ತಿರುಗಿ ನೋಡು ಗೆಳತಿ
ನಿನ್ನ ಒಲವನು ಬಯಸುತ ಹೃದಯ ಮಿಡಿದಿದೆ
ಕುಂಟುಬಿಲ್ಲೆ ಅಡುತ
ತುಂಟ ಕೀಟ್ಲೆ ಮಾಡುವ ಬಯಕೆ ಅತಿಯಾಗಿದೆ
ಬಾಲ್ಯದ ದಿನಗಳು ಕಾಡುತ
ನಿನ್ನ ಸಂಗಡ ಓಡಾಡಿ ಕಳೆದ ದಿನಗಳು ನೆನಪಾಗಿದೆ ||
ನಾನು ನೀನು ಕದ್ದು ಕಿತ್ತ
ಜಂಬೆಹಣ್ಣ ನೋಡಿದೆ
ಮುಂಗಡವಾಗಿ ಹಂಚಿಕೊಂಡು
ಸವೆದ ರುಚಿಯು ನಾಲಿಗೆಯಲ್ಲೇ ಉಳಿದಿದೆ
ಸುರಿವ ಮಳೆಯಿಂದ
ಹರಿವ ಹೊಳೆಯಲಿ ಗಾಲಿಯಾಕಾರ ದೊಡ್ಡದಾಗಿದೆ ||
ನಾವು ಕುಣಿದು ಕುಪ್ಪಳಿಸಿದ
ಮೈದಾನದಲಿ ಆಟವಿಂದು ಜೋರಾಗಿದೆ
ನಿನ್ನ ನಾಗಜಡೆಯನ್ನು
ಎಳೆದು ರೇಗಿಸುವ ಆಸೆಯಾಗಿದೆ
ಕೋಷದಲಿ ಬಚ್ಚಿಟ್ಟ
ನವಿಲುಗರಿಗೆ ಮುದ್ದು ಮರಿಯಾಗಿದೆ
ಹುಸಿ ಮನಿಸು ಬಂದಾಗ
ನಿನ್ನ ಕನಸು ಕಾಣುವ ವಯಸಲಿ
ಮನಸಿನ ಮಿಡಿತಗಳು ಮಿತಿ ಮೀರಿವೆ ||
No comments:
Post a Comment