ಮೊಗ್ಗೊಂದು ಅರಳಿದಂತೆ
ಮರವೊಂದು ಚಿಗುರಿದಂತೆ
ಅಂಕುರಿಸುವುದು ಗೆಳೆತನ ಜೀವ ಜೀವಗಳ ನಡುವಿನಲಿ ||
ವಯಸ್ಸಿನ ಅಂತರವಿರದೆ
ಸಮಾನಮನಸ್ಕರು ಬೆರೆತಾಗ
ಒಬ್ಬರನ್ನೊಬ್ಬರು ಸಮರ್ಥಿಸುವರು ಪರಸ್ಪರ ||
ಮೇಲುಕೀಳೆಂಬ ಬೇಧಭಾವವಿಲ್ಲದೆ ಜನಿಸುವ
ಕಲಿಕೆಯುಲಿ, ಉದ್ಯೋಗದಲಿ, ಮಾತಿನಲಿ, ಪರಿಚಯದಲಿ
ಗುಣನೋಡಿ ಗೆಳೆತನವಾಗಿರಲು ಅಳಿವಿಲ್ಲ ||
ಜೀವಿಗಳು ಗೆಳೆತನದಿ ಸೇರಲು
ಸಾಮಾಜಿಕ ಕ್ರಾಂತಿಯನು ಸಂಘಟಿಸಲು
ಬದಲಾವಣೆ ಮಾಡುತ್ತ ಒಗ್ಗಟ್ಟಿನಲಿ ಮುನ್ನುಗ್ಗುವರು ||
ಓಳ್ಳೆಯ ಗುಣವಿರಲು
ಪ್ರಾಣಕೆ ಪ್ರಾಣಕೊಡುವಷ್ಟು ಬೆರೆತಿರಲು
ನೋವುನಲಿವನ್ನೆಲ್ಲ ಹಂಚಿಕೊಳುವರು ಪ್ರಾಣಸ್ನೇಹಿತರು ||
ಒಳಿತನ್ನು ಬಯಸಿ
ಬೆಂಬಲಿಸುತ ಏಳಿಗೆಗೆ ಸಹಕರಿಸುವ
ಸಂಬಂಧಕ್ಕಿಂತ ಮಿಗಿಲಾಗಿ ಒಂದು ಹೆಜ್ಜೆ ಮುಂದಿರುವುದೇ ಸ್ನೇಹವು ||
ಮುಂದೆಂದು ಬಾಡದಿರಲಿ ಹೂವಂತೆ
ಎಂದೆಂದು ಉದುರದೆ ನಲಿಯಲಿ ಚಿಗುರೆಲೆಯಂತೆ
ಅಜರಾಮರವಾಗಿ ಪ್ರಜ್ವಲಿಸುತ ಬೆಳಗುವ ರವಿಚಂದ್ರರಂತೆಯೇ ಸ್ನೇಹ ||
ಸ್ನೇಹಭಾವವ ಮನದಲ್ಲಿ ಮೂಡಿಸುವ ಪದಗಳು.. :)
ReplyDeleteಚೆನ್ನಾಗಿದೆ. ಮುಂದುವರೆಯಲಿ.. :)