Monday, October 20, 2014

ಕೇಳು ಸೂಚನೆ

ಊರಿನಾಚೆ
ನಿಂತು ನೋಡು ನನ್ನನೆ
ಎದೆಯೊಳಗೆ 
ಕೂತ ಕಾಡು ಮನಸನೆ
ತಿಳಿಯದೆ
ನಿನಗೆ ಒಂದು ಸೂಚನೆ
ನಿನಗಾಗೆ
ಮಿಡಿಯುತಿದೆ ನನ್ನೊಳಗಿನ ಭಾವನೆ

ಕನಸು ಕಾಣಲು

ಮನಸ ಕಲ್ಪನೆ ಕಾರಣ
ನಮ್ಮ ಮಿಲನಕೆ
ಹಾಕಿಸುವೆ ಊರತುಂಬ ತೋರಣ
ಪ್ರತಿಕ್ಷಣ
ಬದುಕಲು ನಿನ್ನ ಪ್ರೀತಿಯ ಹೂರಣ
ನೀನು ತೊರೆದರೆ
ಆಗುವುದು ನನ್ನ ಒಲವಿನ ಮಾರಣ

1 comment:

  1. ಆಕೆಯು ಒಲಿಯುವಳು ನಲ್ಲ ಬಯಸಿದಂತೆ.

    ReplyDelete