ಹೃದಯದ ನುಡಿಯೊಂದನು ನೀ ಹೇಳು
ನಿನ್ನ ಬದುಕಿನ ದೋಣಿಗೆ ನಾವಿಕ ನಾನೆಂದು
ಮನಸಾರೆ ಮನಸಿಂದ ನೀ ಕೇಳು
ನನ್ನೆಲ್ಲಾ ಕೀರ್ತಿಗೂ ಮೊದಲ ಹೆಸರು ನಿನದೆಂದು
ಸಂಕಟಬರಲಿ ಸಂತೋಷದಲಿ ಇರುವಾಗ
ಎದುರಿಸುವೆ ಎದೆಗಾರಿಕೆಯಿಂದ ಜೊತೆಯಲಿ ನೀನಿರುವಾಗ ||
ದುಡಿದು ಬರುವೆನು ದಣಿವು ತರುವೆನು
ಸಂತೈಸು ನನ್ನನು ಹಿಡಿಸುವ ಹಿತನುಡಿಯನಾಡುತ್ತ
ಬೇಸರದಿ ನಾ ಮುದುಡಿ ಕುಂತಾಗ
ಆರೈಸು ನನ್ನನು ತಾಯಿ ಮಗುವನ್ನು ಓಲೈಸುವಂತೆ
ಅತಿಯಾಗಿ ಬೆವರಿದೆ ತಂಗಾಳಿಯಲ್ಲೂ
ನೀನಿಲ್ಲದ ಜೀವನವನ್ನು ಊಹಿಸಲು ಆಗದೆ ||
ಬೇಸರವು ಬೆಳದಿಂಗಳಲ್ಲೂ
ನೀನು ಕಣ್ಣಲ್ಲಿ ಕಂಬನಿಯನು ಹರಿಸಿದಾಗ
ಭರವಸೆಯಲಿ ನುಡಿಯುವೆನು
ರತ್ನಗಂಬಳಿಯ ಮೇಲೆ ನಡೆಸುವೆನು ಮಹಾರಾಣಿಯಂತೆ
ನಿರಾಳನಾದೆ ನಾನು ನಿನ್ನಿಂದ
ನನ್ನವರೆಲ್ಲ ನಿನ್ನವರೆನ್ನುವುದನ್ನು ಕೇಳಿದಾಗ ||
ಅಂದದ ಅರಸಿಯ ನೋಡಿದ ಕ್ಷಣದಿಂದ
ನಿದ್ರೆಯನು ಮರೆತಿಹೆನು ಕಲ್ಪನೆಯಲಿ ಕನಸನ್ನು ಕಾಣುತ್ತ
ಸಂಗಾತಿ ನಿನ್ನನು ವರಿಸಲು ತವಕಿಸಿ
ಬರುವೆನು ಅತೀಶೀಘ್ರದಲ್ಲಿ ನನ್ನೆಡೆಗೆ ಹೊತ್ತೊಯ್ಯಲು
ನನ್ನ ಹುಡುಗಿ ನನ್ನವಳಾಗಿರಲು
ತೋರುವುದು ಜಗದಲ್ಲಿ ಬೇರೆಲ್ಲವೂ ಶೂನ್ಯವಾಗಿ ||
ನಿನ್ನ ಬದುಕಿನ ದೋಣಿಗೆ ನಾವಿಕ ನಾನೆಂದು
ಮನಸಾರೆ ಮನಸಿಂದ ನೀ ಕೇಳು
ನನ್ನೆಲ್ಲಾ ಕೀರ್ತಿಗೂ ಮೊದಲ ಹೆಸರು ನಿನದೆಂದು
ಸಂಕಟಬರಲಿ ಸಂತೋಷದಲಿ ಇರುವಾಗ
ಎದುರಿಸುವೆ ಎದೆಗಾರಿಕೆಯಿಂದ ಜೊತೆಯಲಿ ನೀನಿರುವಾಗ ||
ದುಡಿದು ಬರುವೆನು ದಣಿವು ತರುವೆನು
ಸಂತೈಸು ನನ್ನನು ಹಿಡಿಸುವ ಹಿತನುಡಿಯನಾಡುತ್ತ
ಬೇಸರದಿ ನಾ ಮುದುಡಿ ಕುಂತಾಗ
ಆರೈಸು ನನ್ನನು ತಾಯಿ ಮಗುವನ್ನು ಓಲೈಸುವಂತೆ
ಅತಿಯಾಗಿ ಬೆವರಿದೆ ತಂಗಾಳಿಯಲ್ಲೂ
ನೀನಿಲ್ಲದ ಜೀವನವನ್ನು ಊಹಿಸಲು ಆಗದೆ ||
ಬೇಸರವು ಬೆಳದಿಂಗಳಲ್ಲೂ
ನೀನು ಕಣ್ಣಲ್ಲಿ ಕಂಬನಿಯನು ಹರಿಸಿದಾಗ
ಭರವಸೆಯಲಿ ನುಡಿಯುವೆನು
ರತ್ನಗಂಬಳಿಯ ಮೇಲೆ ನಡೆಸುವೆನು ಮಹಾರಾಣಿಯಂತೆ
ನಿರಾಳನಾದೆ ನಾನು ನಿನ್ನಿಂದ
ನನ್ನವರೆಲ್ಲ ನಿನ್ನವರೆನ್ನುವುದನ್ನು ಕೇಳಿದಾಗ ||
ಅಂದದ ಅರಸಿಯ ನೋಡಿದ ಕ್ಷಣದಿಂದ
ನಿದ್ರೆಯನು ಮರೆತಿಹೆನು ಕಲ್ಪನೆಯಲಿ ಕನಸನ್ನು ಕಾಣುತ್ತ
ಸಂಗಾತಿ ನಿನ್ನನು ವರಿಸಲು ತವಕಿಸಿ
ಬರುವೆನು ಅತೀಶೀಘ್ರದಲ್ಲಿ ನನ್ನೆಡೆಗೆ ಹೊತ್ತೊಯ್ಯಲು
ನನ್ನ ಹುಡುಗಿ ನನ್ನವಳಾಗಿರಲು
ತೋರುವುದು ಜಗದಲ್ಲಿ ಬೇರೆಲ್ಲವೂ ಶೂನ್ಯವಾಗಿ ||
nice lines...keep writing...
ReplyDelete