Thursday, August 14, 2014

|| ನೀ ಹೋದರೆ ||

ನೀ ತೊರೆದರೆ ನನ್ನ
ಜೀವ ಹೋಗುವ ಮುನ್ನ
ಆ ಚಂದ್ರನ ಕಣ್ಣಲ್ಲೂ
ನೀರು ಬರುವುದು
ಮುಸುಂಬ್ಳವ ಒರೆಸುತ
ಆ ಮೇಘ ಓಡುತಿರುವವು
ಮಳೆಯನ್ನು ಸುರಿಸಿ
ನಿನ್ನ ಹೆಜ್ಜೆ
ಗುರುತನ್ನು ಅಳಿಸಲು ||

ತೊಳೆಯುವೆನು ಚೊಕ್ಕದಾಗಿ
ಗೋಮಯವ ಹಾಕಿ
ಮನಸಲಿ ನೀ ಹಾಕಿದ
ಹಚ್ಚೆಯನು ಅಳಿಸಲು ಆಗದೆ
ಸೋಲುವೆನು ಸಾವಿನಲು
ಬೇತಾಳ ನಾನಾಗದೆ ||

ಹೊಸದಾದ ಸಂಗೀತ
ಲಯವಿರದ ರಾಗದಲಿ
ಸುಯ್ಯೆಂದು ಕೇಳುತ್ತಿದ್ದರೂ
ನೀ ಹೋದ ಘಳಿಗೆಯನು
ಒತ್ತಿ ಒತ್ತಿ ಹೇಳುತಿರುವವು
ನನ್ನೆದೆಯ ಬಡಿತಗಳು ||

3 comments:

  1. ಮುಸುಂಬ್ಳ ವಿಭಿನ್ನ ಪದ. ದಯಮಾಡಿ ಅರ್ಥ ವಿವರಣೆ ಕೊಡಿರಿ.
    ಉಳಿದಂತೆ ಇದು ಮನ ಮುಟ್ಟುವ ಕವನ.

    ReplyDelete
  2. ಧನ್ಯವಾದಗಳು ಸಾರ್.

    ಮೂಗು + ಸುಂಬಳ = ಮೂಸುಂಬ್ಳ

    ಅಂದರೆ ನೆಗಡಿಯಾದಾಗ ಮೂಗಿನಲ್ಲಿ ಬರುವ ಗೊಂಡೆ.

    ReplyDelete
  3. moosumbla byadagittu.ulidante olle prayatna ham

    ReplyDelete