Monday, June 24, 2013

|| ನೀರಡಿಕೆ ||

ನಾನಿರುವ ಊರಿನಲಿ ಚಂದ್ರನಿಲ್ಲ
ನೀನಿರುವ ಉರಿನಲಿ ರವಿ ಕಾಣುತಿಲ್ಲ
ಬೆರೆತಾಗಿದೆ ನಾವು ಕವಿ ಕಲ್ಪನೆಯಲಿ
ಒಲವು ಚಿಮ್ಮಿತು ಮುಸ್ಸಂಜೆ ತಂಪಿನಲಿ ||

ತಾರೆ ಮಿನುಗುವುದ ಮರೆತಿಹುದು
ನಿನ ಮೊಗದ ಕಾಂತಿಯಲಿ ಮಂಕಾಗಿಹುದು
ನಾನೋಡದಾಚಂದ್ರ ನಿನ ಹಿಂದೆ ಅಲೆದಿಹನು
ಉರಿ ಕುಂದುವುದೆಂಬ ಭಯದಲಿ ಅಡಗಿ ಬೆಳಗುತಿಹನಾಸೂರ್ಯನು ||

ವಾರಿ ಸುಳಿಯಲಿ ಸಿಲುಕಿದರೂನು
ತೇಲಿ ಬರುವೆನು ನಿನ್ನಯ ಸೆಳೆತಕೆ
ಹೊಳೆಯ ಹನಿಯ ತಂಪಿನಲಿ ಭಾವನೆಗಳು
ಮೂಡಿಸಿವೆ ನಿನ ಅಂದದ ಬಿಂಬಗಳನು ||

ಕರಿಮೋಡ ಮಳೆಯಾಗಿ ಧರೆಗುರುಳಿ
ಬರಡು ಭೂಮಿಯ ಬಾಯಾರಿಕೆ ತಣಿಸಿದಂತೆ
ನನ ಎದೆಯು ಸುಡುತಿದೆ ವಿರಹದ ಬೇಗೆಯಲಿ
ನೀ ಬಂದು ಆರಿಸು ನೀರಡಿಕೆಯ ||

3 comments:

  1. ಸ್ವಾಗತವೇ ಅಮೋಘವಾಗಿರುವಾಗ, ಬಾರದಿರುವಳೇ ನಲ್ಲೇ?
    http://badari-poems.blogspot.in/

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ

      Delete
  2. ಸುಂದರ ಪದಗಳ ಮೆರವಣಿಗೆ

    ReplyDelete