ನೋವು ನಲಿವಿನ ಸಂಬಂಧ
ಹೂವು ಮುಳ್ಳುಗಳ ಅನುಬಂಧ
ನೋವಾಗುವುದು ಹೂವನ್ನು ತೆಗೆಯಲು
ನಲಿವಿನಲಿ ಸಂಭ್ರಮಿಸುವರು ಮುಡಿದು ||
ಪ್ರೇಮ ನಿವೇದಿಸಿ ಕೊಡುವರು ಮುಳ್ಳಿನ ಹೂವನ್ನ
ಬದುಕಲಿ ಎದುರಿಸುವ ನೋವು ನಲಿವಿನ ಮುನ್ನ
ಎಲ್ಲ ಶುಭ ಸಮಾರಂಭದಲ್ಲೂ ಬಳಸುವರು ನಿನ್ನ
ಆಮಂತ್ರಿತರಿಗೆ ನೀಡುತ್ತ ಸ್ವಾಗತಿಸುವುದು ಚೆನ್ನ ||
ನಿನ್ನಯ ರಕ್ಷ್ಣೆಗಾಗಿ ಇರುವುದು ಹೊದಿಕೆ
ಕೀಳಲು ಹೆದರುವರು ಮುಳ್ಳಿನ ಭಯಕೆ
ಪ್ರೀತಿಯ ಸಂಕೇತ ಕೆಂಪು ಗುಲಾಬಿ
ಪ್ರೇಮಿಯಾಗದಿದ್ದರೆ ಹಿಡಿವರು ಶರಾಬಿ ||
ಹೂವಿನ ಜೊತೆಗಿದೆ ಮುಳ್ಳಿನ ಸಾಲು
ಜೀವನದಲ್ಲುಂಟು ಕಷ್ಠ ಸುಖಗಳ ಪಾಲು
ನಿನ್ನಂದವ ನೋಡಿ ಎಳುವುದು ಮೈಯಲಿ ಕಾವು
ಜೀವನ ಸತ್ಯವ ತಿಳಿಸುವುದು ಮುಳ್ಳಿನ ಹೂವು ||
ಹೂವು ಮುಳ್ಳುಗಳ ಅನುಬಂಧ
ನೋವಾಗುವುದು ಹೂವನ್ನು ತೆಗೆಯಲು
ನಲಿವಿನಲಿ ಸಂಭ್ರಮಿಸುವರು ಮುಡಿದು ||
ಪ್ರೇಮ ನಿವೇದಿಸಿ ಕೊಡುವರು ಮುಳ್ಳಿನ ಹೂವನ್ನ
ಬದುಕಲಿ ಎದುರಿಸುವ ನೋವು ನಲಿವಿನ ಮುನ್ನ
ಎಲ್ಲ ಶುಭ ಸಮಾರಂಭದಲ್ಲೂ ಬಳಸುವರು ನಿನ್ನ
ಆಮಂತ್ರಿತರಿಗೆ ನೀಡುತ್ತ ಸ್ವಾಗತಿಸುವುದು ಚೆನ್ನ ||
ನಿನ್ನಯ ರಕ್ಷ್ಣೆಗಾಗಿ ಇರುವುದು ಹೊದಿಕೆ
ಕೀಳಲು ಹೆದರುವರು ಮುಳ್ಳಿನ ಭಯಕೆ
ಪ್ರೀತಿಯ ಸಂಕೇತ ಕೆಂಪು ಗುಲಾಬಿ
ಪ್ರೇಮಿಯಾಗದಿದ್ದರೆ ಹಿಡಿವರು ಶರಾಬಿ ||
ಹೂವಿನ ಜೊತೆಗಿದೆ ಮುಳ್ಳಿನ ಸಾಲು
ಜೀವನದಲ್ಲುಂಟು ಕಷ್ಠ ಸುಖಗಳ ಪಾಲು
ನಿನ್ನಂದವ ನೋಡಿ ಎಳುವುದು ಮೈಯಲಿ ಕಾವು
ಜೀವನ ಸತ್ಯವ ತಿಳಿಸುವುದು ಮುಳ್ಳಿನ ಹೂವು ||
ತಮ್ಮಾ, ತುಂಬ ಸುಂದರವಾದ ಪ್ರತಿಮೆಗಳನ್ನು ಉಪಯೋಗಿಸಿದ್ದು ಖುಶಿ ತಂತು. ಪದಗಳೆಲ್ಲವೂ ಮನದ ತುಡಿತಗಳನ್ನು ವೈರಾಗ್ಯದ ಕಡೆಗೆ,ನಿರಾಸಕ್ತಿಯ ಕಡೆಗೆ ವಾಲಿಸಿದ್ದು ಕಂಡು ಬಂತು. ನನ್ನ ಸಲಹೆ ಏನೆಂದರೆ, ಇಲ್ಲಿ ನಾನೋದಿದ ಕೆಲವಾರು ಕವಿತೆಗಳು ಆ ರೀತಿಯ ನಿರಾಶಾವಾದದ ಸೆಳೆತಕ್ಕೆ ಕೊಚ್ಚಿಹೋದ ಅನುಭವ ಆಗುತ್ತಿದ್ದು ಅಷ್ಟು ಬ್ಯಾಡದಿತ್ತೇನೋ, ಕಾವ್ಯದ ಅಂತಿಮ ರಸಾಸ್ವಾದನೆ "ಶಾಂತ" ಆಗಿದ್ದರೆ ಚೆನ್ನು.
ReplyDeleteDhanyavaada Bhatre....Nimma Salahe sangati galige naanu yaavattu svagata koruttene. Mundina dinagallu idanna eduru noduttene.
Deleteಚೆಂದ ಇದ್ದು .. ರಾಮ್ ಭಟ್ರು ಮಾತು ಒಪ್ಪ ಹಂಗೆ ಇದ್ದಿದ್ದೆ ಅಂತ ಅನುಸ್ತು ..
ReplyDelete