Wednesday, July 17, 2013

|| ಸೂತ್ರ ಹೇಳಿದವರು ||

ಕಡಲುಗೋಲಿನ ಕಡೆತದಲ್ಲಿ
ಮೊಸರಲಿ ಬೆಣ್ಣೆಯ ಆಗಮನ
ಅದನು ಕಡೆಯಲು ನಿನ್ನ ಬಸಿರಲಿ
ಸುಂದರ ರೂಪದ ಜನನ ||

ಭತ್ತ ಮೆರೆಯುಲು ಒನಕೆಯಲ್ಲಿ
ಅನ್ನ ಸಿಗುವುದು ಅಕ್ಕಿಯಿಂದ
ಅದನು ಗೇರವುದು ಗೆರ್ಸಿಯಲ್ಲಿ
ಬೇರ್ಪಡಿಸಲು ಕಲ್ಲು ಕಸವ ||

ಬೀಸುಕಲ್ಲಿನಲಿ ಕಾಳು ಬೀಸುವುದು
ಗೋಮಯದಿಂದ ನೆಲ ಸಾರಿಸುವುದು
ಭಾವಿಯಿಂದ ನೀರ ಸೇದುವುದನು
ಮರೆತಿರುವಂತಿದೆ ನಮ್ಮ ಪೀಳಿಗೆ ||

ಒಲೆಯ ಅಡುಗೆಯ ಮರೆತರೆ ಹೇಗೆ
ಸುಖಕೆ ಅನಿಲದಡುಗೆಯು ಸಾಕೆ
ಸಿಗುವುದೇ ದೇಹ ವ್ಯಾಯಾಮ
ಕೈ ಕಾಲು ಸೊಂಟ ಕಂಠಕೆ ||

ಹಳಬರ ಮಾತಿನ ಅರ್ಥ ತಿಳಿಯದೆ
ಜರಿಯುವುದು ಸರಿಯೆ ಮೂರ್ಖರೆಂದು
ಅವಿವೇಕಿಗಳಲ್ಲ ನಮ್ಮ ಹಿರಿಯರು
ಅಜ್ನಾನಿಗಳಲ್ಲ ಸೂತ್ರ ಹೇಳಿದವರು ||

7 comments:

  1. ತಲೆಮಾರಿನ ಸುಂದರ ರೀತಿ ನೀತಿಗಳನ್ನು ಪದಗಳಲ್ಲಿ ಹರಡಿದ ರೀತಿ ಸುಂದರವಾಗಿದೆ. ಹಿರಿಯರು ಮಾಡಿಟ್ಟ ಸೂತ್ರದ ರಹಸ್ಯ ತಿಳಿದುಕೊಳ್ಳದೆ ಇರುವುದೇ ಈ ವೇಗ ಯುಗದ ಪೀಳಿಗೆಯ.. ಅದನ್ನು ಹೀಗಳೆಯಲು ಪೀಳಿಗೆ ಮುಂದಾಗಿರುವುದು. ಸುಂದರ ಸಾಲುಗಳು

    ReplyDelete
    Replies
    1. ಹಾಗೆ ನೋಡಿದರೆ ನನಗೆ ನಿಮ್ಮ ಮನೆ ವಾತಾವರಣ ಆದರ್ಶಯುತ ಅನಿಸಿತು ಶ್ರೀಮಾನ್ ಸಾರ್. ಮಗಳಿಗೂ ಬ್ಲಾಗ್ ಬರೆಸುವ ಉತ್ಸುಕತೆ ಆಕೆಯಲ್ಲಿ ಮುಂದೆ ಕಲೆ - ಸಂಸ್ಕೃತಿ - ಸಾಹಿತ್ಯ ಬೆಳೆಯಲು ಸಹಕಾರಿ.

      Delete
    2. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  2. Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  3. ತುಂಬಾ ಮಾರಿಮಕವಾದ ಕವನ, ಹಳಬರು time passಗೆ ನಿಯಮಗಳನ್ನು ರೂಪಿಸಿಲ್ಲ, ಎಲ್ಲ ವೈಜ್ಞಾನಿಕವಾಗಿವೆ ಮತ್ತು ಉಪಯುಕ್ತವಾಗಿವೆ. ಇದು ತುಂಬಾ ಒಳ್ಳೆಯ ಕವನ.
    http://badari-poems.blogspot.in

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete