿರುವ ಹೊಂಗಿರಣದ ಪಗಳೆಗಳು
ಚೂರು ಬಂದು ವಿರಹಿ ಎಂದು
ಅತ್ತ ಇತ್ತ ಅರಸಿದೆ ಜೋಡಿಯನು

ಸನಿಹದಲ್ಲಿ ಸಂಗಾತಿಯನು ಕಲ್ಪಿಸಿ
ದಿಟ್ಟ ತನದಿ ನೋಡಿದೆ ಒಂಟಿಯಾಗಿ
ಯಾವ ಮಗ್ಗಲಿನಲಿ ಹೊರಬಂದರೂ
ಕೆಲಸವಾಗದೆ ಬೇಸರಿಸಿತು ಸುಂಕವಿತ್ತರು

ಮೂಡಣದಲಿ ಹೊರಗೆ ಬಂದರೆ
ಕೋಳಿ ಕೂಗಿನ ಕಾಟವು
ಪಡುವಣದಲಿ ಮರೆಯಾದರೆ
ನಿಶಾಚರಗಳ ಮಾರ್ದನಿಯು

ದಡದ ಕಡೆಗೆ ಓಡುವ ಅಲೆಗಳಲಿ
ತಾರತಮ್ಯವಿಲ್ಲದ ತತ್ವಗಳಿವೆ
ಪ್ರಾಣಿಯಾಗಲಿ ಕಸವೇ ಆಗಲಿ
ಒಡಲಲ್ಲಿ ಉಳಿಸದೆ ಹೊರಗೆ ದೂಡುವುದು

ಸುರಿವ ಮಳೆಯಲಿ ಬೇಧವಿಲ್ಲ
ಎಲ್ಲರ ಮನ ತಣಿಸುವುದು
ಬೋರ್ಗರೆವ ತರಂಗಗಳ ಜೊತೆ
ನಿಶೆಯ ಸೆರಗು ಹಿಡಿಯಲೆ ಏಕಾಂತದಲಿ

ಮುಂಜಾನೆಯು ಮುಸ್ಸಂಜೆಯಂತೆ
ರಸಗಳೆ ಇಲ್ಲದಾಗ ನವರಸಗಳಲಿ
ಬೆಳಕ ಹೊತ್ತು ಕಿರಣ ಬಂದರೂ
ಚೈತನ್ಯವಿಲ್ಲದಂತೆ ಜೀವ ಸೊರಗುವುದು

8 comments:

 1. ವಿನಾಯಕರೆ, ನಿಮ್ಮ ಕವನದಲ್ಲಿ ತುಂಬಾ ಸುಂದರವಗಿ ನಿಶೆಯ ಸೆರಗನ್ನು ಬಿಡಿಸಿದ್ದೀರಿ.ಒಂದು ಒಳ್ಳೆಯ ಕವನ.

  ReplyDelete
  Replies
  1. ಧನ್ಯವಾದಗಳು...😊

   Delete
  2. ಧನ್ಯವಾದಗಳು...😊

   Delete
 2. ಸೊಗಸಾಗಿದೆ ಕಲ್ಪನೆ .. ತುಂಬಾ ಚೆಂದದ ಕವಿತೆ ಸರ್ ಜೀ .. :)

  ReplyDelete
 3. ಸುಂದರ ಕವನ :-) ಅಭಿನಂದನೆಗಳು ವಿನಾಯಕ್:-)

  ReplyDelete
 4. ಸುಂದರ ಕವನ :-) ಅಭಿನಂದನೆಗಳು ವಿನಾಯಕ್:-)

  ReplyDelete