Tuesday, September 30, 2014

ಅರ್ಧ ಸತ್ಯ

ಕಳೆದ ಘಳಿಗೆಯ
ಅರಿವ ಸಮಯ
ಕೇಳಿದ ಮಾತುಗಳೆಲ್ಲ
ನಿಜದ ಕೂಸುಗಳಲ್ಲ
ಹೀಗೆ ಇತ್ತು ವಿಷಯದಲ್ಲಿ
ಏನೋ ಆಯ್ತು ಬದುಕಿನಲ್ಲಿ
ಅದನು ನೀನು ನಂಬುವ ಮೊದಲೆ
ನಿರ್ಣಯದ ಹೆಜ್ಜೆಗಳು ಸಲ್ಲದು...

ಕ್ರಿಯೆಯ ಕತೃವು ಯಾರಾದರೇನು
ಕಾರ್ಯಕೆ ಕಾರಣವು ಬೇರೆ ಇರಲು
ಮಾಡಿದ ಕೈಗಳಾವುದೋ
ಬಿಂಬಿಸುವ ಹೆಸರು ಇನ್ಯಾರದೋ
ಕೂಲಂಕುಶವಾಗಿ ತಿಳಿಯಲು
ಸತ್ಯದನಾವರಣ ಆಗುವುದು...

ಯಾರೋ ಮಾಡುವ ಕೆಲಸದಲ್ಲಿ
ಮಧ್ಯ ಬರುವರು ಬೇರೆ ಯಾರೋ
ಮಾಡದ ಚಟುವಟಿಕೆಯಲಿ
ತೇಲುವ ಗಾಳಿಮಾತಿನಲಿ
ಬರುವ ಹೆಸರಿನ ಹಿಂದೆ ಇರುವುದು
ಗುರುತಿಗೆ ಕಾಣದ ಅರ್ಧ ಸತ್ಯವು...

1 comment:

  1. ಪೂರ್ಣ ಸತ್ಯ ಯಾವತ್ತೂ ತೋರಗೊಡದು. ಬರೀ ಇಂತಹವೇ ಎಲ್ಲ ಕಡೆ!

    ReplyDelete