ಮಳೆಬರುವ ಸೂಚನೆಯನು ನೀಡುತಲಿ
ದೀಪದ ಹುಳುಗಳು ಗುಂಪಿನಲಿ ಹಾರುತಿವೆ
ನಿನ್ನ ಹೃದಯದ ಮಿಡಿತಗಳನು ಕೇಳುತಲಿ
ಕಮಲದಂತ ಕಣ್ಣುಗಳು ನಿನ್ನೆಡೆಗೆ ಬರುವ
ಮಾರ್ಗದಲಿ ದಾರಿತಪ್ಪುತಿವೆ ||
ನಿನ್ನ ಮುಖದ ಕಾಂತಿಯಿಂದ
ಮರೆಯಲಿ ಮರೆಯಾದ ಪೂರ್ಣಶಶಿಯು
ಸಂಪಿಗೆ ರೂಪದ ನಿನ್ನ ನಾಸಿಕ ನೋಡಿ
ಬಾಡಿ ಉದುರುದವು ಸಂಪಿಗೆ ಹೂಗಳು
ಮಳೆಯಲಿ ನೆನೆದರು ತಂಪಾಗದು
ಬಿಸಿಲಲಿ ನಿಂತರೂ ಒಣಗೆನು
ಸಂಗಾತಿ ನಿನ್ನ ಸಂಗಡ ನಾನಿರುವಾಗ ||
ಬೆಲ್ಲದ ಪಾಕವ ಸವಿದಂತೆ
ನೀ ನನ್ನ ಜೊತೆಯರಲು
ಭೋರ್ಗರೆವ ಕಡಲು
ಹರಿವ ನದಿಗಳಿಗೆ ನೆಲೆಯಾದಂತೆ
ನನ್ನ ಬದುಕು ಹರಿದಿದೆ ನಿನ್ನ ತಳದ ಕಡೆಗೆ
ನಿನ್ನಯ ಜಪದಲ್ಲಿ ಮುಳುಗಿದರೂ
ದರ್ಶನ ನೀಡದೆ ಸತಾಯಿಸುವೆಯಾ
ಕೋಪದಲಿ ದೇವನು ಉಗುಳಿದರೂ
ನಿನ್ನ ಧ್ಯಾನದಲ್ಲೆ ಮೈಮರೆವೆನು ಪ್ರಿಯತಮ ||
ದೀಪದ ಹುಳುಗಳು ಗುಂಪಿನಲಿ ಹಾರುತಿವೆ
ನಿನ್ನ ಹೃದಯದ ಮಿಡಿತಗಳನು ಕೇಳುತಲಿ
ಕಮಲದಂತ ಕಣ್ಣುಗಳು ನಿನ್ನೆಡೆಗೆ ಬರುವ
ಮಾರ್ಗದಲಿ ದಾರಿತಪ್ಪುತಿವೆ ||
ನಿನ್ನ ಮುಖದ ಕಾಂತಿಯಿಂದ
ಮರೆಯಲಿ ಮರೆಯಾದ ಪೂರ್ಣಶಶಿಯು
ಸಂಪಿಗೆ ರೂಪದ ನಿನ್ನ ನಾಸಿಕ ನೋಡಿ
ಬಾಡಿ ಉದುರುದವು ಸಂಪಿಗೆ ಹೂಗಳು
ಮಳೆಯಲಿ ನೆನೆದರು ತಂಪಾಗದು
ಬಿಸಿಲಲಿ ನಿಂತರೂ ಒಣಗೆನು
ಸಂಗಾತಿ ನಿನ್ನ ಸಂಗಡ ನಾನಿರುವಾಗ ||
ಬೆಲ್ಲದ ಪಾಕವ ಸವಿದಂತೆ
ನೀ ನನ್ನ ಜೊತೆಯರಲು
ಭೋರ್ಗರೆವ ಕಡಲು
ಹರಿವ ನದಿಗಳಿಗೆ ನೆಲೆಯಾದಂತೆ
ನನ್ನ ಬದುಕು ಹರಿದಿದೆ ನಿನ್ನ ತಳದ ಕಡೆಗೆ
ನಿನ್ನಯ ಜಪದಲ್ಲಿ ಮುಳುಗಿದರೂ
ದರ್ಶನ ನೀಡದೆ ಸತಾಯಿಸುವೆಯಾ
ಕೋಪದಲಿ ದೇವನು ಉಗುಳಿದರೂ
ನಿನ್ನ ಧ್ಯಾನದಲ್ಲೆ ಮೈಮರೆವೆನು ಪ್ರಿಯತಮ ||
No comments:
Post a Comment