Saturday, May 24, 2014

|| ಮನ್ನಿಸು ||

ಮುನಿಸೊಂದು ಬಂತು ಎಂದು
ನಿನೀಗ ಗುಡುಗುವುದು ಏಕೆ?
ನಿನ ಪ್ರೀತಿ ಮಾತಿಂದ
ಪಯಣಕ್ಕೆ ಸೊಬಗು ಬಂತೀಗ
ನನ್ನ ಜೀವ ನೀನು ತಾನೆ
ಬಿಡು ಕೋಪ ಸ್ಪೂರ್ತಿ ನೀನೆ ||

ಕಣ್ಣಲ್ಲಿ
ತುಂಬಿದ ನೀರಲ್ಲಿ
ಕೈತೊಳೆಯುವ ಕಂದ ನಾನು
ನಿನ್ನ ಮಗುವಂತೆ ಲಾಲಿಸು

ಎದೆಯಲ್ಲಿ
ಮನಸಿನ ಮನೆಯಲ್ಲಿ
ಆಶ್ರಯವ ನೀ ನೀಡು ನನಗೆ
ನಿರ್ಗತಿಕನೆಂದು ಪೋಷಿಸು ||

ಮೊಗದಲ್ಲಿ
ಭಾವನೆಯ ತೇರಲ್ಲಿ
ಕೆಳಗಿಳಿಸಿ ಕ್ರೋಧದಾಸನವ ನೀ ತೋಕು
ಒಲವಿನಲಿ ಮನ್ನಿಸು ನೀ ಸಾಕು

ಮೊಗದಲ್ಲಿ
ಸೆಳೆಯುವ ಪರಿಯಲ್ಲಿ
ಈ ಎದೆಗೆ ಕನ್ನವ ನೀ ಹಾಕು
ಹುಸಿಮುನಿಸ ನೀ ತೊರೆಯಬೇಕು ||

3 comments:

  1. ’ಒಲವಿನಲಿ ಮನ್ನಿಸು ನೀ ಸಾಕು’
    ಆಕೆ ಕರಗಿದಳು ಎಂದು ಸುದ್ದಿ.

    ReplyDelete
  2. ಕೋಪಾಲಾಪ ಚೆನಾಗಿದೆ :D

    ReplyDelete
  3. ಚನ್ನಾಗಿದೆ ಸರ್

    ReplyDelete