ಬಾಯಲ್ಲಿ
ಬಡಾಯಿ ಕೊಚ್ಚಿಕೊಂಡರೆ ನಾಯಕನಾಗಲು ಸಾಧ್ಯವಿಲ್ಲ. ಮಾತಿಗೆ ನಾನು ಅರ್ಜುನ
ನಮ್ಮಮ್ಮ ಕೃಷ್ಣ ಇದ್ದಂತೆ ಎಂದು
ಹೇಳಿಕೊಂದರೆ ಕೇಳುವ ಜನರೆಲ್ಲ ಮೂರ್ಖರೆ..?
ಹೀಗೊಂದು ಚಿಂತನೆ ಮಾಡಿ ಮಾತನಾಡುವಷ್ಟು
ವಿವೇಚನೆ ಇವರಿಗಿಲ್ಲವೆ ಎನ್ನುವುದು ತಿಳಿದುಬರುತ್ತದೆ. ಮಾಧ್ಯಮದ ಮುಂದೆ ಮಾತನಾಡುವಾಗ
ಹೀಗೆ ಮಾತನಾಡಬೇಕೆನ್ನುವಷ್ಟು ಪ್ರಜ್ನೆ ಇಲ್ಲದವರೆಲ್ಲ ನಮ್ಮನು
ಆಳುವ ನಾಯಕರುಗಳು.
ನಾನೊಬ್ಬ
ಅರ್ಜುನ ಎಂದು ಬಡಾಯಿ ಕೊಚ್ಚಿಕೊಳ್ಳುವ
ಸ್ವಯಂಘೋಷಿತನ ಮಾತಿನ ಹಿಂದಿನ ಮರ್ಮವನ್ನು
ತಿಳಿಯದಷ್ಟು ದಡ್ಡರೇ ನಮ್ಮ ಭಾರತೀಯರು..? ದಶಕದ ನಂತರ ಮಾಧ್ಯಮಕ್ಕೆ
ನೀಡಿದ ಸಂದರ್ಶನದಲ್ಲಿ ಯುವರಾಜನಾಡಿದ ಮಾತುಗಳ ಹಿಂದೆ ಒಂದು
ಸುತ್ತು ಹಾಕೋಣ.
ನೇರವಾಗಿ
ಬಿಜೆಪಿಯನ್ನೆ ಗುರಿಯಾಗಿಸಿಕೊಂಡು ಮಾತನಾಡುತ್ತ ನಮೋ ಬಗ್ಗೆ ಭಯವಿರುವುದನ್ನು
ಸಾಬೀತು ಪಡಿಸುತ್ತಿದ್ದಾರೆ. ನನ್ನ ಬಗ್ಗೆ ತಿಳಿದುಕೊಂಡರೆ,
ನನ್ನ ಹಿನ್ನಲೆಯನ್ನು ಅರಿತುಕೊಂಡರೆ ನನಗೇಕೆ ಭಯವಿಲ್ಲವೆನ್ನುವುದು ತಿಳಿಯುತ್ತದೆ
ಎಂದು ಹೇಳುವ ರಾಹುಲ್ ಏಕೇ
ನಮೋಗೆ ಅಂಜಿ ಬಿಜೆಪಿಯನ್ನ ಹೀಯಾಳಿಸುವುದು..?
ಭಯವಿಲ್ಲದವರು ಆನೆ ನಡೆದದ್ದೆ ದಾರಿ
ಎಂಬಂತೆ ಪಜಾಹಿತಾಸಕ್ತಿಯನ್ನು ರಕ್ಷಿಸುವತ್ತ ಕಾರ್ಯಪ್ರವರ್ತರಾಗಬೇಕೇ ವಿನಃ ಹೆದರಿ ಬಡಾಯಿ
ಕೊಚ್ಚಿಕೊಳ್ಳುವುದು ಏಕೇ?
ಅಧಿಕಾರ
ಒಬ್ಬ ವ್ಯಕ್ತಿಯ ಸುತ್ತ ಗಿರಕಿ ಹೊಡೆಯ
ಬೇಕೆಂದು ಬಿಜೆಪಿ ನಂಬಿ ಪ್ರಧಾನಿ
ಅಭ್ಯರ್ಥಿಯನ್ನು ಮೊದಲೆ ಘೋಷಿಸಿದೆ. ಆದರೆ
ಕಾಂಗ್ರೆಸ್ ಘೊಷಿಸುವ
ಕೆಲಸಕ್ಕೆ ಕೈಹಾಕಲೆ ಇಲ್ಲೆ ಯಾಕೆ
ಅಂದರೆ ಎಲ್ಲರಿಗೂ ತೆರೆದು ಕೊಂಡ ಪ್ರಜಾಸತ್ತೆಯನ್ನು
ನಂಬಿಕೊಂಡಿದೆ ಎನ್ನುವುದು ಇವರ ಮಾತು. ಇದರ
ಹಿಂದಿನ ಮರ್ಮವೆಂದರೆ, ಪ್ರತಿನಿಧಿಗಳು ಆರಿಸಿದ ವ್ಯಕ್ತಿ ಇಲ್ಲಿ
ಪ್ರಧಾನಿಯಗುವುದಿಲ್ಲ ಬದಲಾಗಿ ಕೃಷ್ಣ ಹೇಳಿದವರು
ಮಾತ್ರ ಪ್ರಧಾನಿಯೆಂದ ಮೇಲೆ ಅದು ಅರ್ಜುನ
ಮಾತ್ರ ಎನ್ನುವುದನ್ನು ಸ್ಪಷ್ಟಿಕರಿಸುತ್ತದೆ. ಹೀಗಾಗಿಯೆ ಎಲ್ಲ ಕಾಂಗ್ರೆಸ್ ಮುಖಂಡರುಗಳು
ಪ್ರಧಾನಿ ಯಾರೆಂಬುವುದರಲ್ಲಿ ನಮ್ಮಮ್ಮ ನ ತೀರ್ಮಾನವೆ
ಅಂತಿಮ ಎಂದು ಹೇಳುತ್ತಿರುವುದು ಯುವರಾಜನೆ
ಎನ್ನುವುದಕ್ಕೆ ಪುಷ್ಟೀ ನೀಡುತ್ತದೆ.
ಪ್ರಧಾನಿ
ಅಭ್ಯರ್ಥಿಯನ್ನು ಮೊದಲೆ ಘೋಷಿಸಿದರೆ ಅವರು
ಪ್ರಜೆಗಳಿಗೆ ಇಷ್ಟವಾಗದಿದ್ದರೆ ಕಾಂಗ್ರೆಸ್ ಸೋಲುವುದು ಖಚಿತ. ಅದು ಅಲ್ಲದೆ
ಮೊದಲೆ ಬಿಂಬಿಸುವಂತಹ ಜನ ಮೆಚ್ಚಿದ ಪ್ರಧಾನಿ
ಅಭ್ಯರ್ಥಿ ಕಾಂಗ್ರೆಸನಲ್ಲಿ ಇಲ್ಲದೆ ಇರುವುದರಿಂದ ನಾವು
ಮೊದಲೆ ಪ್ರಧಾನಿಯ ಹೆಸರು ಗೊಷಿಸುವುದಿಲ್ಲ ಎನ್ನುವುದಕ್ಕೆ
ಮುಖ್ಯ ಕಾರಣ. ಚುಣಾವಣೆಯಲ್ಲಿ
ಗೆದ್ದಮೇಲಾದರೆ ಕೃಷ್ಣನ ಮಾತು ಅಂತಿಮ
ಮತ್ತು ನಾನೆ ಪ್ರಧಾನಿಯಾಗಬಹುದು ಅಥವಾ
ನಾಮಕಾವಸ್ತೆಯ ಪ್ರಧಾನಿಯನ್ನು ನಮ್ಮ ತಾಳಕ್ಕೆ ಕುಣಿಸಬಹುದೆನ್ನುವುದು
ದೇಶಕ್ಕೆ ಏನು ಬೇಕೆನ್ನುವುದನ್ನು ಮಾತ್ರ
ಕಾಣುವವರ ಮಾತು. ದೇಶದ ಅಗತ್ಯತೆಯನ್ನು
ಅರಿತವರು, ತಾವೇ ದೇಶವನ್ನಾಳುತಿದ್ದರೂ ಶ್ರೀಸಾಮಾನ್ಯರು
ಬದುಕಲು ಬೇಕಾದ ಮೂಲವಸ್ತುಗಳ ಬೆಲೆ
ಗಗನಕ್ಕೆ ಏರಿಸುತ್ತಿದ್ದಾರೆ. ಇವರ ಹಣೆಬರಹಗಳನ್ನು ಮೊದಲು
ನೋಡಿದ್ದರು ಕಳೆದ ೧೦ ವರ್ಷಗಳಿಂದ
ನೋಡಿ ನೋಡಿ ದೇಶದ ಜನತೆ
ರೋಸಿಹೋಗಿದೆ.
ಹೊಡೆದರು
ಬಡಿದರು ಅಗತ್ಯವೆನಿಸಿದ ಪ್ರಶ್ನೆಯನ್ನು ಜನರ ಮುಂದೆ ಎತ್ತದೆ
ಬಿಡುವುದಿಲ್ಲ ಎನ್ನುವ ರಾಹುಲ್, ತಮ್ಮ
ಪಕ್ಷವೆ ಅಧಿಕಾರದಲ್ಲಿದ್ದರು ಆ ಪ್ರಶ್ನೆಗೆ ಉತ್ತರ
ಹುಡುಕಿ ಜನರನ್ನು ರಕ್ಷಿಸಬೇಕೆಂದು ಏಕೆ
ನೋಡುತ್ತಿಲ್ಲ..? ಯಾಕೆಂದರೆ ಇವರಿಗೆ ಪ್ರಶ್ನೆಯಾಗಿ ಕಾಣುವುದು
ನಮೋ ಮಾತ್ರವೆ ಹೊರತು ದೇಶದ
ಸಮಸ್ಯೆಗಳಲ್ಲ. ಭರವಸೆಯ ಭಂಟ ಪರಿವರ್ತನೆಯ
ಗುರಿಕಾರನಾಗಿ ಜನರಮನಸ್ಸಿನಲ್ಲಿ ಬೇರುರಿರುವ ನಮೋ ಮೆಲೆ ಇಲ್ಲಸಲ್ಲದ ಆರೋಪ
ಮಾಡಿ ಪ್ರಜೆಗಳ ಮನಸ್ಸನ್ನು ತಮ್ಮತ್ತ
ತಿರುಗಿಸುವುದೇ ಇವರ ಗುರಿ.
ಗುಜರಾತ್
ಹಿಂಸೆ ಕೋಮುವಾದವೆನಿಸಿದರೆ ಪಂಜಾಬ್ ಸಿಖ್ ವಿರೋಧಿ
ದೊಂಬಿ ಕೊಮುವಾದವೆನಿಸುವುದಿಲ್ಲವೇ..? ಭಾರತೀಯ ಬಹುಸಂಖ್ಯಾತರ ಹಿತಾಸಕ್ತಿಯನ್ನು
ಎತ್ತಿಹಿಡಿಯುವ ಬಿಜೆಪಿ ಕೋಮುವಾದಿ ಪಕ್ಷವೆಂದಾದ
ಮೇಲೆ ವೋಟ್ ಬ್ಯಾಂಕ್ ರಾಜಕಾರಣ
& ಸಿಖ್ ವಿರೋಧಿ ದೊಂಬಿ ಮಾಡುವ
ಕಾಂಗ್ರೆಸ್ ಕೋಮುವಾದಿ
ಪಕ್ಷಕ್ಕಿಂತಲೂ ಕಡೆಯಲ್ಲವೇ..?
ರಾಹುಲ
ಗಾಂಧಿಯವರು ಪರದೆಯೊಳಗಿನ ಪ್ರಧಾನಿ ಅಭ್ಯರ್ಥಿ, ಇಲ್ಲದಿದ್ದರೆ
ಕಾಂಗ್ರೆಸನ ಇಡಿ ಚುಣಾವಣ ಪ್ರಚಾರ
ಅವರ ಸುತ್ತಲೆ ಯಾಕೆ ಸುತ್ತದೆ
ಎನ್ನುವ ಅರುಣ್ ಜೇಟ್ಲಿಯವರ ಮಾತು
ರಾಹುಲ್ ಒಳ ಮರ್ಮದ ಮಾತಿಗೆ
ಪುಷ್ಟಿ ನೀಡುತ್ತದೆ.
ಎಪಿಪಿಗೆ
ಹೆದರದೆ ಡೆಲ್ಲಿಯಲ್ಲಿ ನೆಲಕಚ್ಚಿದ ಮೇಲೆ ನಮೋಗೆ ಹೆದರಿದರು
ಹೆದರದಂತೆ ನಟಿಸುತ್ತಿರುವ ಕಾಂಗ್ರೆಸ್ ಚುಣಾವಣ ರಣತಂತ್ರ ರೂಪಿಸುತ್ತ
ಬಿಜೆಪಿ ಮತ್ತು ನಮೋ ಮೇಲೆ
ಪ್ರಜೆಗಳು ನಂಬಲಸಾಧ್ಯವಾದ, ಸಲ್ಲದ ವಾಗ್ಧಾಳಿ ಮಾಡುತ್ತಿದೆ.
ವ್ಯವಸ್ತೆಯನ್ನು ಬದಲಿಸುವುದೆ ನನ್ನ ಗುರಿ ಎನ್ನುವ
ರಾಹುಲ್ ೧೦ ವರ್ಷದ ಅಧಿಕಾರ
ಸಾಲಲಿಲ್ಲವೆ ವ್ಯವಸ್ಥೆಬದಲಿಸಲಿಕ್ಕೆ..? ಕಾಂಗ್ರೆಸ್ ಪಕ್ಷವು ಬ್ರಷ್ಠಾಚಾರವನ್ನು ಗಂಭಿರವಾಗಿ
ಪರಿಗಣಿಸಿದೆ ಎನ್ನುವವರು ಮತ್ಯಾಕೆ ಬ್ರಷ್ಠರಿಗೆ ಟಿಕೆಟ್
ನೀಡುವುದು..? ವ್ಯವಸ್ಥೆ ಬದಲಿಸುವುದು ನನ್ನ ಗುರಿ ಎನ್ನುವ
ರಾಹುಲ್ ನೋಡಿದರೆ ದೇಶಕಾಗಿ ಏನು
ಮಾಡುತ್ತಿಲ್ಲ ಬದಲಾಗಿ ಜನರ ಮನಸ್ಸಿನಲ್ಲಿ
ನೆಲೆಸಿರುವ ಧೀಮಂತ ನಾಯಕ ನ್ಮೋರನ್ನು
ಬದಲಿಸುವೆದೆ ಇವರ ಮಾತಿನ ಉದ್ದೇಶ
ಮತ್ತು ಮುಂದಿನ ಗುರಿ ಎನ್ನುವುದು
ಸ್ಪಷ್ಟವಾಗಿ ಭಾಸವಾಗುತ್ತದೆ.
ಹೀಗೆ
ಕೆದಕುತ್ತ ಹೋದರೆ ಹಲವು ವಿಷಯಗಳ
ಬಗ್ಗೆ ಮಾತನಾಡಿರುವುದರ ಒಳ ಮರ್ಮ ಬೆಳಕಿಗೆ
ಬರುತ್ತದೆ. ಮೂಗಿಗೆ ತುಪ್ಪ ಒರೆಸುವ
ಇಂತಹ ಬೆಣ್ಣೆಯ ಮಾತಿಗೆ ಬಲಿಯಾಗದೆ
ದೇಶದ ಒಳಿತಿಗೆ ಶ್ರಮಿಸುವ ನಮೋಗೆ
ಜೈ ಹೋ ಎಂದು ಕಾದು
ನೋಡೋಣ. ಪೊಳ್ಳು ಭರವಸೆ ನೀಡಿದವರ
ಕೈಯಲ್ಲಿ ೧೦ ವರ್ಷಗಳ ಕಾಲ
ಅಧಿಕಾರವನ್ನಿತ್ತು ಕೈಸುಟ್ಟುಕೊಂಡಾಗಿದೆ.ಈಗ ಬದಲಾವಣೆಯ ಕಾಲ
ಬಂದಿದೆ ಹೀಗಾಗಿ ಬದಲಾವಣೆಯ ಹರಿಕಾರನಿಗೆ
ಅಧಿಕಾರವನ್ನಿತ್ತು ನಮೋ ಎಂಬ ಪುಗ್ಗಿ ಹಾರಾಡುತ್ತದೋ ಟುಸ್
ಎನ್ನುತ್ತದೋ ಎಂದು ಕಾದು ನೋಡೋಣ.
ಮೋದಿ, ಕೇಜ್ರಿ ಮತ್ತು ನನ್ನಂಥ educated chap
ReplyDeleteನಾನೀಗಾಗಲೇ ಕೆಲ ಕಡೆ ಮೋದಿ ವಿರೋಧಿ ಎಂದು ಬ್ರ್ಯಾಂಡ್ ಆಗಿದ್ದೇನೆ. ಅದಕ್ಕಾಗಿಯೇ ಬರೆಯುತ್ತಿದ್ದೇನೆ. ಬರೆವ ಮೊದಲೇ ಹೇಳಿಬಿಡುತ್ತೇನೆ. ನಾನೇನು ಸಿನಿಕ ಮೋದಿ ವಿರೋಧಿಯೂ ಅಲ್ಲ, ವಡೋದರಾ, ಕಲುಪುರ್, ಗೋಮತಿಪುರ್, ಅಹಮದಾಬಾದ್‌ಗಳಲ್ಲಿ ಕಳೆದೈದು ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿದ್ದರೂ ಹತ್ತುವರ್ಷದಿಂದೀಚೆ ಗುಜರಾತಿನಲ್ಲೆಲ್ಲೂ ಯಾವ ಗಲಾಟೆಯೂ ನಡೆದಿಲ್ಲವೆಂದು ತಲೆಯ ಮೇಲೆ ಹೊಡೆದಂತೆ ಸುಳ್ಳುಹೇಳುವ ಸಮೂಹಸನ್ನಿಗೊಳಗಾದ ಮೋದಿಭಕ್ತನಂತೂ ಮೊದಲೇ ಅಲ್ಲ. ಮೋದಿ ಪ್ರಧಾನಿಯಾಗಲಿ ಎಂದು ಬಯಸುವ ಲಕ್ಷ ಲಕ್ಷ ಜನರಲ್ಲಿ ನಾನೊಬ್ಬ. ಮೋದಿಯನ್ನು ಇಷ್ಟಪಡುತ್ತೇನೆಂದಲ್ಲ, ಅವನನ್ನು ಹೊರತುಪಡಿಸಿ ಬೇರೆ ದಾರಿ ಉಳಿದಿಲ್ಲವೆಂಬ ಕಾರಣಕ್ಕೆ.
ಭೃಷ್ಟಾಚಾರ ಹುಟ್ಟುವುದು ಎಲ್ಲಿ?
ಅದರ ಮೂಲವಿರುವುದು ರಾಜಕಾರಣದಲ್ಲಲ್ಲ. ಇವತ್ತು ಪರಿಸ್ಥಿತಿ ಹೇಗಿದೆಯೆಂದರೆ ಯಾವ ಕ್ಷೇತ್ರದಲ್ಲೇ ಆಗಲಿ ಕನಿಷ್ಟ ಹತ್ತಿಪ್ಪತ್ತು ಕೋಟಿ ಖರ್ಚು ಮಾಡದೇ ಒಬ್ಬ ಎಮ್ಮೆಲ್ಲೆ ಗೆಲ್ಲಲು ಸಾದ್ಯವಿಲ್ಲ. ಮೊತ್ತದಲ್ಲಿ ಆಚೀಚೆ ವ್ಯತ್ಯಾಸವಾದರೂ ಅದು ಮೋದಿಯೇ ಆಗಿರಬಹುದು ಅಥವಾ ರಾಹುಲ್ ಗಾಂಧಿ ಆಮ್ ಆದ್ಮಿಯರೇ ಆಗಿರಬಹುದು, ಎಲೆಕ್ಷನ್ ಕಮಿಶನ್ ಹೇಳಿದ ಮೊತ್ತದ ಹಣ ಅವರ ಒಂದು ಬೂತಿನ ಕಾರ್ಯಕರ್ತರಿಗೆ ಹಂಚಲೂ ಸಾಕಾಗಲಾರದು. ಯಾರಾದರೊಬ್ಬ ರಾಜಕಾರಣಿ ಚುನಾವಣೆಯಲ್ಲಿ ಬಂಡವಾಳ ಹಾಕದೆ ಗೆದ್ದು ಬರುವ ಸ್ಥಿತಿ ಈ ದೇಶದಲ್ಲಿ ಇಲ್ಲವೇ ಇಲ್ಲವೆಂದರೆ ತಮಾಷೆಯ ಮಾತಲ್ಲ. ಹಾಗಾದರೆ ರಾಜಕಾರಣಿಗಳಿಗೆ ಈ ಹಣ ಬರುವುದು ಎಲ್ಲಿಂದ? ಜನರಿಗೆ ಹಣ ಖರ್ಚು ಮಾಡುವ ರಾಜಕಾರಣಿ ಕಾಣುತ್ತಾನೆಯೇ ಹೊರತೂ ಆ ಹಣದ ಮೂಲವಲ್ಲ. ರಾಜಕಾರಣಿಗಳನ್ನು ಮೀರಿಸಿ ದುಡ್ಡು ಮಾಡುವ ಕೈಗಾರಿಕೋದ್ಯಮಿಗಳ ಒಂದು ಗುಂಪು ತನ್ನ ಮುಖ ಕಾಣದಂತೆ ಚುನಾವಣೆಯ ಹಿಂದೆ ನಿಂತು ತನ್ನ ಪ್ರಭಾವ ಬೀರುತ್ತಿರುತ್ತದೆ. ಅವರೇನು ಸುಮ್ಮನೆ ಹಣ ಖರ್ಚುಮಾಡುವುದಲ್ಲ. ತನಗೆ ಬೇಕಾದ ಒಂದು ಅಧಿಕಾರ ವ್ಯವಸ್ಥೆ ಜಾರಿಯಲ್ಲಿರಲಿ ಎಂಬ ಕಾರಣಕ್ಕೆ ಆಮಟ್ಟಿನ ಬಂಡವಾಳ ಹೂಡುವುದು. ಹಿಂದೆಲ್ಲ ಸಾರಾಯಿ ಮಾಫಿಯಾ ಆ ಕೆಲಸ ಮಾಡುತ್ತಿತ್ತು. ಈಗ ಗಣಿ, ಭೂ ಮಾಫಿಯಾ, ತೈಲ ಮಾಫಿಯಾ ಆ ಜಾಗವನ್ನಾಕ್ರಮಿಸಿದೆ. ಅವರ ಕೈಯಲ್ಲಿ ರಾಜಕಾರಣಿ ಒಂದು ದಾಳ ಮಾತ್ರ. ಜಾಗತೀಕರಣಕ್ಕೆ ದಿಡ್ಡಿ ಬಾಗಿಲು ತೆರೆದುಕೊಂಡ ಭಾರತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಬರೀ ಭಾರತದ ಮಾತ್ರವಲ್ಲ ಜಗತ್ತಿನ ಹಲ ದೇಶದ ಉದ್ಯಮಪತಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ. ಅದಕ್ಕೇ ಅಲ್ಲವೇ ಮನಮೋಹನ ಸಿಂಗ್ ಸೇರಿ ಹೆಚ್ಚಿನ ರಾಜಕೀಯ ನಾಯಕರು, ಪಕ್ಷಗಳೆಲ್ಲ ಅಮೇರಿಕದ ಏಜೆಂಟರುಗಳಂತೆ ವರ್ತಿಸುತ್ತಿರುವುದು.
ಯಸ್, ಯಡಿಯೂರಪ್ಪ ಒಬ್ಬ ಭೃಷ್ಟನೇ...ಆದರೆ ಮೂವತ್ತು ವರ್ಷ ರೈತಪರ ಹೋರಾಟ ಮಾಡಿಕೊಂಡು ಬಂದ ಒಬ್ಬ ಜನನಾಯಕನನ್ನು ಅಧಿಕಾರ ಸಿಕ್ಕಿದಾಕ್ಷಣ ಭೃಷ್ಟನನ್ನಾಗಿ ಮಾಡಿದ ಶಕ್ತಿ ಯಾವುದು? ಯಡಿಯೂರಪ್ಪನೇನೋ ಸಿಕ್ಕಿಬಿದ್ದ. ಕುಮಾರಸ್ವಾಮಿ, ಕೃಷ್ಣ ಜೊತೆಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತ ಇತ್ತಿಚೆಗಿನವರ ಕಥೆಯೇನು? ಸಿಕ್ಕಿಬೀಳಲಿಲ್ಲವಷ್ಟೆ. ಮೋದಿ ತನ್ನ ಸರ್ಕಾರದ ಬಗ್ಗೆ ಕೇಳಿದ ಹದಿನಾಲ್ಕು ಸಾವಿರ RTI ಅಪ್ಲಿಕೇಶನ್ನುಗಳನ್ನು ಕುಂಡೆಯಡಿ ಹಾಕಿ ಕುಳಿತಂತೆ. ಗುಜರಾತಿನಲ್ಲಿ ಸರ್ಕಾರದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿಯೇ ಮಾಹಿತಿ ಹೊರಬರುವುದಿಲ್ಲವೆಂದಮೇಲೆ ಭೃಷ್ಟಾಚಾರವಾಗಿದೆಯೆಂದು ಹೇಳುವವರು ಯಾರು? ತನ್ನ ಬಗ್ಗೆ ಮಾಹಿತಿ ಕೇಳಿದ ತಪ್ಪಿಗೆ RTI ಕಾರ್ಯಕರ್ತನನ್ನೇ ಕೊಂದ ದೀನು ಭಾಯ್ ಸೋಳಂಕಿ ಎಂಬ ಸಂಸದ ಮೋದಿಯ ಬಲಗೈ ಬಂಟ. ಸಿಕ್ಕಿಬೀಳಲಿಲ್ಲವೆಂಬ ಕಾರಣಕ್ಕೆ ಅವರ್ಯಾರೂ ಭೃಷ್ಟರಲ್ಲವೆಂದು ಹೇಳುವ ಧೈರ್ಯ ಸ್ವತಃ ಅವರಿಗೂ ಇದ್ದಂತಿಲ್ಲ. ತೆರೆಯ ಹಿಂದಿನ ಮಾಫಿಯಾಕ್ಕೆ ಇಂಥ ನೂರಾರು ಭೃಷ್ಟರನ್ನು ಸೃಷ್ಟಿಸುವ ತಾಖತ್ತಿದೆ. ರಾಜಕಾರಣಿಗಳನ್ನು ದೂಷಿಸುವ ನೆವದಲ್ಲಿ ಈ ಮಾಫಿಯಾದ ಕುರಿತು ಮಾತಾಡಲು ಯಾರಿಗೂ ಪುರುಸೊತ್ತಿಲ್ಲ. ಟಾಟಾ ನ್ಯಾನೋ ಗುಜರಾತಿಗೆ ಬಂದದ್ದೇಕೆ? ಗುಜರಾತ್ ಸರ್ಕಾರ ೩೦ ಸಾವಿರ ಕೋಟಿ ರೂಪಾಯಿಗಳ ಬಡ್ಡಿರಹಿತ ಸಾಲ ನೀಡಿತೆಂಬ ಕಾರಣಕ್ಕೆ. ಹಾಗೆ ಸಾಲ ಕೊಟ್ಟಿದ್ಯಾಕೆ? ಚುನಾವಣೆ ಸಮಯದಲ್ಲಿ ಉದ್ಯಮಿಗಳು ತನ್ನ ಅನುಕೂಲಕ್ಕಾಗಲಿ ಎಂಬ ಭಾವನೆಯೊಂದಿಗೆ.
ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ನಡೆಸುವವರು ಅಂಬಾನಿಯಂಥ ಉದ್ಯಮಪತಿಗಳೇ. ಕಳೆದ ಹತ್ತು ವರ್ಷಗಳಿಂದ ಸರ್ಕಾರ ನಡೆಸಿದವರೂ ಅವರೇ. ಕಾಂಗ್ರೆಸ್ ನನ್ನ ಅಂಗಡಿಯಿದ್ದಂತೆ, ಅಲ್ಲಿದ್ದುದನ್ನೆಲ್ಲ ಕೊಳ್ಳುವ ಶಕ್ತಿ ನನಗಿದೆ ಎಂದು ಅಂಬಾನಿಯೇ ಹೇಳಿದ್ದು ಸುಮ್ಮನೇ ಅಲ್ಲ. ನಾಳೆ ಬಿಜೆಪಿಯ ಸರ್ಕಾರ ಬಂದರೂ ನಡೆಸುವವನು ಮತ್ತದೇ ಅಂಬಾನಿಯಂಥವರೇ. ಮೋದಿ ತನ್ನ ಪ್ರತಿ ರ್ಯಾಲಿಗಾಗಿ ಭಾರತದ ಮೂಲೆಮೂಲೆಗೆ ಹಾರುವ ಖಾಸಗಿ ವಿಮಾನ ಅದಾನಿ ಗ್ರುಪ್ಪಿನವರದ್ದು. ಮೋದಿಯ ಒಂದೊಂದು ರ್ಯಾಲಿಗಳಿಗೆ ಖರ್ಚಾಗುವ ಮೊತ್ತ ಕನಿಷ್ಟ ೨೫ ಕೋಟಿ. ಇಂಥ ೨೫೦ಕ್ಕೂ ಹೆಚ್ಚು ರ್ಯಾಲಿಗಳು ಮುಂದಿನೆರಡು ತಿಂಗಳಲ್ಲಿ ನಡೆಯಲಿವೆ. ಆ ಮಟ್ಟಿನ ಬಂಡವಾಳ ಬಿಜೆಪಿಗೆ ಬರುವುದೆಲ್ಲಿಂದ? ಭಾಷಣ ಕೇಳಿ ಚಪ್ಪಾಳೆ ತಟ್ಟಿ ಎದ್ದುಬಂದವರ್ಯಾರೂ ಅದರ ಬಗ್ಗೆ ಯೋಚಿಸುವುದಿಲ್ಲ. ಅಫ್‌ಕೋರ್ಸ್ ಒಂದೇ ಭೃಷ್ಟಾಚಾರದಿಂದ, ಇಲ್ಲವೇ ಅಂಬಾನಿಯಂಥವರ ದುಡ್ಡಿನಿಂದ. ಹಿಂದಿನ ದಿನ ತನ್ನ ಆಸ್ಟಿನೋ ಕಾರಿನ್ನು ಯಾರಿಗೋ ಗುದ್ದಿ ಓಡಿ ಹೋದ, ಡ್ರಿಂಕ್ ಎಂಡ್ ಡ್ರೈವ್ ಕೇಸಿನಲ್ಲಿ ಒಳಗಿರಬೇಕಾದ ಆಕಾಶ್ ಅಂಬಾನಿ ಮರುದಿನ ಠಾಕುಠೀಖಾಗಿ ಮೋದಿಯ ಪಕ್ಕ ಮುಂಬೈನ ರ್ಯಾಲಿಯಲ್ಲಿ ಕುಳಿತುಕೊಳ್ಳುತ್ತಾನೆಂದರೆ ಹೇ ದೇವರೇ, ನಮ್ಮ ವ್ಯವಸ್ಥೆ ಎಲ್ಲಿಗೆ ಬಂದಿದೆ? ಇಂಥ ಅಂಬಾನಿ ಮುಂದೆ ಸರ್ಕಾರ ಬಂದಾಗ ತನ್ನ ಪಾಲು ಕೇಳಿಯೇ ಕೇಳುತ್ತಾನೆ. ಯಾಕೆಂದರೆ ಅದವನ ಹಕ್ಕು. ಮಲ್ಯನಿಗೆ ಹದಿನಾಲ್ಕು ಕೋಟಿಗೆ ಸೇಲ್ ಆಗಿಹೋದ ಯುವರಾಜ ಮಲ್ಯನಿಗಾಗಿ ಆಡುತ್ತಾನೆಯೇ ಹೊರತೂ ದೇಶಕ್ಕಾಗಿ ಆಡುತ್ತಾನೆಯೇ?
ಯು.ಪಿ,ಎ ಸರ್ಕಾರದಲ್ಲಿ ಜೈಪಾಲ್ ರೆಡ್ಡಿಯಂಥ ಪ್ರಾಮಾಣಿಕ ಪೆಟ್ರೋಲಿಯಂ ಸಚಿವನನ್ನು ಎತ್ತಂಗಡಿ ಮಾಡಿಸಿ ಮೊಯ್ಲಿಯನ್ನು ಪ್ರತಿಷ್ಟಾಪಿಸಿದ್ದು ನೋ ಡೌಟ್ ಮತ್ತದೇ ಅಂಬಾನಿಯೇ.
ReplyDeleteMay be The FIR is not worth its weight in paper ಆದರೆ ಅವನು ಅಷ್ಟಾದರೂ ಮಾಡಿದನಲ್ಲ. ಅಂಥ ಅಂಬಾನಿಯ ಮೇಲೆಯೇ ಕೇಸ್ ಹಾಕಲು ಧೈರ್ಯ ತೋರಿದ ಕೇಜ್ರಿವಾಲನನ್ನು ಅಭಿನಂದಿಸಿದ ನಾನೊಬ್ಬ ಎಜುಕೇಟೇಡ್ ಚಾಪ್ ಇರಬಹುದು. ಆಂಧ್ರದ ಕೃಷ್ಣಾ-ಗೋದಾವರಿ ಬೇಸಿನ್ನಿನ ರಿಲಾಯನ್ಸ್ ತೈಲ ಮಾಫಿಯಾ ನಡೆಸಿದ ಹಗರಣ ೮.೮ ಬಿಲಿಯನ್ ಡಾಲರಿಗಿಂತ ಹೆಚ್ಚು. ನನಗೇನೋ ತಲೆಕೆಟ್ಟಿದೆ. ಆದರೆ ಮುರಲಿ ಮನೋಹರ್ ಜೋಶಿ ನೇತೃತ್ವದ PAC, CAG, Ashok Chawla Committee on “Pricing of Natural Resources”, ತಪನ್ ಸಿನ್ಹಾ ಕಮಿಟಿಗಳೆಲ್ಲ ರಿಲಾಯನ್ಸ್ ಕೆಜಿಬಿಯಲ್ಲಿ ಬ್ರಹ್ಮಾಂಡ ಭೃಷ್ಟಾಚಾರವಾಗಿದೆ ಎಂದು ವರದಿ ಕೊಟ್ಟಿವೆಯಲ್ಲ?!. ಆ ಕೆಜಿಬಿಯ ಹಗರಣವನ್ನು ತಡೆಯಲು ಹೋಗಿ ವೈ.ಎಸ್ಸಾರಿನಂಥ ಒಬ್ಬ ಮುಖ್ಯಮಂತ್ರಿಯೇ ಅಂಬಾನಿಯ ಕೈಯಲ್ಲಿ ಕೊಲೆಯಾಗಿ ಹೋದ. ಈ ಭೃಷ್ಟಾಚಾರದ ಬಗ್ಗೆ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲಿ, ಅಂಬಾನಿಯ ದುಡ್ಡಲ್ಲಿ ರ್ಯಾಲಿ ನಡೆಸುವ ಪರಮ ಪವಿತ್ರ ಮೋದಿಯಾಗಲೀ ಯಾಕೆ ಬಾಯಿಬಿಡುವುದಿಲ್ಲ?
ಯಾಕೆ ಅಂಥಹ ವಿಷಯಗಳನ್ನೂ ಮಾತಾಡಲು ಕೇಜ್ರಿವಾಲನೇ ಬೇಕು. ಆತ ರಾಜಕಾರಣದಲ್ಲಿ ಎಳೆಸಿರಬಹುದು. ಸಿಕ್ಕಿದ ನಲವತ್ತೊಂಭತ್ತು ದಿನಗಳಲ್ಲಿ ಕಡೆದು ಕಟ್ಟೆ ಹಾಕಿದ್ದು ಏನೂ ಇಲ್ಲದೇ ಇರಬಹುದು. ಮಾತುಮಾತಿಗೆ ಧರಣಿಕೂರುವ anarchist ಆಗಿರಬಹುದು. ಆದರೆ....ಅವನ ಪ್ರಾಮಾಣಿಕತೆಯ ಬಗ್ಗೆ ನನಗೆ ಸಂಶಯವಿಲ್ಲ.
ಬೆಂಬಲ ನೀಡಿದ ಪಾರ್ಟಿಯ ವಿರುದ್ದವೇ ಧರಣಿಗೆ ಕೂತರೆ ತನ್ನ ಸರಕಾರ ಬಿದ್ದು ಹೋಗುತ್ತದೆ ಎಂಬ ಅರಿವಿದ್ದರೂ ಕೇಜ್ರೀವಾಲ್ ಮಧ್ಯರಾತ್ರಿ ೪ ಡಿಗ್ರಿ ಸೆಲ್ಸಿಯಸ್ಸಿನ ಛಳಿಯಲ್ಲೂ ಧರಣಿ ಕೂರುವ ಎದೆಗಾರಿಕೆ ತೋರಿದನಲ್ಲಾ ಇನ್ನೊಬ್ಬನೇ ಒಬ್ಬ ರಾಜಕಾರಣಿ ಅವನ ಜಾಗದಲ್ಲಿದ್ದರೆ ಆ ಕೆಲಸ ಮಾಡುತ್ತಿದ್ದನೇ? ಪಕ್ಷಗಳಿಗೆ ಫಂಡಿಂಗ್ ಬರುವುದೇ ಉದ್ಯಮಪತಿಗಳಿಂದ. ಅಂಥದ್ದರಲ್ಲಿ ಅಂಬಾನಿ ಮೇಲೆ ಕೇಸು ಹಾಕಿದರೆ ನಾಳೆ ಉದ್ಯಮದವರಿಂದ ನಯಾಪೈಸೆ ಬರದೇ ಹೋಗಬಹುದು ಎಂದು ತಿಳಿದಿದ್ದರೂ ಆ ಧೈರ್ಯ ಮಾಡಿದನಲ್ಲ. ಬೇರೆ ಪಕ್ಷಗಳು ಮಾರಾಟವಾಗಿ ಕಾಲವಾದಾಗ ಅಂಥವುಗಳಿಂದ ಇದನ್ನೂ ನಿರೀಕ್ಷಿಸುವುದೂ ಪಾಪವೇ. ಬರಿ ಒಂದು ಬಿಲ್ ಅಸೆಂಬ್ಲಿಯಲ್ಲಿ ಪಾಸಾಗಲಿಲ್ಲವೆಂಬ ಕಾರಣಕ್ಕೆ, ಕೇಂದ್ರ ಗೃಹಖಾತೆಯ ಮುಖಕ್ಕುಗಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಬಿಸಾಕಿ ಹೋದನಲ್ಲ...
I started liking him..really....as never before....
ಹೊರಗಿನ ದಾಳಿಯನ್ನು ಶತಮಾನಗಳ ಕಾಲ ತಡೆದುಕೊಂಡ ಸಾಮ್ರಾಜ್ಯಗಳೂ ಒಳಗಿನ ದಾಳಿಗೆ ನಾಮಾವಶೇಷವಾಗಿ ಹೋಗಿವೆ. ನನ್ನ ದೇಶ ಹಾಗಾಗುವುದು ಬೇಡ. ಲೋಹಿಯಾ ಹೇಳಿದಂತೆ ಒಂದು ವ್ಯವಸ್ಥೆ ವ್ಯವಸ್ಥೆಯಿಂದ ಅವ್ಯವಸ್ಥೆಗೆ ಸಾಗಿ ಅಲ್ಲಿಂದ ಕುವ್ಯವಸ್ಥೆಗೆ ತಲುಪಿ ಸುವ್ಯವಸ್ಥೆ ನೆಲೆಸುವ ಸನ್ನಿವೇಶಕ್ಕೆ ಅಣಿಯಾಗುತ್ತದೆ. ನಮ್ಮಲ್ಲಿ ವ್ಯವಸ್ಥೆ ಹದಗೆಟ್ಟು, ಅವ್ಯವಸ್ಥೆ ಎಂಬ ಹೆಗಲು ದಾಟಿ ಕುವ್ಯವಸ್ಥೆಗೆ ತಲುಪಿದೆ. ಇದನ್ನು ಸುವ್ಯವಸ್ಥೆಗೆ ತರಬೇಕೆಂದರೆ ಭ್ರಷ್ಟಾಚಾರದ ಕುರಿತು, ಅದು ಯಾವ್ಯಾವ ರೀತಿ ವ್ಯಾಪಿಸುತ್ತಾ ಹೋಗುತ್ತದೆ. ಅದರಲ್ಲಿ ಯಾರ‍್ಯಾರು ಯಾವ್ಯಾವ ರೀತಿ ತಮ್ಮ ಪಾಲು ಸಲ್ಲಿಸುತ್ತಾ ಹೋಗುತ್ತಾರೆ ಎಂಬುದರ ಕುರಿತು ಗಂಭೀರ ಆಲೋಚನೆಯಾಗಬೇಕು.