Tuesday, December 10, 2013

|| ಭಾವ ನುಡಿ ||

ಭಾವವ ನುಡಿಸಲು ಕನ್ನಡತಾಯಿ
ದಾಹವ ನೀಗಲು ಕಾವೇರಿತಾಯಿ
ನೀನೋಡು ನಾನೆಂತ ಧನ್ಯ
ಜನಿಸಿರುವುದೆ ಪೂರ್ವಜನ್ಮದ ಪುಣ್ಯ...

ಶ್ರೀರಾಮನ ಬೆವರ ಹನಿಗಳೆ
ಅಂಬುತೀರ್ಥದ ಶರಾವತಿ
ಮಂಜುನಾಥನ ಎಂಜಲುಗಳೆ
ಧರ್ಮಸ್ಥಳದ ನೇತ್ರಾವತಿ...

ಬಯಲುಸೀಮೆಯ ಗಡಸುತನವೆ
ಚೆನ್ನಮ್ಮನ ಹೋರಾಟದ ಫಲವು
ವೀರಶೌರ್ಯವ ಮೆರೆಯುವಾಗ
ಆಳಿದ ರಾಜರುಗಳ ನೆನಪುಗಳು...

ಶ್ರೀಮಂತಿಕೆಯ ಸೊಬಗಿಗೆಂದು
ಕೋಲಾರದ ಚಿನ್ನದ ಗಣಿಯು
ಬೈತಿಡಲಾಗದು ನಿಷ್ಕಟತನವನು
ಬಳ್ಳಾರಿ ಗಣಿಯ ಧೂಳು ಮುಸುಕಿದರು...

ಬೆಳೆಗಳುಂಟು ಉರಿಯನಾಡಿನಲಿ ಬಿಸಿಲದಗೆಯಲು
ಬೆಂದಕಾಳೂರಿನಲು ಸಿಹಿಯು ಬೆಳಗಾವಿ ಕುಂದವು
ಕನ್ನಡನಾಡಿನ ಇಕ್ಕೆಲಗಳು ಸೇರಲೊಂದೆ ಜಯ
ಮನಸಲಿ ಇರುವುದೆ ಹೀಗೆ ಭಾವನೆಯೆ ಹಾಗೆ...

4 comments:

  1. Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ. ನಿಮ ಪ್ರೋತ್ಸಾಹ ಸದಾ ಹೀಗೆ ಇರಲಿ.

      Delete
  2. Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete