Saturday, April 28, 2012

ವರ(ಧು)ದಕ್ಷಿಣೆ

ಮೊದಲಿನಿಂದಲೂ ನಡೆದುಬಂದ ಸಾಮಾಜಿಕ ಪಿಡುಗೇ ಈ ವರದಕ್ಷಿಣೆ. ಈ ವರದಕ್ಷಿಣೆಯಿಂದ ಸ್ತ್ರೀ ಶೋಷಣೆಯು ನಡೆಯಿತು ಮತ್ತು ಕೆಲವು ಕಡೆಗಳಲ್ಲಿ ನಡೆಯುತ್ತನೂ ಇದೆ . ನಾಗರಿಕ ಸಮಾಜವು ಖಂಡಿತ ತಲೆತಗ್ಗಿಸುಂತ ಒಂದು ಪಿಡುಗೇ ಈ ವರದಕ್ಷಿಣೆ. ಇದಕ್ಕಾಗಿ ನಮ್ಮ ಹಿರಿಯರು ಹೋರಾಟ ನಡೆಸಿ ಎಚ್ಚರಿಕೆಯನ್ನು ಈ ಸಮಾಜಕ್ಕೆ ನೀಡಿದ್ದು ಸ್ವಾಗತಾರ್ಹ. ಇದರಿಂದ ಕೆಲವರು ಜಾಗೃತರಾಗಿ ಬದಲಾದರು. ಬೇರೆ ಬೇರೆ ಜಾತಿಗಳಲ್ಲಿ ಇದು ಈಗಲೂ ಚಾಲ್ತಿಯಲ್ಲಿದೆ. ಹಾಗಾಗಿ ನಮ್ಮ ಮಾನ್ಯ ಸರ್ಕಾರವು ಒಂದು ಕಾನೂನನ್ನೂ ಜಾರಿಗೊಳಿಸಿದೆ.

ಕಾಲಚಕ್ರ ತಿರುಗಿದಂತೆ ಪರಿಸ್ಥಿತಿಯು ಬದಲಾಗುತ್ತದೆ ಎಂಬಂತೆ ವಿಷೇಶವಾಗಿ ನಮ್ಮ ಹವ್ಯಕಬಾಂಧವರಲ್ಲಿ ವರದಕ್ಷಿಣೆ ಮಾಯವಾಗಿ ವಧುದಕ್ಷಿಣೆ ಪ್ರಾರಂಭವಾಗಿದೆ. ಹುಡುಗ ಮನೆಯಲ್ಲಿಯೇ ಅಂದರೆ ಹಳ್ಳಿಯಲ್ಲಿಯೇ ಕೃಷಿಕನಾಗಿ ಕೆಲಸಮಾಡುತ್ತಿದ್ದರೆ ಅದನ್ನ ದೊಡ್ಡತಪ್ಪು ಎನ್ನುವ ಹುಡುಗಿಯರು ಮದುವೆಯಾಗಲು ನಿರಾಕರಿಸುವರು. ಆವರಿಗೆಲ್ಲ ಪೇಟೆಯಲ್ಲಿ ದೋಳನ್ನು ತಿನ್ನುತ್ತ, ಯಾಂತ್ರಿಕ ಜೀವನವನ್ನು ನಡೆಸುತ್ತ, ಪುರುಸೊತ್ತು ಇಲ್ಲದ ವ್ಯಕ್ತಿಯೇ ತುಂಬ ಚೆನ್ನಾಗಿ ಕಾಣುತ್ತಾನೆ. ಹಳ್ಳಿಯಲ್ಲಿ ವೈದಿಕನಾಗಿ, ಕೃಷಿಕನಾಗಿ, ಸ್ವಂತಕೆಲಸಮಾಡುವ ವ್ಯಕ್ತಿಯನ್ನು ಮದುವೆಯಾಗಬೇಕೆಂದರೆ ಈ ಹುಡುಗಿಯರು ಮತ್ತು ಅವರ ಪಾಲಕರು ಹೆಚ್ಚಿನ ರೀತಿಯ ಬೇಡಿಕೆಗಳನ್ನ ಮುಂದಿಡುತ್ತಾರೆ. ಹುಡುಗನು ತನ್ನ ಪಾಲಕರನ್ನು ಬಿಟ್ಟು ಬೇರೆ ಮನೆಯನ್ನು ಮಾಡಬೇಕು, ಅವಳಿಗೆ ಏನು ಕೆಲಸವಾಗಂತೆ ನೋಡಿಕೊಳ್ಳ ಬೇಕು. ಅದಲ್ಲದೆ ಹುಡುಗನಿಗೆ ತಂದೆ ತಾಯಿ ಇರಬಾರದು, ಮನೆಯಲ್ಲಿ ದನದಕೊಟ್ಟಿಗೆ ಇರಬಾರದು, ಹೊರಗಿನ ಕೆಲಸ ಮಾಡಲು ಆಳುಗಳು ಇರಬೇಕು ಎನ್ನುವಂತಹ ಕಟ್ಟುಪಾಡುಗಲನ್ನ ಹಾಕುತ್ತಿರುವುದು ಕಂಡುಬರುತ್ತದೆ.ಇದು ಪ್ರಜ್ನಾವಂತ ಸಮಾಜದಲ್ಲಿ ಆಗುವಂತಹ ಬದಲಾವಣೆಯೇ? ಎನ್ನುವುದು ಅರ್ಥವಾಗದಂತಾಗಿದೆ.

೪ ಅಕ್ಷರಗಳನ್ನ ಓದಿದ ಮಾತ್ರಕೆ ಯಾರೇನು ಶ್ರೇಷ್ಠರಲ್ಲ. ಇಂತಹ ಹುಚ್ಚುವರ್ತನೆಯಿಂದ ಎಲ್ಲರೋಗಗಳ ಆಗರವಾಗುತ್ತಿರುವುದು ದೇಹಕ್ಕೆ ವ್ಯಾಯಾಮವಿಲ್ಲದೆ. ಅತಿಯಾದ ಸುಖ ಜೀವಕ್ಕೆ ಮಾರಕವಾಗುತ್ತದೆನ್ನುವ ಸತ್ಯವ ಮರೆತು ಮೆರೆಯುತ್ತಿದ್ದಾರೆ. ಹೇಗೆ ಅತಿಯಾದರೆ ಅಮೃತವೂ ವಿಷವೆಂಬ ಗಾದೆಯಂತೆ. ಮನೆಯಲ್ಲಿಯೆ ಇರುವ ವ್ಯಕ್ತಿಯು ಮದುವೆಯಾಗಬೇಕೆಂದರೆ ಹುಡುಗಿಯ ಅಪ್ಪನ ಸಾಲಗಳನ್ನ ತೀರಿಸಿ, ಇನ್ನೂ ಹಚ್ಚಿನ ಹಣವನ್ನು ನೀಡಿ, ಮದುವೆಯ ಖರ್ಚುಗಳನ್ನೆಲ್ಲ ಭರಿಸಿ ಮದುವೆಯಾಗುವ ಪರಿಸ್ಥಿತಿ ನಮ್ಮ ಹವ್ಯಕ ಸಮಾಜದಲ್ಲಿ ವಧುದಕ್ಷಿಣೆಯಾಗಿ ಬದಲಾಗಿದೆ. ಇಂತಹ ಪರಿಸ್ಥಿತಿಯನ್ನ ನೋಡಿದ್ದರೆ ನಮ್ಮ ಹಿರಿಯರು ವರದಕ್ಷಿಣೆಯ ವಿರುದ್ಧ ದನಿಯೆತ್ತುವುದನ್ನ ಬಿಟ್ಟು ಸುಮ್ಮನಾಗುತ್ತಿದ್ದರೋ ಎನೋ?

  ಕಾನೂನು ರೀತಿಯಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ತಪ್ಪು ಎಂದಾದರೆ ವಧುದಕ್ಷಿಣೆ ಕೊಡುವುದು, ಸ್ವೀಕರಿಸುವುದು, ಬೇಡಿಕೆ ಮುಂದಿಡುವುದು ಸರಿಯೇ? ಇದಕ್ಕೆ ನಮ್ಮ ಪ್ರಜ್ನವಂತ ಸಮಾಜ ಮತ್ತು ಘನ ಸರ್ಕಾರ ಉತ್ತರಿಸಬೇಕು. ಹಳ್ಳಿಯಲ್ಲಿ ಸಿಗುವ ಸ್ವಛ್ಛವಾದ ವಾತಾವರಣ ಮತ್ತು ನೈಸರ್ಗಿಕ ಉಸಿರನ್ನ ಬಿಟ್ಟು ಪೇಟೆಯಲ್ಲಿರುವ ದೂಳು ಮತ್ತು ಮಾಲಿನ್ಯಗಳೇ ಬೇಕೆ?

  ನಮ್ಮ ಹಿಂದಿನವರು ವರದಕ್ಷಿಣೆಯಿಂದ ಶೋಷಣೆ ಮಾಡಿದ್ದರೆ ಇಗಿನವರೇಕೆ ಶಿಕ್ಷೆಯನ್ನ ಅನುಭವಿಸ ಬೇಕು..? ಇದನ್ನು ನಮ್ಮ ಪ್ರಜ್ನಾವಂತ ಸಮಾಜ ಖಂಡಿಸಿ ವರ(ಧು)ದಕ್ಷಿಣೆಗಳನ್ನು ನಿರ್ಮೂಲನೆಮಾಡಿ ಸ್ವಛ್ಛಂದ ವಾತಾವರಣವನ್ನು ಪರಿಸರದಲ್ಲಿ ಹುಟ್ಟುಹಾಕಲು ನಾಂದಿಹಾಡಲಿ. ವ್ಯಕ್ತಿ ಗೌರವ ನೀಡುತ್ತ ಎಲ್ಲರನ್ನು ಗೌರವಿಸೊಣ.

No comments:

Post a Comment