Thursday, March 13, 2014

|| ನನದೇನಿದೆ? ||

ದಿಕ್ಕು ಅರಿಯದ ಜಾಗದಲಿ
ಪಯಣಕ್ಕೊಂದು ಹೆಸರು ಜೀವನ
ತಂದಿರುವುದಾದರು ಏನು?
ಒಯ್ಯುವುದಾದರು ಏನು?
ಅರಿಷಡ್ವರ್ಗಗಳ ಅಟ್ಟಹಾಸದಲಿ
ಕುಣಿಯುವ ಕರ್ಮಿ ದೇಹ ||

ಗಳಿಕೆಯನು ಕೂಡಿ ಮೆರೆವೆ
ನಗ ನಾಣ್ಯ ಗಳಿಸಿಕೊಳ್ಳುವೆ
ಆಡಂಬರಕೆ ಬಂಗಾರ ಘನತೆ
ಸತ್ತಾಗ ಬಟ್ಟೆಯು ಇರದು
ಕಾಂಗಿ ಶವದ ಜೊತೆ
ಚಿನ್ನವೆಲ್ಲಿಯ ಚೈತನ್ಯ ಬದುಕಲು? ||

ಕೆಳಗಿದ್ದಾಗ ಮೇಲತ್ತಿಸುವುದು ಏಣಿ
ಏರಿದಾಗ ಒದೆಸಿಕೊಳ್ಳುವುದು ಏಣಿ
ಬರೆದ ಬ್ರಹ್ಮನಿಗೆ ಹಣೆಬರಹ ತಿದ್ದಲಾಗದು
ಕಷ್ಟಕೆ ಕೈಮುಗಿದರೆ ದೇವನೇನು ಮಾಡುವನು?
ಸ್ವಯಂಚಾಲಿತವಲ್ಲ ಮಾನವ ಸೃಷ್ಠಿ ಇಂಧನವಿರದೆ
ಕೊನೆಯಾಗುವುದೊಂದೆ ವಿಧಿಯೆಂಬ ಕಾಲದ ನಿರ್ಣಯ ||

ಬರುವಾಗಲೂ ಹೋಗುವಾಗಲೂ ಬೆತ್ತಲೆ
ಪಯಣದಲಿ ಕಂಡಾಗ ಆರಿಸು ಕತ್ತಲೆ
ನನದೆಂದು ಹೇಳಿಕೊಳ್ಳುವ ದೇಹ
ನರಮಾಂಸರಕ್ತದಲಿ  ತುಂಬಿದ ಗಡಿಗೆ
ಪ್ರಾಣಹೋದಾಗ ಜೊತೆ ಬಾರದ ದೇಹವು
ಆತ್ಮ ಮಾತ್ರವೆ ನನದು ಶರೀರ ಪಂಚಭೂತದ್ದು ||

ಗುರುತಿನ ಮೈಕೂಡ ಸ್ವಂತವಲ್ಲ
ಗಳಿಸುವ ಬಿಡಿಕಾಸು ತನ್ನದಲ್ಲ
ಇತಿಹಾಸದಾಸ್ತಿ ಪಡೆಯುವ ಬಿರುದು
ಸ್ಮರಿಸುವ ಪರೋಪಕಾರ ಕಣ್ಣೀರಿನದು
ಹೋಗುವ ಪ್ರಾಣದ ಜೊತೆಬಾರದು ದೇಹ
ಯೋಚಿಸು ಜಗದಲಿ ನನದೇನಿದೆಯೆಂದು ||

8 comments:

  1. ಮಾನವ ಮೂಳೆ ಮಾಂಸದ ತಡಿಕೆ ಅನ್ನುತ್ತಾರೆ ಖ್ಯಾತ ಸಿನಿಮಾ ಕವಿ.
    ಮಾರ್ಮಿಕ ಕವನ.

    ReplyDelete
  2. ತುಂಬಾ ಚನ್ನಾಗಿದೆ ಸರ್ ನಿಮ್ಮ ಕವನ.

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

      Delete
  3. ಜೀವ(ನ)ದ ಹಲವಾರು ಮಜಲುಗಳನ್ನು ಪರಿಚಯಿಸುವ ಕವನ.. ಸುಂದರ

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

      Delete
  4. realy sooper vinayak. kavite tumbaa chandavide. olleya kavite.

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

      Delete