Friday, August 2, 2013

|| ತಿಳಿಯಾದ ಭರವಸೆ ||

ಆ ಸುಂದರ ಚೈತ್ರದ
ಚಿಗುರಲ್ಲಿ ಅಗಲಿರಲು
ಅದೆ ಹಸಿರ ಸಿರಿಯಲ್ಲಿ
ಉಸಿರು ನಿಂತಿರುವುದು ||

ಕೋಗಿಲೆಯು ಕೂಗಿರಲು
ಇಂಪಾಗಿ ಕೂಹು ಕೂಹು
ಕಿವಿಯಲ್ಲಿ ಕೇಳಿರುವುದು
ಕರ್ಕಷದ ಗುಸು ಗುಸು ||

ಎಳೆಗೂಸು ಮಡಿಲಲ್ಲಿ
ನೀ ನೀಡಿದ ಉಡುಗೊರೆ
ಮತ್ಯಾರು ಪೊರೆಯುವರು
ನಾ ಪೋಷಿಸಲಾಗದೆ ಸತ್ತರೆ ||

ಕೇಳುತಿದೆ ಬೆಳೆಯುತಿರಲು
ಅಮ್ಮನ್ನೆಲ್ಲೆಂಬ ಪ್ರಶ್ನೆಗಳನು
ಮರದ ಅಡಿಯಲ್ಲಿ ಕೂತು
ರೆಂಬೆಯಲ್ಲಿರುವಳೆಂಬ ಮಾತು ||

ಆಸೆ ಕಮರಿದರು ಬದುಕಿರುವೆ
ಬೆಳಗುವ ದೀಪಕೆ ಎಣ್ಣೆಯಾಗಿರುವೆ
ನಮ್ಮ ಕನಸು ನನಸಾಗಲೆಂದು
ಉಳಿದಿದೆ ತಿಳಿಯಾದ ಭರವಸೆಯೆಂದು ||

2 comments:

  1. ಭರವಸೆ ತಿಳಿಯಾಗಿದೆ ಕಣಪ್ಪಾ. ಅಸ್ತು!

    ReplyDelete
  2. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

    ReplyDelete