Friday, March 21, 2014

|| ಪುಕ್ಸಟೆ ನಿಯತ್ತು ||

ಪುಕ್ಸಟೆ ತರೋದಿಲ್ಲ ನನ್ನಾಣೆ
ತಲೆ ಕೆಟ್ಟಿ ಅಗೋಯ್ತು ಹನ್ನೆರ್ಡಾಣೆ
ಚೌಕಾಸಿ ಮಾಡಿರುವೆ ಎಂಟಾಣೆ
ಬಿಡಿಗಾಸು ಕೊಟ್ಟಿರುವೆ ನಾಲ್ಕಾಣೆ
ನಂಬು ನನ್ನನ್ನ ನಿಜ ನಿನ್ನಾಣೆ ||

ಕಂಜುಸು ನಾನೇನೆ ಹಣಕಾಗಿ
ನೀತಿ ಬಿಡಲೊಲ್ಲೆ ಜಿಪುಣತನಕಾಗಿ
ಬಿಟ್ಟಿ ಮಾಡೊಲ್ಲ ಊಟಕಾಗಿ
ಉಚಿತವಾಗಿ ಪಡೆಯೊಲ್ಲ ಆತ್ಮಾಭಿಮಾನಕಾಗಿ
ಸಣ್ಣತನ ಮಾಡೋದಿಲ್ಲ ಸ್ವಾಭಿಮಾನಕಾಗಿ ||

ಬೇರೆಯವರೆದುರು ಬಾಗೋದಿಲ್ಲ
ನಂಬಿದವರ ಮಾನ ಕಳೆಯೋದಿಲ್ಲ
ಉಸಿರಾಟಕೆ ಸುಂಕ ನೀಡೋದಿಲ್ಲ
ನಂಬಿಕೆ ಬಿಟ್ಟು ಬಾಳೋದಿಲ್ಲ
ನಿನಗಾಗಿ ನಿಯತ್ತು ಬಿಡೋದಿಲ್ಲ ||

6 comments:

  1. ಮಾನವಂತನಾಗಿಯೂ ನೀತಿವಂತನಾಗಿಯೂ ಬದುಕೋ ಕಾವ್ಯ ನಾಯಕನ ಮನಸು ಮೆಚ್ಚುಗೆಯಾಯಿತು.

    ReplyDelete
  2. ನಂಬಿಕೆ ಬಿಟ್ಟು ಬಾಳೋದಿಲ್ಲ
    ನಿನಗಾಗಿ ನಿಯತ್ತು ಬಿಡೋದಿಲ್ಲ....sundara saalugalu...

    ReplyDelete
  3. ಚನ್ನಾಗಿದೆ ಸರ್ ನಿಮ್ಮ ಕವನ...

    ReplyDelete