ಪಾಡುವೆ ಗಣಪನ ಲೀಲಾವಳಿ
ಕಟ್ಟುವೆ ಎದುರಲಿ ಫಲಾವಳಿ
ಪೊಗಳುವೆ ನಿನ್ನಯ ಕೀರುತಿಯ
ಮನದಲಿ ಕೂರಿಸಿ ಮೂರುತಿಯ
ಆದಿ ಪೂಜಿತ ಗಣಪತಿಗೆ
ಮೆರೆಯುವ ಹಬ್ಬ ಚತುರ್ಥಿಗೆ
ಕಡುಬು ಕಜ್ಜಾಯ ಕೈಯೊಳಗೆ
ಪಂಚಕಜ್ಜಾಯ ಭೂಪತಿಗೆ
ಗಣೇಶನಾದ ನಾಗೋದರ
ವಿದ್ಯಾ ದಾಯಕ ಲಂಬೋದರ
ವಿಘ್ನ ವಿನಾಶಕ ವಿನಾಯಕ
ಕಾರ್ಯ ಫಲಿಸುವ ಪ್ರದಾಯಕ
ಸಿದ್ಧಿ ಬುದ್ಧಿಯ ಪ್ರಿಯತಮಗೆ
ಮೋದಕ ನೀಡುವ ನೈವೇದ್ಯಕೆ
ಸ್ತುತಿಗಳ ಭಜನೆಯು ಪ್ರಥಮನಿಗೆ
ಅಭಯವ ಕರುಣಿಸು ಜನಗಳಿಗೆ
🙏😀❤️ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ❤️😀🙏
ನಿರ್ವಿಘ್ನವಾದ ವಿಶ್ವವು
ನೆಮ್ಮದಿಯ ನಿರುಪದ್ರವಿಗಳ ನೆಲೆಯಾಗುವಂತೆ ಅನುಗ್ರಹಿಸಲಿ. 🙏