Monday, August 11, 2014

ರಕ್ಷಾ ಬಂಧನವೇಕೆ ತೋರಿಕೆಯ ಬಂಧಗಳಾಗುತ್ತಿವೆ...?


ನಮ್ಮ ಬಾಲ್ಯವನ್ನು ನೆನೆದರೆ ಮರಳಿ ಮಗುವಾಗಿ ನಲಿಯುವಾಸೆ ಅಗುತ್ತದೆ. ನಮ್ಮ ಸಹೋದರಿಯರು ಕಟ್ಟುವ ರಕ್ಷಾ ಬಂಧನದ ದಿನವನ್ನು ನೆನೆಯಲು ಹೆಮ್ಮೆಯೆನಿಸುತ್ತದೆ. ಚಿಕ್ಕವರಾಗಿದ್ದಾಗ ಆ ದಿನವನ್ನು ಅದೆಷ್ಟೋ ಸಂಭ್ರಮದಿಂದ ಬೀಗುತ್ತಿದ್ದ ಕ್ಷಣಗಳು ಕಣ್ಣೆದುರಿಗೆ ಬಂದರೆ ಅಹ್ಲಾದಕರವೆಂದೆನಿಸುತ್ತದೆ.

ರಕ್ಷಾ ಬಂಧನದ ಉದ್ದೇಶ ಮರೆಯಾದಂತಿದೆ. ಇಂದು ರಕ್ಷಾ ಬಂಧನದ ಹಬ್ಬ ಬಂತೆಂದರೆ ಈ ದಿನ ಏನಕಪ್ಪ ಬಂತೆಂಬ ಭಾವ ಹೆಚ್ಚಿನದಾಗಿ ಎಲ್ಲ ಹುಡುಗರಲ್ಲಿ ಕಂಡುಬರುತ್ತಿದೆ. ಹಬ್ಬದ ವಾತವರಣ ಮರೆಯಾಗಿ ಅಡಗುವ ತಾಣ ಹುಡುಕುವ ಪರಿಸ್ಥಿತಿ ಬಂದೊದಗಿದೆ. ಯಾಕೆಂದರೆ ಮನದಲ್ಲಿ ಭಾವ ಇರದೆ, ಗೌರವವು ಇರದೆ ತೋರಿಕೆಯ ಮಾತು ಸಂಬಂಧದ ಸಂಕೊಲೆಯನ್ನು ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.

ಮೊದಲೆಲ್ಲ ರಕ್ಷಾ ಬಂಧನ ಕಟ್ಟಿದರೆ ಹೆಮ್ಮೆ, ನಾನೊಬ್ಬ ಜವಾಬ್ಧಾರಿಯುತ ವ್ಯಕ್ತಿ, ನಮಗ್ಯಾರು ಕಟ್ಟುವರೋ ಅವರ ರಕ್ಷಣೆಯ ಹೊಣೆ ನನ್ನದು ಎಂಬ ಮನೋಭಾವ ಅಂದಿನ ಹುಡುಗರಲ್ಲಿತ್ತು. ಹಾಗೆ ಹುಡುಗಿಯರಲ್ಲೂ ಸಹ ನಮ್ಮಣ್ಣ ಅಥವಾ ನಮ್ಮ ಬಗ್ಗೆ ಕಾಳಜಿಯುಳ್ಳವರು ಎಂದು ಧೈರ್ಯದಿಂದ ತಲೆ ಎತ್ತಿ ನಡೆಯುತ್ತಿದ್ದರು, ಗೌರವದಿಂದ ಕಾಣುತ್ತಿದ್ದರು.

ಆದರೆ ಇಂದು....

ಹೆಚ್ಚಿನ ಜನರಲ್ಲಿ ಈ ಹಬ್ಬ ಬಂತಂದರೆ ಯಾಕಪ್ಪ ಬಂತು...? ಹೇಗೆ ತಪ್ಪಿಸಿಕೊಳ್ಳೋದು...? ಎಲ್ಲಿ ಅಡಗೋದು...? ಎಂಬ ಚಿಂತೆ ತಲೆದೋರಿದರೆ ಹುಡುಗರಲ್ಲಿ ಯಾರಿಗೆ ರಾಖಿ ಕಟ್ಟಿ ಅವರ ಕಾಟದಿಂದ ತಪ್ಪಿಸಿಕೊಳ್ಳಬೇಕು, ಯಾವ ಹಿಂಬಾಲಕರಿಗೆ ರಾಖಿ ಕಟ್ಟಿ ಅವರಿಂದ ಪಲಾಯನವಾಗಬೇಕೆಂಬ ಆಲೋಚನೆ ಶುರುವಾಗುತ್ತದೆ.

ರಕ್ಷಾ ಬಂಧನದ ಉದ್ದೇಶ, ಅದರ ಹಿಂದಿನ ನಿಯಮ ಮತ್ತು ನಿಯಂತ್ರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಂತಿದೆ. ದುಷ್ಟರ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೋಸ್ಕರ ಸಹೋದರಿಯರು ತಮ್ಮ ಸಹೋದರರಿಗೆ, ತಮ್ಮ ರಕ್ಷಕರಿಗೆ ವಿನಂತಿಸಿಕೊಳ್ಳಲು ಕಟ್ಟುವ ಕಂಕಣವೇ ಈ ರಕ್ಷಾ ಬಂಧನ. ಆದರೆ ಇಂದು ಇದನ್ನು ಕಟ್ಟಿದರೆ ಅಣ್ಣ ಎಂಬ ಅರ್ಥ ಬರುತ್ತದೆ ಅಥವಾ ಅಣ್ಣ ಎಂದಾಗುತ್ತದೆ ಎಂಬ ಭಾವ. ಹೀಗಾಗಿ ಯಾವುದಾದರು ಹುಡುಗರು ಹಿಂಬಾಲಿಸುತ್ತಿದ್ದರೆ ಅವರ ಕಾಟದಿಂದ ತಪ್ಪಿಸಿಕೊಳ್ಳಲು ರಾಖಿ ಕಟ್ಟುವ ಜಾಯಮಾನಕ್ಕೆ ತಿರುಗಿರುವುದು ಪವಿತ್ರ ರಕ್ಷಾ ಬಂಧನದ ಅರ್ಥಕ್ಕೆ ಚ್ಯುತಿ ಬಂದಂತೆ ಭಾಸವಾಗುತ್ತಿದೆ.

ಈ ರಾಖಿ ಕಟ್ಟಿದರೆ ಯಾರಾದರೂ ಸಹೋದರರಾಗುತ್ತಾರೆ ಅಂತಂದರೆ ಭಾವನೆಗೆ ಬೆಲೆ ಇಲ್ಲವೆಂದರ್ಥವೇ...? ಇದು ಸರಿಯಲ್ಲವೆನ್ನುವುದು ನನ್ನ ಭಾವನೆ. ಜನರಲ್ಲಿ ಭಾವನೆ ಇರಬೇಕು ಹಾಗಿದ್ದರೆ ಮಾತ್ರ ಯಾವುದೇ ಹಬ್ಬಕ್ಕಾಗಲಿ, ಯಾವುದೇ ಪದ್ಧತಿಗಾಗಲಿ ಒಂದು ಸಮಂಜಸ ಅರ್ಥ ಬರಲು ಸಾಧ್ಯ.

ದುಷ್ಟರಿಂದ ರಕ್ಷಣೆ ಪಡೆಯಲಿಕ್ಕೊಸ್ಕರ ತಮ್ಮ ತಮ್ಮ ಸಹೋದರರಿಗೆ & ರಕ್ಷಕರಿಗೆ ಕಂಕಣ ಕಟ್ಟಲೆಂದು ಪ್ರಾರಂಭಿಸಿದ ಪದ್ಧತಿ & ಸಂಪ್ರದಾಯ ಅದರ ಅರ್ಥ & ದಾರಿಯನ್ನು ತಪ್ಪುತ್ತಿರುವುದು ಬೇಸರದಸಂಗತಿಯಾಗಿದೆ. ರಕ್ಷಾ ಬಂಧನ ಕಟ್ಟಿದರೆ ಮಾತ್ರ ಹುಡುಗಿಯರಿಗೆ ಹುಡುಗರು ಸಹೋದರರಾಗುತ್ತಾರೆ ಎಂದಾದರೆ ರಕ್ಷಾ ಬಂಧನದ ವಾರ್ಷಿಕೊತ್ಸವವನ್ನು ಆರ್.ಎಸ್.ಎಸ್ ನಂತಹ ರಾಷ್ಟ್ರೀಯ ಸಂಘಗಳಲ್ಲಿ ಹುಡುಗರು ಹುಡುಗರಿಗೆ ಕಟ್ಟುವ ಅವಶ್ಯಕತೆ ಇಲ್ಲವಾಗಿತ್ತು. ರಾಖಿಯನ್ನು ಹುಡುಗರು ಹುಡುಗರಿಗೆ ಕಟ್ಟಿದರೆ ಕಟ್ಟಿದಂತ ಹುಡುಗರೇನು ಹುಡುಗಿಯರಾಗುತ್ತಾರೆಯೇ...? ಇಲ್ಲ, ಇದರರ್ಥವೇನೆಂದರೆ ನಮ್ಮ ರಕ್ಷಣೆಗೆ ನೀವುಗಳಿರಬೇಕು ಹಾಗೆ ನಿಮ್ಮ ರಕ್ಷಣೆಗೆ ನಾವುಗಳಿರುತ್ತೇವೆ ಎಂಬ ಸಂದೇಶವನ್ನು ರವಾನಿಸುವುದಷ್ಟೆ.

ಅದರ ಹೊರತಾಗಿ ದುಷ್ಟ ಹುಡುಗನಿಂದ ಕೊಡುವ ಕಾಟವನ್ನು ತಪ್ಪಿಸಿಕೊಳ್ಳಲು ರಕ್ಷೆಯನ್ನು ಕಟ್ಟಿ ಆ ದುಷ್ಟನನ್ನೆ ಸಹೋದರನನ್ನಾಗಿ ಮಾಡಿಕೊಳ್ಳಬೇಕೆಂಬ ಅರ್ಥವಲ್ಲ. ಹಾಗಿದ್ದರೆ ನೇರವಾಗಿ ಬರುವ ಆಪತ್ತು ಸುತ್ತುವರಿದು ಕಾಣದ ರೀತಿಯಲ್ಲಿ ಬೇರೊಂದು ದಾರಿಯಲ್ಲಿ ನಮ್ಮನ್ನು ಆವರಿಸುತ್ತದೆ. ನಮ್ಮ ಜನರ್ಯಾಕೆ ಈ ಪವಿತ್ರ ರಕ್ಷಾ ಬಂಧನದ ಪವಿತ್ರ ಬಂಧನದ ಅರ್ಥವನ್ನು ಅನರ್ಥವಾಗಿ ತಿರುಚಿಸಲು ಪ್ರಯತ್ನಿಸುತ್ತಿದ್ದಾರೋ ಎನ್ನುವುದೆ ಅರ್ಥವಾಗದೆ ಇರುವ ಪ್ರಶ್ನೆಯಾಗಿದೆ.

ಸಹೋದರಿಯ ಭಾವ ತುಂಬಿ ನೀಡುವ ಪ್ರೀತಿಗೆ ಮಿಗಿಲಾದ ಸಹೋದರಿಯ ಬಾಂಧವ್ಯವು ಮತ್ತೊಬ್ಬಳಿಂದ ಬಯಸಲಾಗದ ಸಂಬಂಧವಾಗಿರುತ್ತದೆ. ಈ ಒಳ್ಳೆಯ ಬಂಧನವು ಗಟ್ಟಿಯಾಗಿರಲೆಂಬ ಬಯಕೆಯನ್ನು ವ್ಯಕ್ತ ಪಡಿಸುವ ರೀತಿಯೆ ಈ ರಾಕ್ಷಾ ಬಂಧನದ ಹಬ್ಬ. ಆ ಶುಭ ದಿನದಂದು ದಾರ ಕಟ್ಟುವ ಮೂಲಕ ಭಾವ ವ್ಯಕ್ತ ಪದಿಸುತ್ತಾರೆ ಹೀಗಾಗಿ ಅದನು ನುಗುಲು ಹುಣ್ಣಿಮೆಯೆಂದು ಕರೆಯುತ್ತಾರೆ.

1 comment:

  1. ರಕ್ಷಾ ಬಂಧನವು ಇಂದು ತೋರಿಕೆಯ ಮತ್ತು ಪೊಳ್ಳು ಆಚರಣೆಯಾಗುತ್ತಿರುವತ್ತ ತಮ್ಮ ಈ ಲೇಖನ ಬೆಳಕು ಚೆಲ್ಲುವಂತಿದೆ.

    ReplyDelete