Friday, May 4, 2012

ಅಳಿವಿನಂಚಿನಲ್ಲಿ ಇಂದು ಇಂಧನ ನಾಳೆ ನೀರು

ಕೆಲಸ ಕಡಿಮೆಮಾಡಿ ಸುಖ ಜಾಸ್ತಿ ಮಾಡುವುದಿಂದು ಇಂಧನ. ಪ್ರತಿಯೊಂದು ಕಾರ್ಯದಲ್ಲೂ ಜೀವಿ ಕೆಲಸ ಮಾಡುವುದ ಬಿಟ್ಟು ಯಂತ್ರಗಳ ಮೊರೆಹೋಗುತ್ತಿರುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಮಾನವನು ಭೂಗರ್ಬ ಅಗೆದು ಇಂಧನವನ್ನು ಹೊರತೆಗೆದು ಸಂಸ್ಕರಿಸಿ ವಾಹನವನ್ನು ಓಡಿಸುತ್ತಿದ್ದಾನೆ ನಡೆಯುವುದನ್ನು ಬಿಟ್ಟು. ಎಲ್ಲೆಲ್ಲಿ ಯಂತ್ರಗಳನ್ನು ಬಳಸಲು ಸಾಧ್ಯವೋ ಅಲ್ಲೆಲ್ಲ ಯಂತ್ರದ ದಾಸನಾಗಿದ್ದಾನೆ. ಅಡುಗೆ ಮಾಡುವಲ್ಲಿ, ನೀರುತೋಕುವಲ್ಲಿ, ನೀರುಎತ್ತುವಲ್ಲಿ, ಬೆಳೆಗಳನ್ನು ಸಂಸ್ಕರಿಸುವಲ್ಲಿ, ಮನೋರಂಜನೆಯಲ್ಲಿಹೀಗೆ ಮಾನವನ್ನೆಲ್ಲಾ ಕೆಲಸಗಳಲ್ಲಿ ಇಂದು ಇಂಧನವು ಅವಶ್ಯವಾಗಿದೆ. ಈ ಇಂಧನಗಳು ಮತ್ತೆ ಪುನಃ ಬಳಕೆಗೆ ಬಾರದು. ಸ್ವಲ್ಪ ದೂರದಲ್ಲಿ ಆಗುವಂತಹ ಕೆಲಸಗಳಿಗೂ ಇಂದು ಸ್ವಂತವಾಹನ ಬಳಸಿ ಆಲಸಿಯಾಗುತ್ತಿದ್ದಾನೆ. ನೀರು ತೋಕುವದನ್ನ ಬಿಡುತ್ತಿದ್ದಾನೆ, ನೀರು ಎತ್ತುವುದನ್ನು ಅಡಗಿಸುತ್ತಿದ್ದಾನೆ, ದೇಹಕ್ಕೆ ಆಯಾಸವಾಗದಂತೆ ಅಡುಗೆ ಮಾಡುತ್ತಿದ್ದಾನೆ, ಮನೋರಂಜನೆಗೂ ಸಹ ಇಂಧನದ ಮೊರೆಹೊಗಿದ್ದಾನೆ. ಇದರಿಂದಾಗಿ ಬಗೆ ಬಗೆ ರೋಗಗಳಿಗೆ ಆಶ್ರಯ ನೀಡುತ್ತಿದ್ದಾನೆ. ಅನಾರೋಗ್ಯಗಳು ಜಾಸ್ತಿಯಾಗಲು ಇದೊಂದು ಪ್ರಮುಖ ಕಾರಣವಾಗಿದೆ.  ಇಂದು ಸಿಗುವ ಇಂಧನವನ್ನು ಯಥೇಚ್ಚವಾಗಿ ಬಳಸಿ, ಅವಶ್ಯಕ್ಕಿಂತ ಜಾಸ್ತಿನೆ ಬಳಸಿ ಅಳಿವಿನಂಚಿಗೆ ತಂದಿದ್ದಾನೆ. ಮುಂದಿನ ಪೀಳಿಗೆಯವರು ಪುಸ್ತಕದಲ್ಲಿ ಇತಿಹಾಸ ಓದಿ ತಿಳಿಯುಂತೆ ಮಾಡುತ್ತಿದ್ದಾನೆ.

ಅದೆ ರೀತಿ ವಿದ್ಯುಛ್ಛಕ್ತಿಯನ್ನ ಹೇರಳವಾಗಿ ಹಾಳುಮಾಡುತ್ತಿದ್ದಾನೆವಿಶೇಷವಾಗಿ ವಿದ್ಯುಛ್ಛಕ್ತಿಯನ್ನು ಮನಸೋ ಇಚ್ಚೆ ಉಪಯೋಗಿಸಿ ವ್ಯಯಿಸುತ್ತಿದ್ದಾನೆ. ಯಾಕೆ ಇಂದು ಇದರ ಕೊರತೆ ಉಂಟಾಗಿ ಕೋತ ಎಂಬ ಕರಿನೆರಳ ಅಡಿಯಲ್ಲಿ ಇರುವಂತಾಗಿದೆ ಎನ್ನುವದನ್ನು ಅರ್ಥೈಸಿಕೊಳ್ಳುವಷ್ಟು ಸಮಯಪ್ರಜ್ನೆಯೂ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ವಿದ್ಯುತದೀಪವನ್ನು ಉರಿಸುತ, ಬೇಡವೆಂದರೂ ಅನಾವಶ್ಯಕವಾಗಿ ಕೋಣೆಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ದೀಪ ಉರಿಯುತ್ತಾ ಇರುತ್ತದೆ. ಅದನ್ನು ನೋಡಿಯೂ ನೋಡದಂತೆ ನಟಿಸುತ ಉರಿಯುವ ದೀಪವನ್ನು ಆರಿಸದೆ ತಿರಸ್ಕಾರದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಪ್ರತಿ ತಿಂಗಳು ಬರುವ ಬಿಲ್ ಜಾಸ್ತಿಯಾಗುತ್ತಾ ಇರುತ್ತದೆ. ಇದರಿಂದ ಕುಪಿತರಾಗಿ ಬೇರೆಯವರ ಮೇಲೆ ರೇಗುತ್ತಾರೆ.

ಪ್ರಜ್ನಾವಂತರಾದ ನಾವು ಅನಾವಶ್ಯಕವಾಗಿ ವಿದ್ಯುತದೀಪವನ್ನು ಉರಿಸುವುದ ಬಿಟ್ಟು ಅದರ ಬಗ್ಗೆ ಯೋಚಿಸಿ ಮಿತವಾಗಿ ಬಳಸಿ ನಿರುಪಯುಕ್ತವೆಂದಲ್ಲಿ ದೀಪವನ್ನು ಆರಿಸಿ ಉಳಿಸಿದರೆ ತಿಂಗಳ ಬಿಲ್ ಕಡಿಮೆ ಬರುತ್ತದೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಜಾಸ್ತಿ ಸಮಯ ಉಪಯೋಗಕ್ಕೆ ವಿದ್ಯುತ ಸಿಗುವಂತಾಗುತ್ತದೆ. ಎಷ್ಟೆ ಬಿಲ್ ಬಂದರೂ ತುಂಬುವಷ್ಟು ಹಣವಿದ್ದರೂ ಉಳಿದ ಪ್ರದೇಶದ ಜನರ ಬಗ್ಗೂ ಯೋಚಿಸಿ ಹಿತ ಮಿತವಾಗಿ ಬಳಸಿದರೆ ರಾಜ್ಯಕ್ಕೂ, ದೇಶಕ್ಕೂ ಒಳ್ಳೆಯದು. ನಮಗೆ ಸಿಕ್ಕಿರುವ ಶಕ್ತಿಯನ್ನು ಪೋಲುಮಾಡದೆ, ಬೇರೆಯವರಿಗೆ ತೊಂದರೆಯಾಗದಂತೆ ಸದುಪಯೋಗ ಪಡಿಸಿಕೊಳ್ಳಬೇಕು.

ಇಂಧನದ ಬಗ್ಗೆ ಮಾತಡಿ ನೀರನ್ನು ಬಿಟ್ಟರೆ ಬಾಯಾರಿಕೆಯಾಗುತ್ತದೆ. ನೀರೂ ಸಹ ಪಂಚಭೂತಗಳಲ್ಲಿ ಒಂದು. ಇದನ್ನು ನಿಯಂತ್ರಣವಿಲ್ಲದೆ ಉಪಯೋಗಿಸಿ ಇಂದಿನ ಜಾಗತಿಕ ತಾಪಮಾನದ (Global Warming) ಹೆಚ್ಚಳಕ್ಕೆ ಕಾರಣಿ ಭೂತರಾಗಿದ್ದೇವೆ. ಯಥೇಚ್ಚವಾಗಿ ಬಳಸುವ ಇಂಧನದಿಂದ ಶಬ್ಧಮಾಲಿನ್ಯ, ವಾಯುಮಾಲಿನ್ಯ, ಮನಸೋಇಚ್ಛೆ ಕಡಿಯುವ ಹಸಿರುಮರಗಳನ್ನು ನಿಲ್ಲಿಸಿ ನೀರಿನ ಸದ್ಬಳಕೆಯಾಗುವಂತೆ ಎಚ್ಚರವಹಿಸ ಬೇಕು. ಭೂಮಿಯನು ಬಗೆದು ಅಂತರ್ಜಲವನು ಹೊರತೆಗೆದು ಭೂಮಿ ಬರಡಾಗುವಂತಾಗಿದೆ. ನೀರನ್ನು ಖರ್ಚುಮಾಡುವಾಗ ಹಿಡಿತವಿಲ್ಲದೆ ವ್ಯಯಿಸುವುದರಿಂದ ಪ್ರಾಕೃತಿಕ ವಿಕೋಪಗಳಿಗೆ ಒಳಗಾಗುತ್ತಿದ್ದೇವೆ.

ವಿದ್ಯುಛ್ಛಕ್ತಿಯಿಂದ ನೀರನ್ನು ಮೇಲೆತ್ತಿ ನಳಗಳ ಮೂಲಕ ನೀರನ್ನು ಬಳಸುವುದರಿಂದ ಜಾಸ್ತಿನೀರನ್ನು ಪೋಲುಮಾಡಿದಂತಾಗುತ್ತದೆ. ನೀರನ್ನು ಭಾವಿಯಿಂದ ಎತ್ತಿ ಬಳಸಿದ್ದಕ್ಕಿಂತಲೂ. ನೀರನ್ನು ನೋಡಿ ಬಳಸಬೇಕು ಯಥೇಛ್ಛವಾಗಿ ಬಳಸುವುದರಂದ ಭೂಮಿಯು ಬರಿದಾಗಿ ಬರಡಾಗುತ್ತಿದ್ದೆ. ಸುಖ ಜಾಸ್ತಿಯಾದಂತೆ ಮಾಲಿನ್ಯಗಳು ಹೆಚ್ಚಾಗಿ ರೋಗಗಳು ಆಕ್ರಮಿಸುವಂತಾಗಿದೆ.

ಇಂಧನವನ್ನಾಗಲಿ, ನೀರನ್ನಾಗಲಿ ಹಿತ ಮಿತವಾಗಿ ಬಳಸಿ ಮುಂದಿನ ಪೀಳಿಗೆಯವರು ಅರಿಯಲಿಕ್ಕೆ, ಬಳಸಲಿಕ್ಕೆ ಅನುವಾಗುವಂತೆ ಜಾಗರುಕತೆಯಿಂದ ಉಪಯೋಗಿಸಿ.

2 comments:

  1. This comment has been removed by the author.

    ReplyDelete
  2. ಎಚ್ಚರಿಕೆ ಘಂಟೆ ಬಾರಿಸುತ್ತಲೇ ಮನಮುಟ್ಟುವ ರೀತಿಯಲ್ಲಿ ಬರೆದ ಬರಹ. ಸೊಗಸಾಗಿದೆ

    ReplyDelete