Sunday, February 20, 2011

|| ನನ್ನ ಭಾವನೆ ||

ಒಂದು ಮಧುರ ರಾಗದಲಿ ಕರೆಯಲೆ ನಿನ್ನ ಹೆಸರನ್ನು......
ಸವಿಗಾನದಲ್ಲಿ ನಾ ಹಾಡಲೆ ಪ್ರೇಮ ಪಲ್ಲವಿಯನ್ನು....
ನೋಡುವ ತವಕದಲಿ ಮರೆತೆನು ನಾ ನನ್ನ...||

ಹಸಿರು ಸೀರೆಯನು ತೊಟ್ಟಾ ನಿನ್ನ
ಚಂದವ ಹೇಗೆ ಹೊಗಳಲಿ ನಾನು
ನಿನ್ನ ಅಂದವನು ಕಂಡ ಕ್ಷಣದಲೆ
ಗುಲಮನಾದನು ಹುಣ್ಣಿಮೆ ಚಂದ್ರನು..||

ಪ್ರೀತಿಗೆ ಸ್ಪೂರ್ಥಿಯು ನಿನ್ನಯ ಮೊಗವು
ಸೆಳೆಯುತ ಕರೆದಿದೆ ನಿನ್ನಯ ತೊಳು
ಮೂಡುವ ಮುಳುಗುವ ಸೂರ್ಯನ ಕಂಡೆ
ನಿನ್ನ ಕಾಲಿನ ಪಾದದ ಮುಂದೆ..||

ಎಲ್ಲರ ಸಲುಹುವ ನಿನ್ನಯ ಸಹನೆ
ಸಾವಿರ ಕಾವ್ಯ ನಿನ್ನಯ ಸಂಸ್ಕ್ರತಿ
ಹೆಮ್ಮೆಯಲಿ ಕೈ ಮುಗಿದು ಹೇಳುವೆ ಅಂಬೆ
ಮಗನಾದ ನಾನೇ ಧನ್ಯ ತಾಯೆ ಭಾರತಾಂಬೆ..||


1 comment: