Wednesday, February 19, 2014

...ಬಜೆಟ್ ಎಂಬ ಬಲೆಯಿಂದ ಹೊರಬಂದ ಚುಣಾವಣಾ ಪ್ರನಾಳಿಕೆ...

ಮಧ್ಯಂತರ ಬಜೆಟ್ ಎಂಬ ಹೆಸರಿನಲ್ಲಿ ಚುಣಾವಣಾ ಘೋಷಣೆಗೂ ಮುನ್ನವೆ ಹೊರಬಂದ ಕಾಂಗ್ರೇಸಿನ ಚುಣಾವಣಾ ಪ್ರನಾಳಿಕೆಯು ಅಮವಾಸ್ಯೆಯ ಚಂದ್ರನಂತೆ ಕಂಗೊಳಿಸುತ್ತಿದೆ. ಯಾವುದಾದರೊಂದು ವರ್ಗದ ಜನರ ಮೇಲಾದರೂ ಪರಿಣಾಮ ಬೀಳುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಚಿದಂಬರ ರಹಸ್ಯ ಮಾತ್ರ ರಾಹುಲ್ ಗಾಂಧಿಯ ಭರವಸೆಯ ಮಾತುಗಳಿಗೆ ಪ್ರೇರಣೆ ನೀಡಿದಂತಿದೆ ಮತ್ತು ಅವರೆ ಕಾಂಗ್ರೇಸಿನ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಗುಟ್ಟನ್ನು ರಟ್ಟು ಮಾಡಿದಂತೆ ಮಧ್ಯಂತರ ಬಜೆಟ್ ಮಂಡನೆಯಾಗಿದೆ.

ಹೌದಪ್ಪ, ಕೇಳಲು ಹಿತವೆನಿಸುವ ಬಜೆಟ್ ಆದರೆ ಇದು ಮೂಗಿಗೆ ತುಪ್ಪ ಒರೆಸುವ ಪ್ರಕ್ರಿಯೆ ಕಾಂಗ್ರೇಸಿನಿಂದ ನೆಡೆಯುತ್ತಿದೆ ಎನ್ನುವುದು ಅಂಗನವಾಡಿ ಮಕ್ಕಳಿಗು ತಿಳಿದುಬರುವಂತ ಚಿತ್ರಣವಾಗಿದೆ. ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ವಿರೋಧ ಪಕ್ಷಗಳ ಮತಬ್ಯಾಂಕುಗಳಾದ ಮಧ್ಯಮ ವರ್ಗದ ಜನರನ್ನೆ ಗುರಿಯನ್ನಾಗಿಸಿಕೊಂಡು ಮತಗಳನ್ನು ಕಿತ್ತುಕೊಳ್ಳುವ ಹುನ್ನಾರವೆನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಬರಿ ಚುಣಾವಣೆಯೊಂದನ್ನೆ ಗುರಿಯನ್ನಾಗಿಸಿಕೊಂಡಂತಹ ಮಧ್ಯಂತರ ಬಜೆಟ್ ಚುಣಾವಣಾ ಪ್ರನಾಳಿಕೆಯಂತೆ ಘೋಷಿತವಾಗಿದೆ. ಎಕೆಂದರೆ ೧೦ ವರ್ಷ ಆಡಳಿತ ನೆಡೆಸಿದರೂ ಎಂದಿಗು ಮಂಡನೆಯಾಗದ ಅಂಶಗಳು ಚುಣಾವಣೆಗು ಮುನ್ನ ಮಂಡನೆಯಾದ ಬಜೆಟಿನಲ್ಲಿ ಮಂಡನೆಯಾಗಿದೆ ಎಂದರೆ ಇದು ಚುಣಾವಣೆಗೆಲ್ಲಲು ಮಾಡಿದ ಸರಳ ಉಪಾಯವೆನ್ನುವುದು ನಿಖರವಾಗುತ್ತದೆ. ಇದರಿಂದಾಗಿ ಯುವ ಜನಾಂಗದ ಮತಕ್ಕೆ ಕೈ ಹಾಕಿರುವುದು ಗೋಚರವಾಗುತ್ತಿದೆ.

ರಾಹುಲ್ ಗಾಂಧಿಯು ನಡೆಸಿದ ಸಂವಾದಗಳೆಲ್ಲವು ಹೆಚ್ಚಿನದಾಗಿ ವಿದ್ಯಾರ್ಥಿಗಳೊಂದಿಗೆ ಆಗಿರುವುದರಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಪಡೆದಿರ್ತಕ್ಕಂತಹ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಅಂಶ ಘೋಷಣೆಯಾಗಿರುವುದು. ಅದಲ್ಲದೆ ಮಹಿಳೆಯರ ಸಬಲೀಕರಣಕ್ಕೆ ಮತ್ತು ಸುರಕ್ಶತೆಗೆ ಕಾದಿರಿಸಿದ ನಿರ್ಭಯಾ ನಿಧಿಗೆ ಅನುದಾನ ನೀಡಿ ಸ್ತ್ರೀಯರ ಗಮನ ಸೆಳೆಯುವ ಅಂಶವು ಸಹ ಮಂಡಣೆಯಾಗಿದೆ ಬಜೆಟಿನಲ್ಲಿ. ಎಲೆಕ್ಟ್ರೋನಿಕ್ಸ್ ವಸ್ತುಗಳ ದರವನ್ನು ಇಳಿಸಿ ಮಧ್ಯವ ವರ್ಗದ ಜನರ ಕೈಗೆಟಕುವಂತೆ ಮಾಡಿ ಅವರ ಗಮನ ಸೆಳೆಯುವ ಪ್ರಯತ್ನವಾಗಿದೆ. ದೇಸಿಯ ಮೊಬೈಲ್ ಗಳ ಮೇಲಿನ ಸುಂಕವನ್ನು ಕದಿತಗೊಳಿಸಿ ದೇಶಿವಸ್ತುಗಳ ಬಗ್ಗೆ ಧ್ವನಿ ಎತ್ತುವವರ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹಾಗೆ ಕಾರು ಮತ್ತು ವಾಣಿಜ್ಯ ವಾಹನಗಲ ಮೇಲಿನ ಸುಂಕವನ್ನು ಕಡಿತಗೊಳಿಸಿ ಮಧ್ಯವ ವರ್ಗದವರನ್ನು ಬಾಯಿ ಕೆಳೆಯುವಂತೆ ಚಿದಂಬರ ರಹಸ್ಯವಿದೆ.

ಯುವರಾಜನೋದಿಗೆ ಯುವ ಪಡೆ ಬರಬೇಕು ಎಂದು ಅವರನ್ನು ಆಕರ್ಷಿಸುವ ಕೆಲಸಕ್ಕಾಗಿ ಶೈಕ್ಷಣಿಕ ಸಾಲದ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆಯನ್ನು ಜನರ ಮುಂದಿಟ್ಟಿದೆ. ಇದು ಪೂರ್ತಿಯಾಗಿ ರಾಹುಲ್ ಗಾಂಧಿಯವರ ಮಾತು ಸಾಕಾರಗೊಂಡಂತೆ ಜನತೆ ನಂಬಬೇಕು ಎನ್ನುವ ಮತ್ತು ಅವರನ್ನೆ ಜನರು ನಂಬಿ ಗೆಲ್ಲಿಸಲಿ ಎಂಬ ಯೋಚನೆ ಮಧ್ಯಂತರ ಬಜೆಟಿನಲ್ಲಿ ಮಂಡನೆಯಾಗಿದೆ.

ಇಷ್ಟೆಲ್ಲ ಹೇಳುವ ಬಜೆಟ್ ಜನರನ್ನು ಸೆಳೆಯುತ್ತದೆ ಎನ್ನುವ ಭ್ರಮೆಯಲ್ಲಿ ಚಿದುವಿದ್ದಿರಬಹುದು ಯಾಕೆಂದರೆ ಜನಸಾಮಾನ್ಯರ ಬದುಕಿಗೆ ಬೇಕಾಗುವ ತರಕಾರಿ ಮತ್ತು ಆಹಾರ ವಸ್ತುಗಳ ಬೆಲೆಯತ್ತ ಗಮನ ಹರಿಸದೆ ಇದ್ದಿರುವುದು ಹಾಸ್ಯಾಸ್ಪದವೆನಿಸುತ್ತದೆ. ಗ್ಯಾಸ್ ಬೆಲೆಯನ್ನು ತಗ್ಗಿಸಿದರೆ ತಿನ್ನಲು ಬೇಕಾಗುವ ಆಹಾರವಿದ್ದರೆ ಮಾತ್ರ ಗ್ಯಾಸ್ ಪ್ರಯೋಜನ ಎಂಬ ಅರಿಲ್ಲದ ಸಚಿವರುಗಳು ನಮ್ಮಾಳುತ್ತಿರುವವರು. ಆಹಾರ ವಸ್ತುಗಳ ಬೆಲೆ ಗಗನವೇರಿರುವಾಗ ಗ್ಯಾಸ್ ಕೊಂಡೇನು ಮಾಡಬೇಕು ಎಂಬ ಪರಿವೆ ಇಲ್ಲದ ಮುಖಂಡರುವಗಳು ನಮ್ಮ ನಾಯಕರುಗಳು. ಏನೆ ಆಗಲಿ ಚುಣಾವಣೆ ಘೋಷಣೆಗು ಮನ್ನವೆ ಚುಣಾವಣಾ ಪ್ರನಾಳಿಕೆ ಬಿಡುಗಡೆ ಮಾಡುವ ಹೊಸದೊಂದು ಜಯಮಾನಕ್ಕೆ ಕಾಂಗ್ರೇಸ್ ಮುಂದಾಗಿರುವುದು ಮನರಂಜಿಸುವ ಹಾಸ್ಯ ಚಿತ್ರ ನೋಡಿದಂತಾಗಿರುವುದು ಮಾತ್ರ ಸತ್ಯ.

5 comments:

  1. ಇದು ನಿಜವಾಗಿಯು ೧ ಚುಣಾವಣಾ ಪ್ರನಾಳಿಕೆ ಎನ್ನುವುದರಲ್ಲಿ ಸಂದೇಹವಿಲ್ಲ. ನಿಮ್ಮ ವಿಚಾರಗಳು ಪ್ರಸ್ತುತ ರಾಜಕೀಯ ವಿದ್ಯಮಾನಕ್ಕೆ ಹತ್ತಿರವಿದೆ.

    ReplyDelete
  2. Olleya vishya charcheyannolagonda lekhana. pratiyobbaru yochane madabekada vishya. deshada janateya kannige banna hachchuva kelsa maduva rajakaranigalannu janaree echchrisabekagide embudu spashta.

    ReplyDelete
  3. ರಾಜಕೀಯವೇ ಹಾಗೆ .... ಗೆಲ್ಲಲು ಬೇಕಾದ ತಂತ್ರ ರೂಪಿಸುವುದು ... ಈಗ ಕುತಂತ್ರವಾಗುತ್ತಿರುವುದು ವಿಷಾದನೀಯ !!! ಒಳ್ಳೆಯ ವಿಶ್ಲೇಷಣೆ

    ReplyDelete
  4. ಒಳ್ಳೆ ವಿಶ್ಲೇಷಣೆ. ಮೂಗಿಗೆ ತುಪ್ಪ ಒರೆಸುವ ತಂತ್ರವೇ ಸರಿ

    ReplyDelete
  5. ಚೊಲೋ ಬರೆತ್ಯಲ...............

    ReplyDelete