Friday, June 13, 2014

|| ತೊರೆದು ಹೊರಟಿರುವೆ ||

ಇಂಪಾದ ರಾಗದಲ್ಲಿ
ನನ ಮದುವೆಯ ಕರೆಯೋಲೆ
ನೀ ನೀಡು ಕೋಗಿಲೆ
ಗರಿ ಬಿಚ್ಚಿ ನಾಟ್ಯವಾಡಿ
ಆಕರ್ಷಿಸಿ ಸ್ವಾಗತವ
ನೀ ಕೋರು ನವಿಲೆ
ನಿಮ್ಮೊಂದಿಗೆ ನಾ ಕಳೆದ
ನೆನಪನ್ನು ಮೆಲಕುತ
ಇನಿಯನೂರಿಗೆ ನನ್ನ
ಕಳುಹಿಸಿಕೊಡ ಬನ್ನಿರೆ
ನಾ ಜೊತೆಯಾಗಿ
ಹೊರದುವ ಮುನ್ನ
ಬಳಿಬಂದು ಹರಸುತ
ಹೋಗಿ ಬಾ ಎಂದು
ಬಿಳ್ಕೊಡುವಿರಲ್ಲವೆ ||
ಹರಿವ ನೀರಿನಲಿ
ಮಿಂದು ಪುಳಕಿತನಾಗಲು
ತಾಯಿ ಶರಾವತಿಯ
ಕೃಪೆಯು ಇಹುದಲ್ಲವೆ
ವಿಶಾಲವಾದ ಗದ್ದೆಯಲಿ
ಬೆಳೆದಿರುವ ತೆನೆಯನ್ನು
ಕಿತ್ತು ತಿಂದು
ಬಲವಾಗಿ ಬೆಳೆದಿರುವುದು
ನಿಜವಲ್ಲವೆ ||
ಗುಡ್ಡ ಬೆಟ್ಟದಲಿ
ತುಂಬಿರುವ ಹಸಿರಿನಲಿ
ಅಡಗಿರುವ ನನ್ನ ಉಸಿರನ್ನು
ಧಾರೆಯೆರೆಯಿರಿ
ಹುಟ್ಟಿಂದ ಜೊತೆಯಿರುವ
ನಿಮ್ಮನ್ನು ನಾ
ತೊರೆದು ಹೊರಟಿರುವೆ
ಹರಸಿರಿ ನಮ್ಮನು
ಬಯಸಿರಿ ನಮ್ಮ
ಏಳಿಗೆಯನು ||

1 comment:

  1. ಪ್ರಕೃತಿಯಲೇ ಹುಟ್ಟಿದ ಆಕೆಯನ್ನು 'ನಿತ್ಯ ಹರಿದ್ವರ್ಣೆಯಾಗಿರು' ಎಂದೇ ಹರಸಿ ಕಳಿಸುತ್ತೆ ತಾಯೆ ಧರಿತ್ರೀ.

    ReplyDelete