ಮನಸಿನ ಮಾತುಗಳು
ಹೇಳೋ
ಕನಸಿನ ಕವನಗಳು
ಕಲ್ಪನೆ ಮಾಡುತ
ಕನಸನು ಕಾಣುತ
ಕಾಣದೂರಿನ ದೊರೆಯಾಗಿ
ಮೆರೆಯುವೆನು ||
ಮಿತಿಯೆ ಇಲ್ಲದ
ಅಗಲವಾದ
ಕೊನೆಯನು ಕಾಣದ
ಸರ್ವ ಜೀವಿಗಳು
ಬಗೆಬಗೆಯಲಿ ಕಾಣುವರು
ಕಲ್ಪನೆಯ
ಕಣ್ಣ ತುಂಬ
ನಿನದೆ ಬಿಂಬ
ಕಪ್ಪು ಛಾಯೆಯು
ತಂಪ ನೀಡುತಿದೆ
||
ಆಳಾಗಿ ದುಡಿಯಬಹುದು
ಅರಸನಾಗಿ ಭೋಗಿಸಬಹುದು
ಮನಸಿನಾಸೆಯಂತೆ ಮೆರೆಯಬಹುದು
ತಲುಪಲಾಗದ ಗುರಿಯನು
ಮುಟ್ಟಿದಂತೆ ಹಿಗ್ಗಬಹುದು
ಈಡೇರದ ಬಯಕೆಗಳಲಿ
ತೇಲಬಹುದು ಕಲ್ಪನೆಯಲಿ
||
ನೋವಿನಲಿ ನೊಂದ
ಜೀವ
ಕೆಟ್ಟ ಕನಸೆಂದು
ಮರೆಯಬಹುದು
ಸಾಧಿಸಿರದ
ಅನುಭವಿಸಲಾಗದ
ನಲಿವಿನ ಸಂಭ್ರಮ
ಸ್ವಂತದೆಂದು ಹೆಮ್ಮೆ
ಪಡುವ
ಸ್ಥಿತಿಯು ನಮ್ಮ
ಕಲ್ಪನೆ ||
No comments:
Post a Comment