ಕಾಣದ ಮುಖವದು ಭಯದಲಿ ಕಾಡಲು
ಹಿಂದಿನಿಂದ ಎಚ್ಚರಿಸುತಿರಲು
ತಿಳಿಸದೆ ತನ್ನಿಚ್ಚೆಯಂತೆ ಬರುವ
ಎಲ್ಲೆಂದರಲ್ಲಿ ಆವರಿಸುವ ಸಾವಿಗೆ ಹೆದರಿ
ಸಭ್ಯರಾಗಿ ಬದುಕುವರೆಂದೂ ರೀತಿ ನೀತಿಯಲಿ ||
ಪ್ರಾಣ ಹೋಗುವ ಸಮಯಕೆ ತ್ರಾಣವು ಚೀರಲು
ಕಾರಣವೊಂದು ಸಮಯಕೆ ಒದಗಲು
ಪ್ರಾಣ್ಪಕ್ಷಿಯು ಹಾರಲು ತವಕಿಸಿ
ಅದೃಶ್ಯವಾಗುವುದು ಕಾಣದಹಾಗೆ
ದೇಹವೊಂದೇ ಉಳಿವುದು ನಿರ್ಜೀವವಾಗಿ ||
ಸೊಕ್ಕಿನಲಿ ನಡೆದರೂ, ದರ್ಪದಲಿ ಮೆರೆದರೂ
ಎಲ್ಲಾ ಕಾಲಕ್ಕೂ ಸುತ್ತಲೂ ಸಾವಿರ ಜನರಿದ್ದರೂ
ಮೂಲ ಕಾರ್ಯವ ಮರೆತು ಮೋಜಿನಿಂದ ಬದುಕಿದರೂ
ಧನ ನೀಡಿದರೂ ಎಲ್ಲೂ ದೊರೆಯದೆ ಇರುವ
ವಿಜ್ನಾನ ಬೇಧಿಸಲಾಗದೇ ಇರುವ ಸಂಗತಿಯು ||
ಕಾರ್ಯವ ಮುಗಿಸಿದ ನಂತರ ಹೊರಡಲೇ ಬೇಕು
ಮರಳಲಾಗದೇ ಇರುವ ಊರಿನ ಕಡೆಗೆ
ಆಡಿಸುವಾತನು ಆಟವ ಮುಗಿಸಿ ಟಾಟಾ ಮಾಡುವ
ಜೀವನ ನಾಟಕ ಮುಗಿಸುತ ಅವನು ಮಣ್ಣಾಗಿಸುವ
ಏನೂ ನಡೆಯದು ಕಾಲದ ಮುಂದೆ ಮೃತ್ಯುವಿಗೆ ಶರಣಾಗದೆ ||
ಹಿಂದಿನಿಂದ ಎಚ್ಚರಿಸುತಿರಲು
ತಿಳಿಸದೆ ತನ್ನಿಚ್ಚೆಯಂತೆ ಬರುವ
ಎಲ್ಲೆಂದರಲ್ಲಿ ಆವರಿಸುವ ಸಾವಿಗೆ ಹೆದರಿ
ಸಭ್ಯರಾಗಿ ಬದುಕುವರೆಂದೂ ರೀತಿ ನೀತಿಯಲಿ ||
ಪ್ರಾಣ ಹೋಗುವ ಸಮಯಕೆ ತ್ರಾಣವು ಚೀರಲು
ಕಾರಣವೊಂದು ಸಮಯಕೆ ಒದಗಲು
ಪ್ರಾಣ್ಪಕ್ಷಿಯು ಹಾರಲು ತವಕಿಸಿ
ಅದೃಶ್ಯವಾಗುವುದು ಕಾಣದಹಾಗೆ
ದೇಹವೊಂದೇ ಉಳಿವುದು ನಿರ್ಜೀವವಾಗಿ ||
ಸೊಕ್ಕಿನಲಿ ನಡೆದರೂ, ದರ್ಪದಲಿ ಮೆರೆದರೂ
ಎಲ್ಲಾ ಕಾಲಕ್ಕೂ ಸುತ್ತಲೂ ಸಾವಿರ ಜನರಿದ್ದರೂ
ಮೂಲ ಕಾರ್ಯವ ಮರೆತು ಮೋಜಿನಿಂದ ಬದುಕಿದರೂ
ಧನ ನೀಡಿದರೂ ಎಲ್ಲೂ ದೊರೆಯದೆ ಇರುವ
ವಿಜ್ನಾನ ಬೇಧಿಸಲಾಗದೇ ಇರುವ ಸಂಗತಿಯು ||
ಕಾರ್ಯವ ಮುಗಿಸಿದ ನಂತರ ಹೊರಡಲೇ ಬೇಕು
ಮರಳಲಾಗದೇ ಇರುವ ಊರಿನ ಕಡೆಗೆ
ಆಡಿಸುವಾತನು ಆಟವ ಮುಗಿಸಿ ಟಾಟಾ ಮಾಡುವ
ಜೀವನ ನಾಟಕ ಮುಗಿಸುತ ಅವನು ಮಣ್ಣಾಗಿಸುವ
ಏನೂ ನಡೆಯದು ಕಾಲದ ಮುಂದೆ ಮೃತ್ಯುವಿಗೆ ಶರಣಾಗದೆ ||
No comments:
Post a Comment