Saturday, March 8, 2014

|| ನಿಯತ್ತಾಗಿರಲಿ ನಂಬಿಕೆ ||

ಜಗದಲಿ ಜೀವ ಜನಿಸಲು ಜನನಿಯಿಂದ
ಜೀವನವೆಂಬ ಪಯಣದ ಪ್ರಾರಂಭ
ಮಾತೆಯ ಮಮತೆಯಿಂದ ಮಾತುಗಳು
ಬೆಳೆಸುವ ರೀತಿಯಿಂದ ಸಂಸ್ಕಾರವು
ಬರುತಿರಲು ಮಗುವಿನ ನಂಬಿಕೆಯು ತಾಯಿ ||

ಕುಣಿಯುತ ನಲಿಯುತ ಆಟವು
ವರಗುತ ಕೇಳುವ ಪಾಠವು
ಮೀಟಲು ಹುರುಪಿನ ಸ್ನೇಹವ
ಖುಷಿಯಲಿ ಸೇರಲು ಸಡಗರದಿ
ಎಲ್ಲಾ ಒಪ್ಪುವ ನಂಬಿಕೆಯೊಂದೆ ಗೆಳೆತನ ||

ಕಾಲಿಡಲು ಯವ್ವನದ ತೇರಿನಲಿ
ಬೇರೊಂದು ಸಾಂಗತ್ಯದ ಹುಡುಕಾಟದಲಿ
ಜೀವನಾಡಿ ಬೇಕೆಂಬ ಬಯಕೆ
ಒಲವಿನ ಸಂಗದ ಕನವರಿಕೆ
ಏಳಿಗೆಯ ನಂಬಿಕೆಯು ಸಂಗಾತಿ ||

ಅಗತ್ಯಕೆ ಸಹಕಾರದ ಅಹವಾಲು
ಸಿಗದು ಬೇಕಾದ ಬೆಂಬಲವು
ಒಳಿತನ್ನು ಸಹಿಸದ ಜಲಸಿಗಳು
ನಂಬಿಕೆಯಿಂದ ಬೇರ್ಪಡಿಸುವ ಬಂಧುಗಳು
ಗೆದ್ದೆತ್ತಿನ ಬಾಲ ಜೋತುವ ಬಳಗದವರು ||

ಬೆಳ್ಳಾಗಿ ಕಂಡ ಆಶಾಕಿರಣವು
ಮುಪ್ಪಿಗೆ ಊರುಗೋಲಾಗುವ ಮಕ್ಕಳು
ಲಗಾಮಿಲ್ಲದೆ ಓಡುವ ಕುದುರೆಯಂತೆ ಜೀವನ
ಮೂಗುದಾರದ ಹಿಡಿತವಿದ್ದರೆ ನೆಮ್ಮದಿಯಲಿ ಪಾವನ
ಅಂಧಕಾರ ತೊರೆದು ನಿಯತ್ತಾಗಿರಲಿ ನಂಬಿಕೆಯು ||

4 comments:

  1. ಜೀವನಸೂತ್ರ ಚೆನಾಗಿದೆ ವಿನಾಯಕಣ್ಣಾ.....
    "ವರಗುತ ಕೇಳುವ ಪಾಠವು" ಇಲ್ಲಿಯ ವರಗುತ ಎನ್ನುವ ಪ್ರಾದೇಶಿಕ ಪದ ಬಳಕೆ ಇಷ್ಟವಾಯಿತು..ಜೊತೆಗೆ ಗೆದ್ದೆತ್ತಿನ ಬಾಲ ಜೋಲುವವರೂ ಕೂಡ :)...

    ReplyDelete
    Replies
    1. ಧನ್ಯವಾದಗಳು ಚಿನ್ಮಯ್. ನಮ್ಮ ಊರು, ನಮ್ಮ ಭಾಷೆಯ ಅನಾವರಣ ಮಾಡುವ ಸಣ್ಣ ಪ್ರಯತ್ನವನ್ನು ಗುರ್ತಿಸಿದ್ದಕ್ಕೆ ಖುಷಿ ಆತು. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ.

      Delete
  2. ನಿಜ ನಂಬಿಕೆಯು ನಿಯತ್ತಾಗಿರಬೇಕು.
    ನಮ್ಮ ಏಳಿಗೆಗೆ ನಿಸ್ವಾರ್ಥದಿಂದ ದುಡಿದ ಮಾತಾಪಿತೃಗಳನ್ನು ನಾವು ಸಲಹಲೇಬೇಕು.

    ReplyDelete