Thursday, July 4, 2013

|| ಮುಂಗಾರು ಮಳೆ ||

ನಡೆದಿದೆ ಅನ್ವೇಷಣೆಯ ಹೋರಾಟ
ಬದುಕಿನ ಬೆಳಕಿಗಾಗಿ ಹುಡುಕಾಟ
ಹೊನಲುಬೆಳಕಿನ ಕಾಂತಿಯಲು ಅರಸಿದೆ
ಮುಂಜಾವಿನ ತಿಳಿ ಬೆಳಕಿನಲು ಕಾಣದೆ ||

ವೃದ್ಧಿಸುತ್ತಿವೆ ಪ್ರತಿ ಕ್ಷಣದ ನಿರೀಕ್ಷೆಗಳು
ಬದುಕಲಿ ಬಯಕೆಯ ಭರವಸೆಗಳು
ಚಂಡಾಟದಂತೆ ತಪ್ಪದಿರಲೆಂಬ ತುಡಿತವು
ಆಸೆ ಕೈಗೂಡಲೆಂಬ ಮನಸಿನ ಮಿಡಿತವು ||

ನೀರಿರದ ಮರುಭೂಮಿಯಲಿ ಮಳೆಯಾದಂತೆ
ಬಯಲು ಭೂಮಿಯಲಿ ಕಾಮನಬಿಲ್ಲು ಮೂಡಿದಂತೆ
ಬರಡು ಭೂಮಿಯಲಿ ಹಸಿರು ಚಿಗುರೊಡೆದಂತೆ
ಕಲ್ಪಿಸಿದ ನೀ ಬರಲು ಮುಂಗಾರು ಮಳೆಯಾದಂತೆ ||

2 comments:

  1. ಯಾಕೋ ಮನಸ್ಸು ಮ್ಲಾನವಾಯಿತು. ಆಕೆಯೇ ಬಾರದಿದ್ದಮೇಲೆ ಬದುಕೂ ಬಂಜರೇ. ನಿಮ್ಮ ಕವನದ ಹೂರಣ ನನ್ನನ್ನು ಗತಕ್ಕೆ ಕೊಂಡೊಯ್ದು ನಿಲ್ಲಿಸಿತು.

    ReplyDelete
  2. ನೀರಿರದ ಮರುಭೂಮಿಯಲಿ ಮಳೆಯಾದಂತೆ
    ಬಯಲು ಭೂಮಿಯಲಿ ಕಾಮನಬಿಲ್ಲು ಮೂಡಿದಂತೆ very nice lines composed...Keep rocking buddy!

    ReplyDelete