ಕವನ ಹೇಳುಲೆ ಇಲ್ಲಾ ಕವಿಗೊಷ್ಠಿ ನಡೆಸಲೆ
ಮೆಚ್ಚುಗೆಯನು ತಿಳಿಸಲು ನಿನಗೆ ಬರೆದು ಕಳಿಸಲೆ
ಏಕಾಂತವ ಸೃಷ್ಠಿಸು ಎನೇ ಹೇಳ ಬೇಕೆಂದರೂ
ನಾಲಿಗೆಯಲೆ ಬಚ್ಚಿಟ್ಟಿಕೊ ಗುಟ್ಟೊಂದನು
ಸದುಪಯೋಗಪಡಿಸಿಕೊಳ್ಳು ಬೃಂದಾವನವನು||
ಕನಸೋ ನನಸೋ
ತಿಳಿಯದೆ ಮಿಡಿಯುವ ಮನಸೋ
ನಿನ ಕಾಣದೆ ನನಗೇನೊ ಮುನಿಸು
ಸೇರಲು ಬಯಸಿಹೆನು ಬಾ ನನ್ನ ವರಿಸು ||
ಸ್ಪಷ್ಟವಾಗಿ ಹೇಳು
ಇಷ್ಟವಾದ ವಾಣಿಯನು
ಕಷ್ಟವಾದರೆನಂತೆ ನಿಷ್ಠನಾಗಿ ಚಲಿಸುವೆನು
ದುಷ್ಠನಾಗದೆ ಕಾಮನೆಗೆ ಎಂದೂ||
ಕಣ್ಣೀರ ಒರೆಸುತ ಸಂತೈಸೊ ತಾಯಿ ನೀನು
ಸುಸ್ತಾಗಿ ಬಂದು ಮಡಿಲಲ್ಲಿ ಮಲಗೊ ಮಗು ನಾನು
ಸೊದರಿಯು ಸರಿಮಾಡುವಂತೆ ಸೌಂದರ್ಯವನು
ಮೀರಿಸು ತಪ್ಪೊಪ್ಪನು ಮನವರಿಕೆ ಮಾಡೋ ಗೆಳತಿಯನು
ಸುಖ ದುಃಖವನು ಹಂಚಿಕೊಳ್ಳೊ ಮಡದಿಯಾಗುವೆಯೇನು ||
No comments:
Post a Comment