Monday, May 19, 2014

|| ನೆನಪಿನ ವಿಧಗಳು ||

ಸಪೂರಿ ನುಗ್ಗಿ ಚೌಳಿನಲಿ ಹೊಡೆತ ತಿಂದ
ದಿನಗಳಲಿ ಹೊಡೆತ ಕೊಟ್ಟ ಮಾಷ್ಟ್ರು
ಮರೆಯಾಗಿಲ್ಲ ಮನಸಿನ ನೆನಪಿನನಂಗಳದಲ್ಲಿ
ಆಡಿದ ಕಂಬದಾಟದ ಹುರುಪಿನ ನೆನಪು ||

ಒಂಟಿ ಕಾಲಲಿ ಕುಂಟ್ಲೀಪಿಯಾಡುತ
ಕದ್ದು ಮುಚ್ಚಿ ಕಾಲು ಬದಲಿಸಿದಾಗ
ತುತಿಯೆಂದು ತಲೆ ಮುಟ್ಟಿ ಕುಳಿತಾಗ
ಜಿರಿ ಹಾಕಿದಾಗ ಮಾಡಿದ ಜಗಳದ ನೆನಪು ||

ಉಪಾಧ್ಯಾಯರ ಚರ್ಚೆ ನೆಡೆಯುವಾಗ
ತರಗತಿಯಲಿ ಗಲಾಟೆ ಜೋರಾದಾಗ
ಬೇಕಾಬಿಟ್ಟಿ ತಿಂದ ಹೊಡೆತದ ನೋವು
ಬೆನ್ನು ಒಡೆದು ರಕ್ತ ಬಂದ ಕಹಿ ನೆನಪು ||

ಬರದಿದ್ದಾಗ ತಲೆಕೆಟ್ಟು ಕೂತಾಗ
ಪರೀಕ್ಷೆಯಲ್ಲೇನು ಬರೆಯಬೇಕೆಂಬ ಯೋಚನೆ
ಹೊಟ್ಟೆ ಬಟ್ಟೆ ಮೇಲೆ ಬರೆದು
ಮಾಡಿದ ನಕಲುಗಳ ನಾಚಿಕೆಯ ನೆನಪು ||

ನಾನಾ ಬಗೆಯ ಹಣ್ಣುಗಳನು ಕೊಯ್ಯುತ
ಖುಷಿಯಲಿ ಕದ್ದು ತಿಂದು ತೇಗುವ ಕ್ಷಣಕೆ
ತವರಿಕೊಂಡು ಬಂದ ತೋಟದೊಡೆಯನ ಕಂಡು
ಕಾಲುಕೀಳುವಾಗ ಕಮ್ಚಡಿಯಾಗಿ ಬಿದ್ದು
ಕದ್ದಿಲ್ಲ ತಿಂದಿಲ್ಲವೆಂದು ಓಡಿದ ಮರ್ಯಾದಿ ನೆನಪು ||

2 comments:

  1. ಬಾಲ್ಯದ ಹಲವು ಭಾವಗಳ ಈ ನೆನಪಿನ ಸಂಚಯ,
    ನಮ್ಮನ್ನೂ ಬಾಲ್ಯದ ನೆನಪುಗಳೆಡೆಗೆ ಎಳೆದೊಯ್ಯಿತು.

    ReplyDelete
    Replies
    1. ಧನ್ಯವಾದಗಳು ಸಾರ್.....

      Delete